ಕೃಷಿ ವಿವಿಯಿಂದ ಇಬ್ಬರು ಕೃಷಿಕರಿಗೆ ಎಚ್‌ಡಿ ದೇವೇಗೌಡ ಹೆಸರಲ್ಲಿ ಪ್ರಶಸ್ತಿ

ಬೆಂಗಳೂರು, ನವೆಂಬರ್ 8: ಬೆಂಗಳೂರು ಕೃಷಿ ವಿಶ್ವವಿದ್ಯಾಯವು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಹೆಸರಲ್ಲಿ ಸಾಧಕ ರೈತರಿಬ್ಬರಿಗೆ ಪ್ರಶಸ್ತಿಯನ್ನು ನೀಡುತ್ತಿದೆ.

ದೀಪಾವಳಿ ವಿಶೇಷ ಪುರವಣಿ

ಈ ಪ್ರಶಸ್ತಿಯ ಮೊತ್ತವನ್ನು ಬೆಂಗಳೂರಿನ ರಂಗಚೇತನ ಸಂಸ್ಕೃತಿ ಕೇಂದ್ರವು ಭರಿಸಲಿದ್ದು, ಇದಕ್ಕಾಗಿ ದತ್ತಿ ನಿಧಿಯನ್ನು ಸ್ಥಾಪಿಸಲಾಗಿದೆ. ಇತ್ತೀಚೆಗೆ ಸಂಸ್ಥೆಯು ವಿವಿ ಕುಲಪತಿಗೆ ಪತ್ರ ಬರೆದು ಪ್ರಶಸ್ತಿ ನೀಡುವ ಪ್ರಸ್ತಾಪವನ್ನು ಮುಂದಿಟ್ಟಿತ್ತು ಇದಕ್ಕೆ ಒಪ್ಪಿಗೆ ದೊರೆತಿದ್ದು, 2018-19ನೇ ಸಾಲಿನಿಂದಲೇ ವಾರ್ಷಿಕ ಪ್ರಶಸ್ತಿ ರೂಪದಲ್ಲಿ ವಿತರಿಸಲು ಮುದ್ರೆ ದೊರೆತಿದೆ. ಈಗಿರುವ ದಿವಂಗತ ಸಿ ಬೈರೇಗೌಡ ಸ್ಮಾರಕ ಪ್ರಶಸ್ತಿಯ ಮಾನದಂಡಗಳನ್ನೇ ಹೊಸ ಪ್ರಶಸ್ತಿಗೂ ಅನ್ವಯಿಸಲಾಗುತ್ತದೆ.

UAS to confer best farmer award in the name of H.D. Devegowda

ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ಒಬ್ಬ ರೈತ ಹಾಗೂ ಒಬ್ಬ ರೈತ ಮಹಿಳೆಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ತಲಾ 25 ಸಾವಿರ ನಗದು ಮೊತ್ತದ ರಾಜ್ಯ ಮಟ್ಟದ ಪ್ರಶಸ್ತಿಯು ವಾರ್ಷಿಕ ಕೃಷಿ ಮೇಳದಲ್ಲಿ ನೀಡಲಾಗುತ್ತದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಯುಎಎಸ್-ಬಿ ಕುಲಪತಿ ಡಾ ಎಸ್ ರಾಜೇಂದ್ರಪ್ರಸಾದ್ 2018-19ನೇ ಸಾಲಿನಿಂದ ರಂಗಚೇತನ ಸಂಸ್ಕೃತಿ ಕೇಂದ್ರದ ಸಹಯೋಗದಲ್ಲಿ ಪ್ರಶಸ್ತಿ ವಿತರಣೆಗೆ ಚಾಲನೆ ಸಿಗಲಿದೆ ನವೆಂಬರ್ 15ರಿಂದ ಜಿಕೆವಿಕೆ ಕ್ಯಾಂಪಸ್‌ನಲ್ಲಿ ಕೃಷಿ ಮೇಳ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+