ಭಾರತದಲ್ಲಿ ಸಕ್ಕರೆ ಉತ್ಪಾದನೆ ಅಧಿಕ, ಕರ್ನಾಟಕದಲ್ಲಿ ತುಸು ಕಡಿಮೆ

ಬೆಂಗಳೂರು, ಡಿಸೆಂಬರ್ 02: ಅಕ್ಟೋಬರ್-ನವೆಂಬರ್ ಅವಧಿಯಲ್ಲಿ ಭಾರತದ ಸಕ್ಕರೆ ಉತ್ಪಾದನೆಯು 47.9 ಲಕ್ಷ ಟನ್‌ಗಳಿಗೆ ಸ್ವಲ್ಪ ಹೆಚ್ಚಾಗಿದೆ ಎಂದು ಇಂಡಿಯನ್ ಶುಗರ್ ಮಿಲ್ಸ್ ಅಸೋಸಿಯೇಷನ್ (ಐಎಸ್‌ಎಂಎ)ಮಾಹಿತಿ ನೀಡಿದೆ.

ಪ್ರಸಕ್ತ 2022 ಮತ್ತು 2023 ನೇ ಸಾಲಿನ ಮಾರುಕಟ್ಟೆ ವರ್ಷದಲ್ಲಿ ಕಳೆದ ನವೆಂಬರ್ 30 ರವರೆಗೆ ಸಕ್ಕರೆ ಉತ್ಪಾದನೆಯು 47.9 ಲಕ್ಷ ಟನ್‌ಗಳಾಗಿದೆ. ಕಳೆದ ವರ್ಷದಲ್ಲಿ ಇದೇ ಅವಧಿಗೆ ಹೋಲಿಕೆ ಮಾಡಿದರೆ ಅಂದು 47.2 ಲಕ್ಷ ಟನ್‌ಗಳಷ್ಟಿತ್ತು. ಸಕ್ಕರೆ ಉತ್ಪಾದನೆಯಲ್ಲಿ ಈ ವರ್ಷ ತುಸು ಏರಿಕೆ ಆಗಿದೆ ಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘ (ಐಎಸ್‌ಎಂಎ)ದ ವರದಿ ತಿಳಿಸಿದೆ.

ಈ ವರ್ಷ ಕಾರ್ಯರ್ನಿಹಿಸುತ್ತಿರುವ ಸಕ್ಕರೆ ಕಾರ್ಖಾನೆಗಳ ಸಂಖ್ಯೆ 434 ರಷ್ಟಿವೆ. ಕಳೆದ ವರ್ಷ ಕೇವಲ 416ರಷ್ಟು ಕಾರ್ಖಾಣೆಗಳು ಕಬ್ಬನ್ನು ಸಕ್ಕರೆಯನ್ನಾಗಿ ಮಾಡುವ ಕೆಲಸದಲ್ಲಿ ತೊಡಗಿದ್ದವು. ವರದಿಯನ್ನು ಸಮಗ್ರವಾಗಿ ನೋಡುವುದಾದರೆ ಮಹಾರಾಷ್ಟ್ರದಲ್ಲಿ ಸಕ್ಕರೆ ಉತ್ಪಾದನೆಯು 2022-23ರ ಮೊದಲ ಎರಡು ತಿಂಗಳಲ್ಲಿ 20 ಲಕ್ಷ ಟನ್‌ಗಳಷ್ಟಿತ್ತು. ಈ ಹಿಂದಿನ ವರ್ಷದ ಅವಧಿಯಲ್ಲಿ 20.3 ಲಕ್ಷ ಟನ್‌ಗಳಷ್ಟಿತ್ತು. ಇನ್ನು ಉತ್ತರ ಪ್ರದೇಶದಲ್ಲಿ ಸಕ್ಕರೆ ಉತ್ಪಾದನೆಯು 10.4 ಲಕ್ಷ ಟನ್‌ಗಳಿಂದ ಈ ವರ್ಷ 11.2 ಲಕ್ಷ ಟನ್‌ಗಳಿಗೆ ಹೆಚ್ಚಾಗಿದೆ.

Sugar Production Increase In India, Decrease In Karnataka ISMA Said

ಆದರೆ ಕರ್ನಾಟಕದಲ್ಲಿ ಸಕ್ಕರೆ ಉತ್ಪಾದನೆಯು 12.8 ಲಕ್ಷ ಟನ್‌ಗಳಿಂದ 12.1 ಲಕ್ಷ ಟನ್‌ಗಳಿಗೆ ಇಳಿಕೆ ಕಂಡಿದೆ. ಎಲ್ಲ ರಾಜ್ಯಗಳಲ್ಲಿ ಕರ್ನಾಟಕದಲ್ಲಿ ಸಕ್ಕರೆ ಉತ್ಪಾದನೆ ಕೊಂಚ ಕಡಿಮೆಯಾಗಿದೆ.

ತೈಲ ಮಾರುಕಟ್ಟೆ ಕಂಪನಿಗಳು ಇದುವರೆಗೆ ಎಥೆನಾಲ್ ಪೂರೈಕೆ ವರ್ಷ 2022-23 ರಲ್ಲಿ ಸುಮಾರು 460 ಕೋಟಿ ಲೀಟರ್ ಎಥೆನಾಲ್‌ ಅನ್ನು ಪೂರೈಕೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ಎಥೆನಾಲ್ ಉತ್ಪಾದನೆ, ಪೂರೈಕೆ ವರ್ಷವು ಡಿಸೆಂಬವರೆಗೆ ಕಂಡು ಬರಲಿದೆ.

Sugar Production Increase In India, Decrease In Karnataka ISMA Said

ತೈಲ ಮಾರುಕಟ್ಟೆ ಕಂಪನಿಗಳು ಹೆಚ್ಚುವರಿ 139 ಕೋಟಿ ಲೀಟರ್‌ಗಳ ಅವಶ್ಯಕತೆ ಇದೆ ಎಂದು ಕೇಳಿಕೊಂಡಿವೆ. ಈ ಕುರಿತು ಅಸೋಸಿಯೇನ್ ಮುಂದೆ ಬೇಡಿ ಇಟ್ಟಿತ್ತು. ಆದರೆ ಎಥೆನಾಲ್ ಹಂಚಿಕೆ ಕುರಿತು ಹಾಗೂ ಪ್ರಸ್ತು ಬಿಡ್‌ಗಳನ್ನು ಪರಿಶೀಲಿಸುವುದಾಗಿ ಇಂಡಿಯನ್ ಶುಗರ್ ಮಿಲ್ಸ್ ಅಸೋಸಿಯೇಷನ್ (ಐಎಸ್‌ಎಂಎ) ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+