• search
  • Live TV
keyboard_backspace

ಭಾರತ-ಅಮೆರಿಕ ಪ್ರಯಾಣಿಕರಿಗೆ ಸಿಹಿಸುದ್ದಿ

Google Oneindia Kannada News

ಭಾರತ-ಅಮೆರಿಕ ಪ್ರಯಾಣಿಕರಿಗೊಂದು ಸಹಿಸುದ್ದಿ ಇದೆ, ದಶಕಗಳ ಬಳಿಕ ನ್ಯೂಯಾರ್ಕ್-ದೆಹಲಿ ನಡುವೆ ನೇರ ವಿಮಾನಯಾನ ಪುನರಾರಂಭಿಸಿದೆ.

ಅಮೆರಿಕನ್ ಏರ್‌ಲೈನ್ಸ್ ವಿಮಾನ ಸೇವೆ ಆರಂಭಿಸಿದ್ದು, ಭಾರತ-ಅಮೆರಿಕ ನಡುವೆ ತಡೆರಹಿತ ಸಂಪರ್ಕ ಸಾಧಿಸಬಹುದಾಗಿದೆ, ನ್ಯೂಯಾರ್ಕ್-ದೆಹಲಿ ಏರಲೈನ್ಸ್‌ನ ವಿಮಾನವು ಶನಿವಾರ ರಾತ್ರಿ ಇಂದಿರಾಗಾಂಧಿ ಏರ್‌ಪೋರ್ಟ್‌ಗೆ ಬಂದಿಳಿಯಿತು.

ದಿನದಿಂದ ದಿನಕ್ಕೆ ಅಮೆರಿಕ ಹಾಗೂ ಭಾರತದ ಬಾಂಧವ್ಯ ವೃದ್ಧಿಸುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ-ಭಾರತ ನೇರ ವಿಮಾನ ಸೇವೆಗೆ ಮತ್ತಷ್ಟು ಬೇಡಿಕೆ ಬಂದಿದೆ.

ವಿಮಾನಯಾನ ಸಂಸ್ಥೆಯು ತನ್ನ 304 ಆಸನಗಳುಳ್ಳ ಬೋಯಿಂಗ್ 777 ವಿಮಾನ ಸೇವೆಯನ್ನು ದೆಹಲಿ ಮಾರ್ಗದಲ್ಲಿ ಆರಂಭಿಸಿದೆ. ಈ ವರ್ಷದ ಅಕ್ಟೋಬರ್ ಅಂತ್ಯದಲ್ಲಿ ಈ ವಿಮಾನ ಸೇವೆ ಶುರುವಾಗಬೇಕಿತ್ತು. ಆದರೆ ಅಮೆರಿಕದಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ನವೆಂಬರ್ 8ರಂದು ದೇಶಕ್ಕೆ ಬರಲು ಅನುಮತಿ ನೀಡಿತ್ತು, ಹೀಗಾಗಿ ಸ್ವಲ್ಪ ತಡವಾಗಿ ವಿಮಾನ ಸೇವೆ ಶುರುಮಾಡಲಾಗಿದೆ.

ಅಲ್ಲದೆ, ಜನವರಿ 4,2022ರಿಂದ ಪ್ರಾರಂಭವಾಗಬೇಕಿದ್ದ ಸಿಯಾಟಲ್-ಬೆಂಗಳೂರು ವಿಮಾನ ಸಂಚಾರವನ್ನು ಕೆಲವು ತಿಂಗಳುಗಳ ಕಾಲ ಮುಂದೂಡಲಾಗಿದೆ.
2007ರಲ್ಲಿ ಪ್ರಾರಂಭವಾದ ಚಿಕಾಗೋ-ದೆಹಲಿ ವಿಮಾನ ಸೇವೆ 2012ರಲ್ಲಿ ಅಂತ್ಯಗೊಂಡಿತ್ತು.

ಐದು ತಿಂಗಳ ಬಳಿಕ ಕೆನಡಾದಿಂದ ಭಾರತಕ್ಕೆ ನೇರ ವಿಮಾನ:ಕೆನಡಾದ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾಗಿರುವ ಏರ್ ಕೆನಡಾ, ಸುಮಾರು 5 ತಿಂಗಳ ಬಳಿಕ ಇದೀಗ ಭಾರತ ಹಾಗೂ ಕೆನಡಾ ನಡುವೆ ವಿಮಾನಯಾನವನ್ನು ಪುನರಾರಂಭಿಸಿದೆ.

ವಿಮಾನವು ದೆಹಲಿ ಹಾಗೂ ಟಿರೊಂಟೊ ನಡುವೆ ಹೊಸ ಮಾರ್ಗಸೂಚಿಗಳೊಂದಿಗೆ ಹಾರಾಟ ನಡೆಸಲಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮೋದಿತ ಲಸಿಕೆ ಹಾಕಿಸಿಕೊಂಡ ಪ್ರಯಾಣಿಕರಿಗಷ್ಟೇ ಅನುಮತಿ ನೀಡಲಾಗುತ್ತದೆ. ಜತೆಗೆ 18 ಗಂಟೆಗಳೊಳಗೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿರಬೇಕು.

ಏರ್‌ ಕೆನಡಾ ವಿಮಾನದಲ್ಲಿ ಸಂಚರಿಸಲು ಆರ್‌ಟಿಪಿಸಿಆರ್ ಅಥವಾ ರಾಪಿಡ್ ಪರೀಕ್ಷೆ ಮಾಡಿರುವ ನೆಗೆಟಿವ್ ವರದಿ ಇರಬೇಕು. ಇಂದಿರಾಗಾಂಧಿ ಏರ್‌ಪೋರ್ಟ್‌ನ ಟರ್ಮಿನಲ್ 3ರಲ್ಲಿ ಕೋವಿಡ್ ಪರೀಕ್ಷಾ ಕೇಂದ್ರವಿದೆ.

ಯಾವ್ಯಾವ ಲಸಿಕೆ ಪಡೆದವರು ಕೆನಡಾಗೆ ತೆರಳಲು ಅರ್ಹರು.
-ಫಜರ್-ಬಯೋ ಎನ್‌ಟೆಕ್
-ಮಾಡೆರ್ನಾ
-ಆಸ್ಟ್ರಾಜೆನೆಕಾ
-ಜಾನ್ಸನ್ & ಜಾನ್ಸನ್
ಎಲ್ಲಾ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬೇಕು ಮತ್ತು ಪ್ರಯಣಿಕರ ಮಾಹಿತಿ ಹಾಗೂ ಅಪ್‌ಡೇಟ್‌ಗಳನ್ನು ಪರೀಕ್ಷಿಸಲು ದಯವಿಟ್ಟು ಕೆನಡಾ ಸರ್ಕಾರದ ವೆಬ್‌ಸೈಟ್ www.canada.caಗೆ ಭೇಟಿ ನೀಡಿ.

ಅಂತಾರಾಷ್ಟ್ರೀಯ ಪ್ರಯಾಣ ಮಾರ್ಗಸೂಚಿ ಸಡಿಲಿಕೆ: ಭಾರತದಲ್ಲಿ ಕೊರೊನಾ ಸೋಂಕು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಅಂತಾರಾಷ್ಟ್ರೀಯ ಪ್ರಯಾಣದ ಮಾರ್ಗಸೂಚಿಗಳನ್ನು ಸಡಿಲಗೊಳಿಸಿದೆ.

ವಿಮಾನ ನಿಲ್ದಾಣಗಳಲ್ಲಿ ಪ್ರಯಾಣ ಆರಂಭಕ್ಕೂ ಮೊದಲು ಮತ್ತು ನಂತರದಲ್ಲಿ ಕೊವಿಡ್-19 ಪರೀಕ್ಷೆ ಇಲ್ಲದೇ 5 ವರ್ಷದೊಳಗಿನ ಮಕ್ಕಳು ಪ್ರಯಾಣಿಸುವುದಕ್ಕೆ ಅನುಮತಿ ನೀಡಲಾಗಿದೆ.

ಕೇಂದ್ರ ಸರ್ಕಾರದ ನಿರ್ಧಾರವು ಪ್ರವಾಸೋದ್ಯಮ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಪ್ರಯಾಣಕ್ಕೆ ಪೂರಕವಾಗಲಿದೆ ಎಂಬ ವಿಶ್ವಾಸವಿದೆ. ಹೊಸ ಮಾರ್ಗಸೂಚಿಗಳು ಮತ್ತು ಪ್ರಮಾಣಿತ ಕಾರ್ಯಾಚರಣೆಯ ವಿಧಾನವು ನವೆಂಬರ್ 12ರಿಂದ ಜಾರಿಗೆ ಬಂದಿದೆ.

ಪರಿಷ್ಕೃತ ಆದೇಶದಲ್ಲಿ ಮಕ್ಕಳು ಆಗಮಿಸಿದ ವೇಳೆ ಅಥವಾ ಹೋಮ್ ಕ್ವಾರಂಟೈನ್ ಅವಧಿಯಲ್ಲಿ ಕೊರೊನಾವೈರಸ್ ಸೋಂಕಿನ ಲಕ್ಷಣ ಕಂಡುಬಂದರೆ, ಅವರನ್ನು ಕೊವಿಡ್-19 ಸೋಂಕಿನ ಪರೀಕ್ಷೆಗೆ ಒಳಪಡಿಸಬೇಕು. ಜೊತೆಗೆ ನಿಗದಿಪಡಿಸಿದ ಶಿಷ್ಟಾಚಾರಗಳ ಪ್ರಕಾರ ಚಿಕಿತ್ಸೆ ನೀಡಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. COVID-19 ಸಾಂಕ್ರಾಮಿಕದ ರೋಗವು ಕೆಲವು ಪ್ರಾದೇಶಿಕ ಮಟ್ಟದಲ್ಲಿ ಬದಲಾವಣೆಗಳೊಂದಿಗೆ ಕಡಿಮೆಯಾಗುತ್ತಿದೆ ಎಂಬುದನ್ನೇ ಕೇಂದ್ರ ಸರ್ಕಾರ ಒತ್ತಿ ಹೇಳಿದೆ. ನಿರಂತರವಾಗಿ ಬದಲಾಗುತ್ತಿರುವ ವೈರಸ್‌ನ ಸ್ವರೂಪ ಮತ್ತು SARS-CoV-2 ರೂಪಾಂತರಗಳ ಬಗ್ಗೆ ಅಧ್ಯಯನ ನಡೆಸುವ ಅಗತ್ಯವಿದೆ ಎಂದು ಸರ್ಕಾರ ತಿಳಿಸಿದೆ.

ಹೊಸ ಮಾರ್ಗಸೂಚಿ ಪ್ರಮುಖ ಅಂಶಗಳು:
- ಹೊಸ ಮಾರ್ಗಸೂಚಿಗಳ ಪ್ರಕಾರ, ಪ್ರಯಾಣಿಕರು ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡಿದ್ದರೆ ಮತ್ತು WHO ಅನುಮೋದಿತ COVID-19 ಲಸಿಕೆಗಳನ್ನು ಸ್ವೀಕರಿಸಲು ಅವಕಾಶವಿರುವ ದೇಶಗಳಿಂದ ಬಂದಿದ್ದರೆ ಆ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಅನುಮತಿ ನೀಡಲಾಗುತ್ತದೆ. ಇಂಥ ಪ್ರಯಾಣಿಕರಿಗೆ ಯಾವುದೇ ರೀತಿ ಕ್ವಾರೆಂಟೈನ್ ಇರುವುದಿಲ್ಲ.

-5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆಗಮನದ ಪೂರ್ವ ಮತ್ತು ನಂತರದ ಪರೀಕ್ಷೆಗಳಿಂದ ವಿನಾಯಿತಿ ನೀಡಲಾಗಿದೆ. ಆದಾಗ್ಯೂ, ಆಗಮನದ ಸಮಯದಲ್ಲಿ ಅಥವಾ ಹೋಮ್ ಕ್ವಾರಂಟೈನ್ ಅವಧಿಯಲ್ಲಿ COVID-19 ಗಾಗಿ ರೋಗಲಕ್ಷಣಗಳು ಕಂಡುಬಂದರೆ, ಅವರು ಪರೀಕ್ಷೆಗೆ ಒಳಗಾಗುತ್ತಾರೆ ಮತ್ತು ನಿಗದಿಪಡಿಸಿದ ಪ್ರೋಟೋಕಾಲ್ ಪ್ರಕಾರ ಚಿಕಿತ್ಸೆ ನೀಡುತ್ತಾರೆ, "ಎಂದು ಪರಿಷ್ಕೃತ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

-ಒಂದು ವೇಳೆ ಪ್ರಯಾಣಿಕರು ಯಾವುದೇ ಲಸಿಕೆಯನ್ನು ಹಾಕಿಸಿಕೊಳ್ಳದಿದ್ದರೆ, ಅಂಥವರು ಪ್ರಯಾಣ ಆರಂಭಿಸುವುದಕ್ಕೂ ಮೊದಲು ಮತ್ತು ವಿಮಾನ ನಿಲ್ದಾಣದಿಂದ ನಿರ್ಗಮಿಸುವುದಕ್ಕೂ ಮೊದಲು ಕೊವಿಡ್-19 ಸೋಂಕಿನ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ

-ಆದಾಗ್ಯೂ, ಪ್ರಯಾಣಿಕರು ಆಗಮಿಸಿದ ನಂತರ 14 ದಿನಗಳವರೆಗೆ ತಮ್ಮ ಆರೋಗ್ಯವನ್ನು ಸ್ವಯಂ ಮೇಲ್ವಿಚಾರಣೆ ಮಾಡಿಕೊಳ್ಳಬೇಕಾಗುತ್ತದೆ.

English summary
In a major piece of good news for India-US travellers, the American Airlines has resumed its flight services to the country after almost a decade, reported the Times of India. With this, the India-US nonstop connectivity is set to received a massive boost. The airline’s New York-Delhi inaugural flight landed at the capital’s IGI Airport on Saturday night, the TOI report said.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X