ನಂದಿ ಬೆಟ್ಟಕ್ಕೆ ಹೋಗುವ ಪ್ರವಾಸಿಗರಿಗೆ ಮಹತ್ವದ ಸೂಚನೆ

ಚಿಕ್ಕಬಳ್ಳಾಪುರ, ಜನವರಿ 24 : ನಂದಿ ಬೆಟ್ಟಕ್ಕೆ ಪ್ರವಾಸ ಹೋಗುವ ಜನರು ತೋಟಗಾರಿಕಾ ಇಲಾಖೆ ಸೂಚನೆಯನ್ನು ಗಮನಿಸಬೇಕು. ವಾರದ 5 ದಿನಗಳ ಕಾಲ ನಂದಿ ಬೆಟ್ಟದ ತುದಿಗೆ ವಾಹನ ಪ್ರವೇಶವನ್ನು ನಿಷೇಧಿಸಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ನಂದಿ ಬೆಟ್ಟ ಪ್ರಸಿದ್ಧಿ ಪಡೆದ ಪ್ರವಾಸಿ ತಾಣ. ಪ್ರತಿನಿತ್ಯ ನೂರಾರು ಪ್ರವಾಸಿಗರು ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ವಾರಾಂತ್ಯದಲ್ಲಿ ಬೆಂಗಳೂರು ನಗರದಿಂದಲೇ ಸಾವಿರಾರು ಜನರು ಬೆಟ್ಟಕ್ಕೆ ತೆರಳುತ್ತಾರೆ.

ತೋಟಗಾರಿಕಾ ಇಲಾಖೆ ನಂದಿ ಬೆಟ್ಟದ ನಿರ್ವಹಣೆಯ ಹೊಣೆಯನ್ನು ಹೊತ್ತುಕೊಂಡಿದೆ. ಬೆಟ್ಟಕ್ಕೆ ಆಗಮಿಸುವ ಪ್ರವಾಸಿಗರು ವಾಹನಗಳಲ್ಲಿ ಬರುವುದರಿಂದ ಸಂಚಾರ ದಟ್ಟಣೆ ಮತ್ತು ಮಾಲಿನ್ಯ ಹೆಚ್ಚುತ್ತಿದೆ. ಆದ್ದರಿಂದ, ವಾಹನ ಸಂಚಾರ ನಿಷೇಧ ಮಾಡಲಾಗಿದೆ.

ನಂದಿಬೆಟ್ಟಕ್ಕೆ ಖಾಸಗಿ ವಾಹನಗಳನ್ನು ನಿರ್ಬಂಧಿಸಿ ಕೆಎಸ್ಆರ್‌ಟಿಸಿ ಬಸ್ ಪರಿಚಯ ಮಾಡುವ ಉದ್ದೇಶವೂ ಇದೆ. ಈ ಕುರಿತು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದೆ.

ವಾಹನ ಸವಾರರಿಗೆ ಸೂಚನೆ ಏನು?

ವಾಹನ ಸವಾರರಿಗೆ ಸೂಚನೆ ಏನು?

ನಂದಿ ಬೆಟ್ಟದ ಪ್ರವೇಶ ದ್ವಾರದ ಬಳಿ ಇರುವ ಟಿಕೆಟ್ ಕೌಂಟರ್ ಬಳಿಯಿಂದ ಬೆಟ್ಟದ ತುದಿಗೆ ಸೋಮವಾರದಿಂದ ಶುಕ್ರವಾರದ ತನಕ ವಾಹನಗಳ ಸಂಚಾರ ನಿರ್ಬಂಧ. ಟಿಕೆಟ್ ಕೌಂಟರ್ ಬಳಿ ವಾಹನಗಳ ಪಾರ್ಕಿಂಗ್‌ಗೆ ಅವಕಾಶವನ್ನು ನೀಡಲಾಗಿದೆ.

ಶನಿವಾರ, ಭಾನುವಾರಕ್ಕೆ ಸೂಚನೆ

ಶನಿವಾರ, ಭಾನುವಾರಕ್ಕೆ ಸೂಚನೆ

ಶನಿವಾರ ಮತ್ತು ಭಾನುವಾರ ಸಾವಿರಾರು ಪ್ರವಾಸಿಗರು ನಂದಿ ಬೆಟ್ಟಕ್ಕೆ ಆಗಮಿಸುತ್ತಾರೆ. ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶ ಇಲ್ಲ. ಆದ್ದರಿಂದ, ವಾಹನಗಳಲ್ಲಿ ನಂದಿ ಬೆಟ್ಟದ ತುದಿಗೆ ವಾಹನಗಳಲ್ಲಿ ಸಾಗಲು ಅವಕಾಶ ನೀಡಲಾಗಿದೆ.

ಮುಂದಿನ ದಿನಗಳಲ್ಲಿ ಸಂಪೂರ್ಣ ಬಂದ್

ಮುಂದಿನ ದಿನಗಳಲ್ಲಿ ಸಂಪೂರ್ಣ ಬಂದ್

ಅಧಿಕ ವಾಹನಗಳ ಸಂಚಾರದಿಂದ ಬೆಟ್ಟದ ಪರಿಸರ ಮಲಿನಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಬೆಟ್ಟದ ಬುಡದಲ್ಲಿಯೇ ವಾಹನಗಳನ್ನು ನಿರ್ಬಂಧಿಸಲು ಚಿಂತನೆ ನಡೆಸಲಾಗುತ್ತಿದೆ. ಅಲ್ಲಿಂದ ವಿಶೇಷ ವಾಹನಗಳಲ್ಲಿ ಪ್ರವಾಸಿಗರನ್ನು ಬೆಟ್ಟಕ್ಕೆ ಕರೆದ್ಯೊಯುವ ಚಿಂತನೆ ಇದೆ ಎಂದು ಜಿಲ್ಲಾಡಳಿತ ಹೇಳಿದೆ.

ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಮಾದರಿ

ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಮಾದರಿ

ಅರಣ್ಯಿ ಇಲಾಖೆ ಹಿವಮದ್ ಗೋಪಾಲಸ್ವಾಮಿ ಬೆಟ್ಟದ ಮೇಲೆ ಖಾಸಗಿ ವಾಹನ ನಿರ್ಬಂಧಿಸಿದೆ. ಇದೇ ಮಾದರಿಯಲ್ಲಿ ನಂದಿ ಬೆಟ್ಟದಲ್ಲಿಯೂ ವಾಹನ ನಿರ್ಬಂಧಿಸಿ ಕೆಎಸ್ಆರ್‌ಟಿಸಿ ಬಸ್ ಮೂಲಕ ಪ್ರವಾಸಿಗರನ್ನು ಕರೆದುಕೊಂಡಲು ಚಿಂತನೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+