ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನಿಷ್ಠ ಆಮದು ಬೆಲೆ ಷರತ್ತಿಲ್ಲದೇ ಅಡಿಕೆ ಆಮದಿಗೆ ಕೇಂದ್ರ ಅನುಮತಿ

|
Google Oneindia Kannada News

ಬೆಂಗಳೂರು, ಸೆಪ್ಟಂಬರ್ 29: ಕೇಂದ್ರ ಸರ್ಕಾರ ಭೂತಾನ್‌ನಿಂದ ಪ್ರತಿವರ್ಷ ಕನಿಷ್ಠ ಆಮದು ಬೆಲೆ (ಎಂಐಪಿ)ಯ ಷರತ್ತು ಇಲ್ಲದೆಯೇ 17,000 ಟನ್ ಹಸಿರು ಅಡಿಕೆಯನ್ನು ಆಮದು ಮಾಡಿಕೊಳ್ಳಬಹುದು ಎಂದು ಬುಧವಾರ ಅನುಮತಿ ನೀಡಿದೆ.

ಕೇಂದ್ರ ಸರ್ಕಾರ 2017 ರಲ್ಲಿ ದೇಶದ ರೈತರ ರಕ್ಷಣೆ, ಹಿತ ದೃಷ್ಟಿಯಿಂದ ಪ್ರತಿ ಕೆಜಿ ಹಸಿರು ಅಡಿಕೆ ಆಮದಿನ ಮೇಲೆ ರೂ. 251 ಕನಿಷ್ಠ ಆಮದು ಬೆಲೆ (ಎಂಐಪಿ) ವಿಧಿಸಿತು. ನಂತರ 2018 ರಲ್ಲಿ ಪ್ರತಿ ಕಿಲೋಗ್ರಾಂಗೆ 251 ರೂ.ಗಿಂತ ಹೆಚ್ಚು ಬೆಲೆ ಇದ್ದರೆ ಯಾವುದೇ ರೂಪದ ಅಡಿಕೆ ಆಮದು ಮಾಡಿಕೊಳ್ಳಬಹುದು ಎಂದು ಸರ್ಕಾರ ಹೇಳಿತ್ತು. ಈ ಮಧ್ಯೆ ಬೆಲೆ ಮಿತಿಗಿಂತ ಕಡಿಮೆ ಇದ್ದಲ್ಲಿ ಆಮದು ಮಾಡಿಕೊಳ್ಳುವಂತಿಲ್ಲ ಎಂದು ನಿಷೇಧ ಹೇರಿತ್ತು.

ಅಡಿಕೆ ಬೆಳೆಗೆ ರೋಗ: ಉಚಿತ ಔಷಧಿ, ಸಲಕರಣೆಗೆ ಸರ್ಕಾರದ ಸಬ್ಸಿಡಿಅಡಿಕೆ ಬೆಳೆಗೆ ರೋಗ: ಉಚಿತ ಔಷಧಿ, ಸಲಕರಣೆಗೆ ಸರ್ಕಾರದ ಸಬ್ಸಿಡಿ

ವಿದೇಶಿ ವ್ಯಾಪಾರದ ಮಹಾನಿರ್ದೇಶಕ (ಡಿಜಿಎಫ್‌ಟಿ)ನ ಅಧಿಸೂಚನೆ ಅನ್ವಯ ಭೂತಾನ್‌ನಿಂದ ಜೈಗಾಂವ್ ಭೂ ಕಸ್ಟಮ್ಸ್ ಸ್ಟೇಷನ್ (ಐಎನ್‌ಜೆಜಿಬಿ)ಮೂಲಕ ಆಮದು ಮಾಡಿಕೊಳ್ಳಲು ಅನುಮತಿ ಇದೆ. ಏಕೆಂದರೆ ಈ ಆಮದು ಪ್ರಕ್ರಿಯೆಯು ಮಹಾನಿರ್ದೇಶನಾಲಯ (ಡಿಜಿಎಫ್‌ಟಿ)ದಿಂದ ಮಾನ್ಯ ಮಾಡಿರುವ ನೋಂದಣಿ ಪ್ರಮಾಣಪತ್ರದ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಪ್ರತಿ ವರ್ಷ ಕನಿಷ್ಠ ಆಮದು ಬೆಲೆ ಸ್ಥಿತಿಯಿಲ್ಲದೆ 17,000 ಟನ್ ತಾಜಾ (ಹಸಿರು) ಅಡಿಕೆಯನ್ನು ಜೈಗಾಂವ್ ಭೂ ಕಸ್ಟಮ್ಸ್ ಸ್ಟೇಷನ್ ಮೂಲಕ ಆಮದಿಗೆ ಅವಕಾಶ ಇದೆ ಕೊಡಲಾಗಿದೆ.

Union Govt allowed for without MIP import green Arecanut from Bhutan

ಮಹಾನಿರ್ದೇಶನಾಲಯವು 2022-23ನೇ ಪ್ರಸಕ್ತ ಸಾಲಿನ ದ್ವಿತೀಯಾರ್ಧದಲ್ಲಿ ಭೂತಾನ್‌ನಿಂದ ಕನಿಷ್ಟ ಆಮದು ಬೆಲೆ ಇಲ್ಲದೇ 8,500 ಮೆಟ್ರಿಕ್ ಟನ್‌ನಷ್ಟು ತಾಜಾ (ಹಸಿರು) ಅಡಿಕೆಯನ್ನು ಆಮದು ಮಾಡಿಕೊಳ್ಳಬಹುದು ಎಂದು ಹೇಳಿದೆ. ಮುಂದಿನ ವರ್ಷ ಅಂದರೆ 2023 ಮತ್ತು 24ನೇ ಸಾಲಿನಲ್ಲಿ ಒಟ್ಟು 17,000 ಮೆಟ್ರಿಕ್ ಟನ್ ಆಮದು ಮಾಡಿಕೊಳ್ಳಬಹುದು ಈಗಾಗಲೇ ತಿಳಿಸಲಾಗಿದೆ. ಆದರೆ ಆಮದಾರರು ಅಡಿಕೆ ಆಮದಿಗೂ ಮುನ್ನ ತಮ್ಮ ಬಳಿ ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯದಿಂದ ಪಡೆದ ನೋಂದಣಿ ಪ್ರಮಾಣಪತ್ರ (ಆರ್‌ಸಿ) ಹೊಂದಿರುವುದು ಕಡ್ಡಾಯವಾಗಿದೆ.

ಅಡಿಕೆ ಮೇಲಿನ ಜಿಎಸ್‌ಟಿ ರದ್ದುಗೊಳಿಸಿ, ಆಮದು ಮೇಲೆ ಸುಂಕ ಹೆಚ್ಚಿಸಿ: ಸಿದ್ದರಾಮಯ್ಯ ಆಗ್ರಹಅಡಿಕೆ ಮೇಲಿನ ಜಿಎಸ್‌ಟಿ ರದ್ದುಗೊಳಿಸಿ, ಆಮದು ಮೇಲೆ ಸುಂಕ ಹೆಚ್ಚಿಸಿ: ಸಿದ್ದರಾಮಯ್ಯ ಆಗ್ರಹ

ನೋಂದಣಿ ಪ್ರಮಾಣಪತ್ರ ಅಡಿಯಲ್ಲಿ ಗರಿಷ್ಠ 500 ಮೆಟ್ರಿಕ್ ಟನ್‌ಗಳಷ್ಟು ತಾಜಾ ಅಡಿಕೆ ಆಮದಿಗೆ ಮಾತ್ರ ಅವಕಾಶ ಇದೆ. ಹೆಚ್ಚುವರಿಗೆ ಆಮದು ಅಗತ್ಯವಿದ್ದಲ್ಲಿ ಅದಕ್ಕಾಗಿ ಹೆಚ್ಚುವರಿ ನೋಂದಣಿ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಕೆ ಅವಕಾಶ ಇದೆ. ಈ ನೋಂದಣಿ ಪ್ರಮಾಣ ಪತ್ರವು ಗರಿಷ್ಠ 6 ತಿಂಗಳ ಅವಧಿಗೆ ಅಥವಾ ಹಣಕಾಸು ವರ್ಷದ ಅಂತ್ಯದವರೆಗೂ ಮಾನ್ಯವಾಗಿರುತ್ತದೆ.

Union Govt allowed for without MIP import green Arecanut from Bhutan

ಭಾರತ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ 2006 ರಲ್ಲಿ ದಕ್ಷಿಣ ಏಷ್ಯಾ ಮುಕ್ತ ವ್ಯಾಪಾರ ಒಪ್ಪಂದವನ್ನು ಜಾರಿಗೆ ತರಲಾಯಿತು. ಈ ಒಪ್ಪಂದದ ಅಡಿಯಲ್ಲಿ ಒದಗಿಸಲಾದ ಕಡಿಮೆ ಆಮದು ಸುಂಕದ ಲಾಭ ಬಳಸಿಕೊಂಡು ವಿದೇಶಗಳಿಂದ ಹೆಚ್ಚೆಚ್ಚು ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ಭಾರತದೊಳಗಿನ ದೇಶೀಯ ಉತ್ಪಾದಕರು ಈಗಾಗಲೇ ಆಮದು ಹೆಚ್ಚಾಗಿದ್ದಕ್ಕೆ ಅಸಮಧಾನ ವ್ಯಕ್ತಪಡಿಸಿದ್ದರು. ಒಟ್ಟು ಅಡಿಕೆಯ ಉತ್ಪಾದನೆಯಲ್ಲಿ ಭಾರತದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ, ಕೇರಳ ಮತ್ತು ಅಸ್ಸಾಂ ರಾಜ್ಯಗಳು ನಂತರದ ಸ್ಥಾನದಲ್ಲಿವೆ ಎಂದು ಅಂಕಿ ಅಂಶಗಳು ತಿಳಿಸಿವೆ.

English summary
Union government allowed for without Minimum Import Price (MIP) import green arecanut from Bhutan on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X