ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

11ನೇ ಕೃಷಿ ಗಣತಿ ಪ್ರಾರಂಭ: ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌ಗಳ ಮೂಲಕ ದತ್ತಾಂಶ ಸಂಗ್ರಹ

|
Google Oneindia Kannada News

ನವದೆಹಲಿ,ಜುಲೈ. 29: ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಗುರುವಾರ ಹನ್ನೊಂದನೇ ಕೃಷಿ ಗಣತಿಗೆ ಚಾಲನೆ ನೀಡಿದ್ದಾರೆ.

ಇದೇ ಮೊದಲ ಬಾರಿಗೆ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳ ಮೂಲಕ ಹಿಡುವಳಿ ಸೇರಿದಂತೆ ವಿವಿಧ ಮಾನದಂಡಗಳ ಮೇಲೆ ದತ್ತಾಂಶ ಸಂಗ್ರಹಿಸಲಾಗುತ್ತದೆ. ಹನ್ನೊಂದನೇ ಕೃಷಿ ಜನಗಣತಿಯ (2021-22) ಕ್ಷೇತ್ರ ಕಾರ್ಯವು ಆಗಸ್ಟ್ 2022 ರಲ್ಲಿ ಪ್ರಾರಂಭವಾಗಲಿದೆ ಎಂದು ಕೃಷಿ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

 ಚಾಮರಾಜನಗರದಲ್ಲಿ ಟೊಮೆಟೋ ಬೆಲೆ 3 ರೂಪಾಯಿ ಕೆಜಿಗೆ ಕುಸಿತ; ಕಂಗಾಲಾದ ರೈತ ಚಾಮರಾಜನಗರದಲ್ಲಿ ಟೊಮೆಟೋ ಬೆಲೆ 3 ರೂಪಾಯಿ ಕೆಜಿಗೆ ಕುಸಿತ; ಕಂಗಾಲಾದ ರೈತ

ಕೃಷಿ ಗಣತಿಯನ್ನು ಪ್ರತಿ 5 ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. ಇದನ್ನು ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ವಿಳಂಬಗೊಂಡಿತ್ತು. ಬಳಿಕ ಈಗ ಕೈಗೊಳ್ಳಲಾಗುತ್ತಿದೆ ಕೃಷಿ ಸಚಿವಾಲಯ ತಿಳಿಸಿದೆ. ಸಚಿವಾಲಯವು 1970- 71ರಿಂದ ಕೃಷಿ ಗಣತಿ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಜನಗಣತಿಯ ಹತ್ತನೇ ಆವೃತ್ತಿಯನ್ನು 2015-16ರರಲ್ಲಿ ನಡೆಸಲಾಗಿತ್ತು.

The 11th Agricultural Census 2021-22 has been launched by the Central Government

ಕೃಷಿ ಗಣತಿಯು ಜಮೀನುಗಳ ಸಂಖ್ಯೆ ಮತ್ತು ಪ್ರದೇಶ, ಅವುಗಳ ಗಾತ್ರ, ವರ್ಗವಾರು ಹಂಚಿಕೆ, ಭೂ ಬಳಕೆ, ಹಿಡುವಳಿ ಮತ್ತು ಬೆಳೆ ಮಾದರಿ ಇತ್ಯಾದಿಗಳಂತಹ ವಿವಿಧ ಮಾನದಂಡಗಳ ಮಾಹಿತಿಯ ಮುಖ್ಯ ಮೂಲವಾಗಿದೆ. ಕೃಷಿ ಗಣತಿಗಾಗಿ ದತ್ತಾಂಶ ಸಂಗ್ರಹಣೆಯನ್ನು ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಲ್ಲಿ ನಡೆಸುವುದು ಇದೇ ಮೊದಲು. ಇದರಿಂದಾಗಿ ಸಮಯಕ್ಕೆ ಸರಿಯಾಗಿ ದತ್ತಾಂಶ ಲಭ್ಯವಿರುತ್ತದೆ ಎಂದು ಸಚಿವಾಲಯ ಹೇಳಿದೆ.

ಕೃಷಿ ಇಲಾಖೆಯಿಂದ ರೈತರಿಗೆ ಯಾವ-ಯಾವ ಸೌಲಭ್ಯಗಳು ಸಿಗುತ್ತವೆ ನೋಡಿ ಕೃಷಿ ಇಲಾಖೆಯಿಂದ ರೈತರಿಗೆ ಯಾವ-ಯಾವ ಸೌಲಭ್ಯಗಳು ಸಿಗುತ್ತವೆ ನೋಡಿ

ಈಗಾಗಲೇ ಹೆಚ್ಚಿನ ರಾಜ್ಯಗಳು ತಮ್ಮ ಭೂ ದಾಖಲೆಗಳು ಮತ್ತು ಸಮೀಕ್ಷೆಗಳನ್ನು ಡಿಜಿಟಲೀಕರಣಗೊಳಿಸಿದ್ದು, ಇದು ಕೃಷಿ ಗಣತಿಯ ದತ್ತಾಂಶ ಸಂಗ್ರಹಣೆಯನ್ನು ಮತ್ತಷ್ಟು ವೇಗಗೊಳಿಸುತ್ತದೆ. ಡಿಜಿಟಲಿಕರಣ ಮಾಡಿದ ಭೂ ದಾಖಲೆಗಳ ಬಳಕೆ ಮತ್ತು ದತ್ತಾಂಶ( ಅಂಕಿಅಂಶ) ಸಂಗ್ರಹಣೆಗಾಗಿ ಮೊಬೈಲ್ ಅಪ್ಲಿಕೇಶನ್‌ಗಳ ಬಳಕೆಯು ದೇಶದಲ್ಲಿ ಜಮೀನುಗಳ ಡೇಟಾಬೇಸ್ ಅನ್ನು ರಚಿಸಲು ಸಾಧ್ಯವಾಗುತ್ತದೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.

The 11th Agricultural Census 2021-22 has been launched by the Central Government

ಭಾರತದಂತಹ ವಿಶಾಲವಾದ ಮತ್ತು ಕೃಷಿ ಪ್ರಧಾನ ರಾಷ್ಟ್ರದಲ್ಲಿ ಈ ಲೆಕ್ಕಾಚಾರವು ಭಾರಿ ಪ್ರಯೋಜನಗಳನ್ನು ತರುತ್ತದೆ. ಇಲ್ಲಿ ರೈತರ ಆದಾಯ ಹೆಚ್ಚಿಸುವತ್ತ ಸರ್ಕಾರ ಗಮನ ಹರಿಸುತ್ತಿದೆ. ಇದಲ್ಲದೆ, ಅವರ ಜೀವನಮಟ್ಟವನ್ನು ಬದಲಾಯಿಸುವ ಅವಶ್ಯಕತೆಯಿದೆ. ಹೀಗಾಗಿ ಸಬಲೀಕರಣಕ್ಕಾಗಿ ಸಣ್ಣ ರೈತರನ್ನು ಸಂಘಟಿಸಬೇಕಾಗಿದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದರು.

ದೇಶವು ಡಿಜಿಟಲ್ ಕೃಷಿಯತ್ತ ವೇಗವಾಗಿ ಸಾಗುತ್ತಿದೆ. ಈ ಗಣನೆಯಲ್ಲಿ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಾಗುತ್ತದೆ. ಕೃಷಿ ಗಣತಿಯನ್ನು ವಿಶಾಲ ದೃಷ್ಟಿಕೋನದಲ್ಲಿ ಯೋಚಿಸಬೇಕು. ಇದು ಕೃಷಿ ಲೆಕ್ಕಾಚಾರಗಳು ಬೆಳೆಗಳ ಮ್ಯಾಪಿಂಗ್‌ಗೆ ಕೊಡುಗೆ ನೀಡಬಹುದು. ಇದರಿಂದ ದೇಶವು ಗಣತಿಯ ಪ್ರಯೋಜನಗಳನ್ನು ಪಡೆಯುತ್ತದೆ ಎಂದು ಅವರು ಹೇಳಿದರು.

ಕೇಂದ್ರ ಇಲಾಖೆಗಳು, ರಾಜ್ಯ ಸರ್ಕಾರಗಳು ಮತ್ತು ಸಂಬಂಧಿತ ಸಂಸ್ಥೆಗಳು ಕೃಷಿ ಗಣತಿಯನ್ನು ಸಂಪೂರ್ಣ ಸಮರ್ಪಿತವಾಗಿ ನಡೆಸುವಂತೆ ತೋಮರ್ ಕೇಳಿಕೊಂಡರು. ಈ ಸಂದರ್ಭದಲ್ಲಿ ಸಚಿವರು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಬಳಕೆಗಾಗಿ ಕೃಷಿ ಗಣತಿಗಾಗಿ ಕಾರ್ಯಾಚರಣಾ ಮಾರ್ಗಸೂಚಿಗಳ ಕೈಪಿಡಿಯನ್ನು ಬಿಡುಗಡೆ ಮಾಡಿದರು. ಅಲ್ಲದೆ ಡೇಟಾ ಕಲೆಕ್ಷನ್ ಪೋರ್ಟಲ್/ಆ್ಯಪ್ ಅನ್ನು ಬಿಡುಗಡೆ ಮಾಡಿದರು.

English summary
Agriculture Minister Narendra Singh Tomar launched the eleventh agricultural census on Thursday. For the first time, data will be collected on various criteria including tenure through smartphones and tablets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X