ಗಾಂಧಿ ಭವನದಲ್ಲಿ ಸ್ವದೇಶಿ ಅಕ್ಕಿ ಉತ್ಸವ!
ಬೆಂಗಳೂರು,
ಏ.2: ನಗರದ ಹಲವೆಡೆ ಅಕ್ಕಿ ಮೇಳಗಳು ಜನಪ್ರಿಯಗೊಂಡಿರುವ ಬೆನ್ನಲ್ಲೇ 'ಸ್ವದೇಶಿ ಅಕ್ಕಿ ಉತ್ಸವ' ಏ. 4 ರಂದು ಗಾಂಧಿಭವನದಲ್ಲಿ ಏರ್ಪಾಟಾಗಿದೆ. ಸಂಪೂರ್ಣ ಸಾವಯವ ಕೃಷಿ ಆಧಾರಿತ ವಿವಿಧ ತಳಿಯ ಅಕ್ಕಿ, ಗ್ರಾಹಕರಿಗೆ ಲಭ್ಯವಾಗಲಿದೆ. ಅಕ್ಕಿ ಎಂದರೆ ದೂರ ಓಡುವ ಮಧುಮೇಹಿಗಳ ಆರೋಗ್ಯಕ್ಕೂ ಪೂರಕವಾದ ಅಕ್ಕಿ ತಳಿ ಅಂದು ಮಾರಾಟವಾಗಲಿದೆ. id="toptextpromo">ನಗರದ
ಶೇಷಾದ್ರಿಪುರದ ಕುಮಾರಕೃಪಾ ರಸ್ತೆಯಲ್ಲಿರುವ ಗಾಂಧಿಭವನದಲ್ಲಿ ಏ.4ರಂದು ಬೆಳಗ್ಗೆ 10.30 ರಿಂದ ಸಂಜೆ 5 ರವರೆಗೆ ಸ್ವದೇಶಿ ಅಕ್ಕಿ ಉತ್ಸವ ನಡೆಯಲಿದೆ. ರಾಸಾಯನಿಕ ಮುಕ್ತ ಅಕ್ಕಿ ಬಳಸಿ ಆರೋಗ್ಯ ವೃದ್ಧಿಸಿಕೊಳ್ಳಲು ಇಚ್ಛೆಯಿರುವವರು ಅಂದು ಅಕ್ಕಿ ಉತ್ಸವಕ್ಕೆ ತಪ್ಪದೆ ಬರಬಹುದು. ರೈತನಿಂದ ಗ್ರಾಹಕರೆಡೆಗೆ ನೇರ ಮಾರುಕಟ್ಟೆ ಒದಗಿಸಿ, ವಿವಿಧ ಬಗೆಯ ಅಕ್ಕಿ ತಳಿಗಳು ಕೈಗೆಟಕುವ ದರದಲ್ಲಿ ಜನಸಾಮಾನ್ಯರಿಗೆ ಲಭ್ಯವಾಗುವಂತೆ ಮಾಡುವುದು ಈ ಉತ್ಸವದ ಉದ್ದೇಶ. id='are-slot-1' class='oiad oi-axt oiadv'> id='top-searched-articles'>ಸಹಜ
ಸಂಮೃದ್ಧ ( ಸಾವಯವ ಕೃಷಿಕರ ಗುಂಪು), ಯೋರಾ(Year of Rice Action 2009-10) ಹಾಗೂ ಥನಲ್ (ಸಾರ್ವಜನಿಕ ಹಿತಾಸಕ್ತಿ, ಸಂಶೋಧನೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕೇರಳ ಮೂಲದ ಟ್ರಸ್ಟ್) ಈ ಸ್ವದೇಶಿ ಅಕ್ಕಿ ಮೇಳದ ಆಯೋಜಕರು.ಅಕ್ಕಿ ಮೇಲೆ ಆಸೆ ಇರುವವರು ತಪ್ಪದೆ ಬನ್ನಿ ಎಂದು ಆಯೋಜಕರು ಕರೆ ಕೊಟ್ಟಿದ್ದಾರೆ.











Click it and Unblock the Notifications