ಭಾರೀ ಮಳೆ; ಈರುಳ್ಳಿ ಬೆಳೆ ಸಂರಕ್ಷಣೆಗೆ ರೈತರಿಗೆ ಸಲಹೆಗಳು

ಬಳ್ಳಾರಿ, ಸೆಪ್ಟೆಂಬರ್ 18; ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇದರ ಪರಿಣಾಮ ಈರುಳ್ಳಿ ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿಯಾಗಿದೆ. ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ಪರದಾಟ ನಡೆಸುತ್ತಿದ್ದಾರೆ.

ಈರುಳ್ಳಿ ಬೆಳೆಯಲ್ಲಿ ಹವಮಾನ ವೈಪರಿತ್ಯ ಹಾಗೂ ಸತತ ಮಳೆಯಿಂದಾಗಿ ಶಿಲೀಂಧ್ರ್ರದ ಬೆಳವಣಿಗೆಯಿಂದ ಕೊಳೆ ರೋಗಭಾಧೆಯು ಕಾಣಿಸಿಕೊಂಡಿದೆ. ಬಳ್ಳಾರಿ ತಾಲೂಕಿನ ವಿವಿಧ ಭಾಗಗಳಲ್ಲಿ ಈ ರೋಗ ಕಂಡು ಬರುತ್ತಿದ್ದು ಈರುಳ್ಳಿ ಬೆಳೆಯುವ ರೈತರು ಈ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಲಹೆ ನೀಡಲಾಗಿದೆ.

ಹೂವಿನಹಡಗಲಿಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಈರುಳ್ಳಿ ಬೆಳೆಯುವ ರೈತರಿಗೆ ಹಲವು ಸಲಹೆಗಳನ್ನು ನೀಡಿದ್ದಾರೆ. ತಜ್ಞರು ನೀಡಿರುವ ಸಲಹೆಗಳನ್ನು ರೈತರು ಪಾಲಿಸಿಕೊಂಡು ಬೆಳೆ ಸಂರಕ್ಷಣೆ ಮಾಡಿಕೊಳ್ಳಬಹುದಾಗಿದೆ.

Weather Change Suggestions To Protect Onion Crop

ಮುಂಜಾಗ್ರತೆ ಕ್ರಮಗಳು: ಪರ್ಯಾಯ ಬೆಳೆ ಪದ್ಧತಿಯನ್ನು ಅನುಸರಿಸಬೇಕು (ಪದೇ ಪದೇ ಈರುಳ್ಳಿ ಬೆಳೆಯನ್ನು ಒಂದೇ ಹೊಲದಲ್ಲಿ ಹಲವು ಬಾರಿ ಬೆಳೆಯುತ್ತಿದ್ದರೆ ಕೊಳೆ ರೋಗ ಭಾಧೆಯು ಹೆಚ್ಚಾಗಿ ಬರುತ್ತದೆ).

ಹೊಲದಲ್ಲಿ ನೀರು ನಿಲ್ಲದಂತೆ ಹಾಗೂ ಹೆಚ್ಚಿನ ತೇವಾಂಶವಿರದಂತೆ ಎಚ್ಚರವಹಿಸಬೇಕು. ಹೆಚ್ಚು ನೀರು ನಿಂತರೆ ಈರುಳ್ಳಿ ಗಡ್ಡೆಗಳು ಕೊಳೆ ರೋಗ ಭಾಧೆಗೆ ಬೇಗನೆ ಹಾಳಾಗುತ್ತವೆ. ಕಳೆ ಬರದಂತೆ ನಿಯಂತ್ರಿಸಬೇಕು ಎಂದು ಸಲಹೆ ನೀಡಲಾಗಿದೆ.

ಟ್ರೈಕೋಡರ್ಮಾ 2 ಕಿ. ಗ್ರಾಂ. ಪ್ರತಿ 100 ಕಿ. ಗ್ರಾಂ. ಕೊಟ್ಟಿಗೆ ಗೊಬ್ಬರಕ್ಕೆ ಚೆನ್ನಾಗಿ ಬೆರಸಿ ಹೊಲದಲ್ಲಿ ಎಲ್ಲಾ ಕಡೆಯು ಸಮಪ್ರಮಾಣದಲ್ಲಿ ಹಾಕಬೇಕು ಇದರಿಂದ ಶೀಲಿಂಧ್ರ್ರ ಬೆಳವಣಿಗೆಯನ್ನು ತಡೆಯುತ್ತದೆ.

Weather Change Suggestions To Protect Onion Crop

Vespa (Propiconazole 13.9% + Difenconazole 13.9% EC) 1ಮೀಲಿ/ ಲೀಟರ್ ನೀರಿಗೆ, Taqat (Captan 70% + Hexaconazole 5% WP) 2ಗ್ರಾಂ/1 ಲೀಟರ್ ನೀರಿಗೆ,Amistar Top (Azoxystrobin 20% + Difenoconazole 12.5% SC) 1ಮೀಲಿ/1 ಲೀಟರ್ ನೀರಿಗೆ,(Tricyclazole 18% + Mancozeb 62% WP) 2ಗ್ರಾಂ/1 ಲೀಟರ್ ನೀರಿಗೆ,
Custodia (Azoxystrobin 11% + Tebuconazole 18.3% w/w SC) 1ಮೀಲಿ/1 ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು.

ಈ ಮೇಲಿನ ಔಷಧಿಗಳಲ್ಲಿ ಒಂದನ್ನು ಬಳಸಿದ ನಂತರ ಮತ್ತೊಮ್ಮೆ ಪುನಾರವರ್ತಿಸದೇ 8 ದಿನಗಳ ಅವಧಿಯಲ್ಲಿ 2 ಬಾರಿ ಸಿಂಪರಣೆಯನ್ನು ಕೈಗೊಂಡು ಈರುಳ್ಳಿ ಬಳೆಯಲ್ಲಿ ಕೊಳೆ ರೋಗ ನಿಯಂತ್ರಿಸಬಹುದು ಎಂದು ರೈತರಿಗೆ ಮಾಹಿತಿ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+