ನಾಗಾರ್ಜುನ ದೇವೇಗೌಡರ ಕೊಡುಗೆ : ಕೋಡಿಹಳ್ಳಿ
ಉಡುಪಿ,
ಮಾ. 21: ದೇವೇಗೌಡನವರು ಪ್ರಧಾನಿಯಾಗಿದ್ದ ಕಾಲದಲ್ಲಿ ಈ ಭಾಗದ ಜನರಿಗೆ ನೀಡಿದ ಒಲವಿನ ಕಾಣಿಕೆಯೇ ನಾಗಾರ್ಜುನ ಯೋಜನೆ. ಆದರೆ, ದುರಂತ ಎಂದರೆ, ಈ ಯೋಜನೆಯನ್ನು ಕೈ ಬಿಡದೆ ನಂತರ ಕಾಂಗ್ರೆಸ್, ಬಿಜೆಪಿ ಸರ್ಕಾರಗಳು ಪೋಷಿಸಿ ಕೊಂಡು ಬಂದಿವೆ. ಯುಪಿಸಿಎಲ್ ಧೂಳಿ ಕಣ ವಿವಾದದಲ್ಲಿ ಯಾವುದೇ ಮಾತುಕತೆ ಅವಶ್ಯಕತೆ ಇಲ್ಲ. ಈ ಯೋಜನೆಗೆ ಬೀಗ ಜಡಿಯಲು ರಾಜ್ಯದ ರೈತ, ಯುವ ಮತ್ತು ಮಹಿಳಾ ಶಕ್ತಿ ಸಂಘಟಿತರಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಕರೆ ನೀಡಿದರು. id="toptextpromo">ಪಡುಬಿದ್ರಿ
ಸಮೀಪ ರೈತ ಸಂಘಟನೆಯ ವಿವಿಧ ಊರುಗಳ ಘಟಕಗಳನ್ನು ಉದ್ಘಾಟಿಸಿ ನಂತರ ಮಾತನಾಡುತ್ತಿದ್ದರು. ಮಾಜಿ ಪ್ರಧಾನಿ ದೇವೇಗೌಡರ ಮಗ ವಿದೇಶಿ ಕಂಪೆನಿಗಳಿಗೆ ಮಾತು ಕೊಟ್ಟಂತೆ ಬೆಂಗಳೂರಿನ ಕಂಪೆನಿಗಳಿಗೆ ವಿದ್ಯುತ್ ಸರಬರಾಜು ಮಾಡಲು ಈ ಯೋಜನೆಯನ್ನು ಪ್ರಾರಂಭಿಸಲಾಯಿತೇ ಹೊರತು ಇಲ್ಲಿಯ ಜನರ ಅವಶ್ಯಕತೆಗಳಿಗಾಗಿ ಅಲ್ಲ ಎಂದರು. ಯುರೋಪ್, ಅಮೆರಿಕಾಗಳಂತಹ ರಾಷ್ಟ್ರಗಳಲ್ಲಿ ತಿರಸ್ಕೃತವಾದ ಮತ್ತು ಕಳಚಲ್ಪಟ್ಟ ಯೋಜನೆ ಸ್ಥಾವರಗಳನ್ನು ಪಶ್ಚಿಮಘಟ್ಟದ ತಪ್ಪಲಿನಲ್ಲಿ ಸ್ಥಾಪಿಸ ಹೊರಟಿರುವ ರಾಜಕಾರಣಿಗಳನ್ನು ಬೈಯ್ದು ಪ್ರಯೋಜನವಿಲ್ಲ. ಜನತೆ ಒಗ್ಗಟ್ಟಾಗಿ ತಿರುಗಿಬೀಳಬೇಕು ಎಂದರು. id='are-slot-1' class='oiad oi-axt oiadv'> id='top-searched-articles'>ಇಲ್ಲಿನ
ಗದ್ದೆ, ಬಯಲು, ಹಳ್ಳಕೊಳ್ಳ, ನಿಸರ್ಗ ಎಲ್ಲಾ ಜನರಿಗೆ ಸೇರಿದ್ದು. ಪ್ರಗತಿಯ ಹೆಸರಲ್ಲಿ ಅವನ್ನು ಬಳಸಿಕೊಳ್ಳಬೇಕಾದರೆ, ಜನರಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಬೇಕು. ಆ ಜವಾಬ್ದಾರಿಯನ್ನು ಕಂಪೆನಿ ಮತ್ತು ಸರ್ಕಾರಗಳು ಮರೆತಿವೆ. ಯಾವನೇ ಅಪ್ಪ, ಆಚಾರ್ಯರ ಪಾಳೇಗಾರಿಕೆಗೂ ಬಗ್ಗದೆ ಇಂದಲ್ಲ ನಾಳೆ ಯಾವ ತಂತ್ರಗಾರಿಕೆ, ಹೋರಾಟ ಅನುಸರಿಯಾದರೂ ಈ ಕಂಪೆನಿ ಯನ್ನು ಬಂದ್ ಮಾಡಿಯೇ ಸಿದ್ಧ ಎಂದು ಚಂದ್ರಶೇಖರ್ ಘೋಷಿಸಿದರು.











Click it and Unblock the Notifications