ಮನೆಗೆ ಸೇರುವ ಬದಲು ಮಸಣ ಸೇರಿದ ಎಚ್ ಡಿ ಕೋಟೆಯ ನತದೃಷ್ಟ ರೈತ

ಜಮೀನಿನಲ್ಲಿ ಕೆಲಸ ಮುಗಿಸಿ ಮನೆಗೆ ಹೊರಟಿದ್ದ ಎಚ್.ಎ.ನಿಂಗರಾಜು ಎಂಬ ರೈತ ಅಪಘಾತಕ್ಕೀಡಾಗಿ ಮಸಣ ಸೇರಿದ ದುರಂತ ಘಟನೆ ಎಚ್ ಡಿ ಕೋಟೆಯ, ಹೊಸಹೊಳಲು ಗ್ರಾಮದಲ್ಲಿ ನಡೆದಿದೆ.

ಚಾಮರಾಜನಗರ, ಮೇ 18: ಚಾಮರಾಜನಗರ ಜಿಲ್ಲೆ ಎಚ್.ಡಿ.ಕೋಟೆ: ರೈತನೊಬ್ಬ ಜಮೀನಿನಲ್ಲಿ ಕೆಲಸ ಮುಗಿಸಿ ಮನೆಯತ್ತ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರು ಮಾನಂದವಾಡಿ ರಸ್ತೆಯ ಹೊಸಹೊಳಲು ಗ್ರಾಮದ ಸಮೀಪ ನಡೆದಿದೆ.

ಹೊಸಮಾಳ ಗ್ರಾಮದ ನಿವಾಸಿ ಎಚ್.ಎ.ನಿಂಗರಾಜು (40) ಮೃತಪಟ್ಟ ದುರ್ದೈವಿ. ಇವರು ತಮ್ಮ ಜಮೀನಿನಲ್ಲಿ ಕೆಲಸ ಮುಗಿಸಿ ಬೈಕ್ ನಲ್ಲಿ ಮನೆ ಕಡೆ ಹೊರಟಿದ್ದರು. ಮಾನಂದವಾಡಿ ರಸ್ತೆಯ ಹೊಸಹೊಳಲು ಗ್ರಾಮದ ಬಳಿ ಸಂಜೆ 4.15ರ ಸಮಯದಲ್ಲಿ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ನಲ್ಲಿದ್ದ ನಿಂಗರಾಜು ಅವರು ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟ್ಪಿದ್ದಾರೆ.[ಚಾಮರಾಜನಗರ: ಮದುವೆಗೆಂದು ಹೊರಟ ಮೂವರು ಮಸಣ ಸೇರಿದರು]

Tragic accident in Chamarajanagar, a farmer dies

ಈ ಘಟನೆ ನಡೆದ ಕಾರಣ ಸಂಚಾರ ಅಸ್ತವ್ಯಸ್ತವಾಗಿತ್ತು, ನಂತರ ಸ್ಥಳಕ್ಕೆ ಬಂದ ಬೀಚನಹಳ್ಳಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು, ಘಟನೆ ಕಾರಣನಾದ ಬಸ್ ಚಾಲಕ ಪರಾರಿಯಾಗಿದ್ದು, ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.[ಚಾಮರಾಜನಗರ: ಎಸ್ಸೆಸ್ಸೆಲ್ಸಿಯಲ್ಲಿ ಫೇಲಾದ ವಿದ್ಯಾರ್ಥಿನಿ ನೇಣಿಗೆ ಶರಣು]

{promotion-urls}

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+