ಕರ್ನಾಟಕದ ರೈತರಿಗೆ ವರದಾನವಾದ ಫಸಲ್ ಭೀಮಾ

ಬೆಂಗಳೂರು, ಮೇ 27 : ರೈತರ ನೆರವಿಗೆ ರಾಜ್ಯ ಸರ್ಕಾರ ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಬೆಳೆ ಬಾರದೇ ನಷ್ಟ ಹೊಂದುವ, ಬರ ದಿಂದ ಬೆಳೆ ನಷ್ಟ ಅನುಭವಿಸುವ ರೈತರ ನೆರವಿಗೆ ಕರ್ನಾಟಕ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರಲಾಗಿದೆ.

ಬೆಳೆ ನಷ್ಟ ಅನುಭವಿಸುವ ರೈತರ ಖಾತೆಗಳಿಗೆ ನೇರವಾಗಿ ಹಣ ಪಾವತಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಇದರಿಂದಾಗಿ ಮಧ್ಯವರ್ತಿಗಳ ಕಾಟದಿಂದ ಮುಕ್ತವಾಗಿ ತ್ವರಿತವಾಗಿ ರೈತರು ನೆರವು ಪಡೆಯಲು ಅವಕಾಶವನ್ನು ಸರ್ಕಾರ ಮಾಡಿದೆ. ಈ ಕುರಿತು ನಡೆದ ಕಾರ್ಯಾಗಾರದ ಮಾಹಿತಿ ಇಲ್ಲಿದೆ.

Success of Pradhan Mantri Fasal Bima Yojna in Karnataka

ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಅನುಭವಿಸುತ್ತಿರುವ ರೈತರಿಗೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ವರದಾನವಾಗಿದೆ ಎಂದು ಕೃಷಿ ಇಲಾಖೆ ಆಯುಕ್ತರಾದ ಸತೀಶ್ ಜಿ. ಅವರು ತಿಳಿಸಿದರು.

ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆ ವತಿಯಿಂದ ಸಂಸ್ಥೆಯ ಎಚ್.ಆರ್. ಅರಿಕೇರಿ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದ್ದ ಬೆಳೆ ವಿಮೆ- ಸಮಸ್ಯೆ ಮತ್ತು ಪರಿಹಾರಗಳು ಕುರಿತ ಕಾರ್ಯಾಗಾರವನ್ನು ಉದ್ಫಾಟಿಸಿ ಮಾತನಾಡುತ್ತಿದ್ದರು.

ರೈತರು ಬೆಳೆಯನ್ನು ಕೇವಲ ವಿಮೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬೆಳೆಯಬಾರದು. ಇಲಾಖೆಯು ಬೆಳೆ ಕಟಾವು, ಸಂರಕ್ಷಣೆಗೆ ವೆಬ್‍ಪೋರ್ಟ್‍ನ್ನು ಸ್ಥಾಪಿಸಿದೆ. 2016ರಲ್ಲಿ ಪ್ರಾರಂಭವಾದ ಪಿಎಂಎಫ್‍ಬಿವೈ ಯೋಜನೆಯ ರೈತರಿಗೆ ಸಾಕಷ್ಟು ನೆರವು ನೀಡಿದೆ.

Success of Pradhan Mantri Fasal Bima Yojna in Karnataka

ದೇಶದ ಆರ್ಥಿಕ ವ್ಯವಸ್ಥೆ ಕೃಷಿಯನ್ನು ಅವಲಂಭಿತವಾಗಿದ್ದು, ಕೃಷಿ ಬೆಳೆಗಳು ವಿಫಲವಾದರೆ ಆರ್ಥಿಕ ಸಂಕಷ್ಠ ಎದುರಾಗುತ್ತದೆ. ಸಾಕಷ್ಟು ರೈತರು ಬೆಳೆ ವಿಮೆ ಪಡೆಯುತ್ತಿದ್ದು, ಈ ಯೋಜನೆ ಶೇ100ರಷ್ಟು ಪ್ರಗತಿ ಸಾಧಿಸಿಲ್ಲ. ರೈತರು ಹವಾಮಾನಕ್ಕನುಗುಣವಾಗಿ ಬೆಳೆಗಳನ್ನು ಬೆಳೆದರೆ ಒಳಿತು ಎಂದವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷರಾದ ಮಲ್ಲಪ್ಪ ಮಾತನಾಡಿ, ಸಮಗ್ರ ಬೆಳೆ ವಿಮೆ ಯೋಜನೆಯನ್ನು ಕೇಂದ್ರ ಸರ್ಕಾರ 1985ರಲ್ಲಿ ಆರಂಭಿಸಿತು. ಈ ಯೋಜನೆಯಡಿ ಕೃಷಿ ಸಾಲ ಪಡೆದವರನ್ನು ಮಾತ್ರ ಸೇರಿಸಲಾಗಿತ್ತು.

1999-2000ರಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಕೃಷಿ ವಿಮೆ ಯೋಜನೆ ಜಾರಿಗೆ ತಂದಿತ್ತು. 2016ರಲ್ಲಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಜಾರಿಗೆ ತಂದಿತು. ಆದರೂ ಈ ಯೋಜನೆಯ ಪಾಲ್ಗೊಳ್ಳ್ಳುವಿಕೆ ನಿರೀಕ್ಷಿತ ಮಟ್ಟ ತಲುಪಿಲ್ಲ. ರೈತರು ಬೆಳೆ ವಿಮೆ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.

ಕಾರ್ಯಾಗಾರದಲ್ಲಿ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ನಾಗರಾಜ್, ಕೃಷಿ ತಂತ್ರಜ್ಞರ ಸಂಸ್ಥೆಯ ಕಾರ್ಯದರ್ಶಿ ಕೃಷ್ಣಪ್ಪ ಹಾಗೂ ಇತರ ಪದಾಧಿಕಾರಿಗಳು, ವಿಮೆ, ಬ್ಯಾಂಕಿಂಗ್ ಸಂಸ್ಥೆಯ ಮುಖ್ಯಸ್ಥರು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+