ಕೇಂದ್ರ ಬಜೆಟ್ : ಯಾವುದು ತುಟ್ಟಿ, ಸೋವಿ

ಕಿರಿತ್ ಪಾರಿಖ್ ಸಮಿತಿ ಶಿಫಾರಸುಗಳನ್ನು ಕೇಂದ್ರ ಒಪ್ಪಿಕೊಂಡಿರುವುದರಿಂದ ತೈಲೋತ್ಪನ್ನಗಳ ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರಿಗೆ ತಟ್ಟಲಿದೆ. ಇದು ನೇರವಾಗಿ ಇತರ ಪದಾರ್ಥಗಳ ಬೆಲೆ ಏರಿಕೆಯಲ್ಲಿ ಪರ್ಯವಸಾನವಾಗಲಿದೆ. ಪೆಟ್ರೋಲ್ ದರದಲ್ಲಿ ಲೀಟರಿಗೆ 1 ರು. ಹೆಚ್ಚಿಸಲು ಕೇಂದ್ರ ಅನುಮತಿ ನೀಡಿದೆ. ಆದರೆ, ಪೆಟ್ರೋಲ್ ಬಳಕೆ ಕಡಿಮೆ ಮಾಡಲು ಎಲೆಕ್ಟ್ರಾನಿಕ್ ಕಾರುಗಳ ಬೆಲೆಯಲ್ಲಿ ಇಳಿಕೆ ಕಂಡುಬರಲಿದೆ. ದೊಡ್ಡ ಕಾರುಗಳ ಬೆಲೆ ಕೂಡ ಏರಲಿದ್ದು, ಅದನ್ನು ಕೊಳ್ಳುವುದು ಶ್ರೀಮಂತರಿಗೆ ಮಾತ್ರ ಸೀಮಿತವಾಗಲಿದೆ.
ತೈಲೋತ್ಪನ್ನಗಳ ಬೆಲೆ ಏರಿಸಿದ್ದನ್ನು ವಿರೋಧಿಸಿ ಬಿಜೆಪಿ ಅಂಗ ಪಕ್ಷಗಳು ಮತ್ತು ಎಡಪಕ್ಷಗಳು ಸಭಾತ್ಯಾಗ ಮಾಡಿದವು. ತೈಲೋತ್ಪನ್ನಗಳ ಬೆಲೆ ಇಳಿಸಬೇಕೆಂದು ಪಟ್ಟು ಹಿಡಿದಿವೆ. ಬೆಲೆ ಇಳಿಸಲಿದ್ದರೆ ಹೋರಾಟಕ್ಕಿಳಿಯುವುದಾಗಿ ವಿರೋಧ ಪಕ್ಷಗಳು ಎಚ್ಚರಿಕೆ ನೀಡಿವೆ.
ಸಿಗರೇಟ್ ಮತ್ತು ಸಿಗಾರ್ ಮೇಲಿನ ಸುಂಕವನ್ನು ಹೆಚ್ಚಿಸಲಾಗಿರುವುದರಿಂದ ಸಿಗರೇಟ್ ತುಟ್ಟಿಯಾಗಿದ್ದು ಧೂಮಪ್ರಿಯರ ತುಟಿಯನ್ನು ಸುಡಲಿದೆ. ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂ ಸುಂಕದಲ್ಲಿಯೂ ಏರಿಕೆ ಮಾಡಲಾಗಿದ್ದು, ಚಿನ್ನ 10 ಗ್ರಾಂಗೆ 100 ರು. ಮತ್ತು ಬೆಳ್ಳಿ ಕೆಜಿಗೆ 500 ರು.ಯಷ್ಟು ತುಟ್ಟಿಯಾಗಲಿವೆ.
ಮುಂಗಡಪತ್ರದಲ್ಲಿ ಕೃಷಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು ಕೃಷಿ ಉಪಕರಣಗಳ ಬೆಲೆ ಇಳಿಯಲಿದೆ. ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ತೀವ್ರ ಇಳಿತ ಕಂಡುಬಂದಿರುವುದರಿಂದ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಯಾವುದು ತುಟ್ಟಿ
ಪೆಟ್ರೋಲ್
ಡೀಸೆಲ್
ಸಿಗರೇಟ್, ಸಿಗಾರ್
ಐಷಾರಾಮಿ ದೊಡ್ಡ ಕಾರು
ಸಿಮೆಂಟ್
ಸಿಗರೇಟ್
ಎಸಿ
ಫ್ರಿಜ್
ಟಿವಿ
ಚಿನ್ನ, ಬೆಳ್ಳಿ, ಪ್ಲಾಟಿನಂ
ಯಾವುದು ಸೋವಿ
ಸಿಎಫ್ಎಲ್ ಬಲ್ಬ್
ಕೃಷಿ ಉಪಕರಣ
ಸಿಡಿ
ಆಟಿಕೆಗಳು
ಎಲೆಕ್ಟ್ರಿಕ್ ಕಾರು
ದೇಶೀಯ ಮೊಬೈಲ್
ವೈದ್ಯಕೀಯ ಉಪಕರಣಗಳು
ಸೋಲಾರ್ ಪೇನಲ್
2010ರ ಕೇಂದ್ರ ಬಜೆಟ್ ನ ಮುಖ್ಯಾಂಶಗಳು












Click it and Unblock the Notifications