ಸೇವಂತಿಗೆ ಬೆಳೆಯಲ್ಲಿ ಕೀಟ, ರೋಗ ಬಾಧೆ; ಹತೋಟಿಗೆ ಸಲಹೆಗಳು
ಚಿತ್ರದುರ್ಗ, ಜುಲೈ 21; ಸೇವಂತಿಗೆ ಬೆಳೆಯಲ್ಲಿ ಸೊರಗು ರೋಗ ಮತ್ತು ಥ್ರಿಪ್ಸ್ ಕೀಟದ ಬಾಧೆ ಹೆಚ್ಚಾಗಿರುವುದು ಕಂಡುಬಂದಿರುತ್ತದೆ. ಮಳೆಗಾಲದ ಹಿನ್ನಲೆಯಲ್ಲಿ ಕೃಷಿ ಇಲಾಖೆಯ ವಿಜ್ಞಾನಿಗಳು ರೈತರ ಹೊಲಗಳಿಗೆ ಭೇಟಿ ನೀಡಿ ನಿಯಂತ್ರಣ ಕ್ರಮಗಳನ್ನು ಸೂಚಿಸಿದ್ದಾರೆ.
ಚಿತ್ರದುರ್ಗ ತಾಲ್ಲೂಕಿನ ತುರುವನೂರು ಹೋಬಳಿಯ ಹುಣಸೆಕಟ್ಟೆ ಗ್ರಾಮದಲ್ಲಿ ಸೇವಂತಿಗೆ ಬೆಳೆಯಲ್ಲಿ ಕೀಟ ಮತ್ತು ರೋಗ ಬಾಧೆಗಳು ಕಂಡು ಬಂದಿವೆ. ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಎಸ್. ಓಂಕಾರಪ್ಪ, ಡಾ. ಎಲ್. ಹನುಮಂತರಾಯ, ಕೀಟ ತಜ್ಞರು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಗ್ರಾಮದ ರೈತರ ಸೇವಂತಿ ಬೆಳೆಗಳನ್ನು ವೀಕ್ಷಣೆ ಮಾಡಿದರು.

ಥ್ರಿಪ್ಸ್ ಕೀಟ ನಿಯಂತ್ರಣಕ್ಕೆ ಜೈವಿಕ ನಿಯಂತ್ರಣ ಕ್ರಮಗಳು; ಕೀಟಕ್ಕೆ ಉದ್ದನೆಯ ಬೆಳೆಯಾದ ಜೋಳ ಮತ್ತು ಸಜ್ಜೆ ಬೆಳೆಗಳನ್ನು ಬದುವಿನಲ್ಲಿ ಮತ್ತು 6 ಸಾಲಿನ ನಂತರ ಹಾಕಬೇಕು. ಹಳದಿ ಅಥವಾ ನೀಲಿ ಅಂಟು ಬಲೆಯನ್ನು ಉಪಯೋಗಿಸಬೇಕು. 1 ಎಕರೆಗೆ 40 ಅಂಟು ಬಲೆಗಳನ್ನು ಗಿಡದ ಎತ್ತರಕ್ಕಿಂತ 6 ಇಂಚು ಎತ್ತರದಲ್ಲಿ ಕಟ್ಟಬೇಕು. ಜೈವಿಕ ಹತೋಟಿ ಕ್ರಮಗಳಲ್ಲಿ ಒಂದಾದ ಲೇಕನೆಸಿಲಿಯಂ ಲೇಕನೆಯ 5 ಗ್ರಾ 1 ಲೀಟರ್ ನೀರಿಗೆ ಸಿಂಪಡಿಸಬೇಕು.
ರಾಸಾಯನಿಕ ನಿಯಂತ್ರಣ ಕ್ರಮಗಳಾದ ರಾಸಾಯನಿಕ ಕೀಟ ನಾಶಕಗಳಾದ ಇಮಿಡಾ ಕ್ಲೋ ಫ್ರೀಡ್ 0.5 ಎಂಎಲ್ ಒಂದು ಲೀಟರ್ ನೀರಿಗೆ ಸಿಂಪಡಿಸಬೇಕು ಅಥವಾ ಅಸಿಟೋಮೋ ಪ್ರಿಡ್ 0.5 ಎಂಎಲ್ ಒಂದು ಲೀಟರ್ ನೀರಿಗೆ ಸಿಂಪಡಿಸಬೇಕು ಅಥವಾ ತೈಯೋಮಿತೋಗಾನ್ 0.4 ಗ್ರಾಂ ಒಂದು ಲೀಟರ್ ನೀರಿಗೆ ಸಿಂಪಡಿಸಬೇಕು ಅಥವಾ ಫೀಟ್ರೋನಿಲ್ 1 ಎಂಎಲ್ ಒಂದು ಲೀಟರ್ ನೀರಿಗೆ ಸಿಂಪಡಿಸಬೇಕು.
ಕೀಟ ನಾಶಕಗಳನ್ನು ಸಿಂಪಡಿಸುವಾಗ ಮೇಲ್ದಂಡ ಕೀಟನಾಶಕಗಳು ಪುನರಾವರ್ತನೆಯಾಗಬಾರದು ಹಾಗೂ ಒಂದೇ ಬೆಳೆಯನ್ನು ಸತತವಾಗಿ ಒಂದೇ ಜಾಗದಲ್ಲಿ ಬೆಳೆಯಬಾರದು,
ಸೊರಗು ರೋಗದ ನಿಯಂತ್ರಣ ಹೇಗೆ?; ಇನ್ನು ಬೆಳೆಯಲ್ಲಿ ಸೊರಗು ರೋಗ ನಿಯಂತ್ರಣಕ್ಕೆ ರಾಸಾಯನಿಕ ನಿಯಂತ್ರಣ ಕ್ರಮಗಳನ್ನು ಸಹ ಸೂಚಿಸಲಾಗಿದೆ. ರೋಗಕ್ಕೆ ಪ್ರೊರೀಪಿಕೋನಜಾಲ್ 2.00 ಎಂಎಲ್ ಒಂದು ಲೀಟರ್ ನೀರಿಗೆ ಬೆರಸಿ ಸೇವಂತಿಗೆ ಗಿಡದ ಬುಡಕ್ಕೆ ನೆನೆಯುವ ಹಾಗೆ ಹಾಕಬೇಕು. ಉಪಚಾರ ಮಾಡಿದ ನಂತರ 3 ದಿನಗಳು ನೀರು ಹಾಯಿಸಬಾರದು ಮತ್ತು ನೀರನ್ನು ಮಿತವಾಗಿ ಬಳಸಿ ಬುಡದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು.
ಜೈವಿಕ ನಿಯಂತ್ರಣ ಕ್ರಮಗಳನ್ನು ಸಹ ಅನುಸರಿಸಬಹುದು. ನಾಟಿ ಮಾಡುವ ಸಮಯದಲ್ಲಿ ಬೇವಿನ ಹಿಂಡಿ, 250 ಕೆಜಿ 1 ಎಕರೆಗೆ, ಟ್ರೋಕೋರ್ಡಮ್ 1 ಕೆಜಿಯನ್ನು 100 ಕೆಜಿ ಕೋಟ್ಟಿಗೆ ಗೊಬ್ಬರಕ್ಕೆ ಬೆರಸಿ 20 ರಿಂದ 30 ದಿನಗಳ ಕಾಲ ನೆರಳಿನಲ್ಲಿ ಬಿಟ್ಟು ನಂತರ ಹದವಾಗಿ ಇರುವ ಜಮೀನಿಗೆ ಬಳಸಬೇಕು ಮತ್ತು ಜೀವಾಮೃತವನ್ನು ಬಳಸಿದರೆ, ಮುಂದೆ ಬರುವ ಸೊರಗು ರೋಗವನ್ನು ಹತೋಟಿ ಮಾಡಬಹುದು.












Click it and Unblock the Notifications