ರೈತರ ಉಚಿತ ವಿದ್ಯುತ್ ದುರುಪಯೋಗ: ಡಿಕೆಶಿ
ಬೆಂಗಳೂರು, ಫೆ. 4: ರೈತರ ಪಂಪ್ ಸೆಟ್ ಗಳಿಗೆ ನೀಡಿರುವ ಉಚಿತ ವಿದ್ಯುತ್ ಬೇರೆಯವರಿಂದ ದುರುಪಯೋಗವಾಗುತ್ತಿದೆ ಎಂದು ಇಂಧನ ಸಚಿವ ಶ್ರೀ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ವೇಳೆಯಲ್ಲಿ ಜಿ.ಎಸ್. ನ್ಯಾಮಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 10 ಹೆಚ್.ಪಿ.ಗಿಂತ ಕಡಿಮೆ ಇರುವ ಕೃಷಿ ನೀರಾವರಿ ಪಂಪ್ ಸೆಟ್ ಗಳಿಗೆ ಉಚಿತವಾಗಿ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಆದರೆ ಉಚಿತವಾಗಿ ಸರಬರಾಜು ಮಾಡುತ್ತಿರುವ ವಿದ್ಯುತ್ ನ್ನು ರೈತರಲ್ಲದವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಅಪಾರ ನಷ್ಟವಾಗುತ್ತಿದೆ ಎಂದು ಹೇಳಿದರು.['ಡಿಕೆಶಿ ಐವರು ಶಾಸಕರಿಗೆ ಕಾಂಗ್ರೆಸ್ ಸೇರಲು ಆಹ್ವಾನಿಸಿದ್ದಾರೆ']

ಸರ್ಕಾರವು ರೈತರರ ವ್ಯವಸಾಯಕ್ಕೆ ಬೇಕಾಗುವಷ್ಟು ವಿದ್ಯುತ್ ಉಚಿತವಾಗಿ ನೀಡಲಿದೆ. ಪ್ರತಿ ವರ್ಷ 10 ಹೆಚ್.ಪಿ. ಮೋಟಾರ್ ಸಾಮರ್ಥ್ಯದ ಪಂಪ್ ಸೆಟ್ ಗಳಿಗೆ ಸರಾಸರಿ 29, 322 ರೂ. ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ 2014-15 ನೇ ಸಾಲಿಗೆ 6,224 ಕೋಟಿ ರೂ.ಗಳಷ್ಟು ಹೊರೆಯಾಗಲಿದೆ ಎಂದರು.[ಡಿಕೆ ಶಿವಕುಮಾರ್ ಜತೆ ಜೆಡಿಎಸ್ ನಾಯಕರ ರಹಸ್ಯ ಚರ್ಚೆ!]
ವಿದ್ಯುತ್ ಸೋರಿಕೆಯನ್ನು ತಡೆಗಟ್ಟಲು ಮಾತ್ರ ಮೀಟರ್‍ಅನ್ನು ಅಳವಡಿಸುವುದಾದರೆ ಪ್ರತಿಪಕ್ಷದ ಸದಸ್ಯರೆಲ್ಲರ ಒಪ್ಪಿಗೆ ಇದೆ. ಆದರೆ ರೈತರಿಗೆ ಮೀಟರ್ ಉಪಯೋಗದ ಬಗ್ಗೆ ಸರಿಯಾಗಿ ಮನವರಿಕೆ ಮಾಡುವಂತೆ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಅಭಿಪ್ರಾಯಪಟ್ಟರು.












Click it and Unblock the Notifications