ದೊಡ್ಡವರ ಕೈವಾಡದಿಂದ ಸಣ್ಣ ರೈತರ ಬಾಳು ಗೋಳು

ಸದಾಶಿವಪ್ಪ ಗೌಡನ ಜಮೀನಿಗೆ ಹೋಗಲು ಈ ಸಣ್ಣ ರೈತರ ಜಮೀನಿನಿಂದ ಸಣ್ಣ ರಸ್ತೆ (ಚಕ್ಕಡಿ ದಾರಿ) ಇತ್ತು. ಆ ರಸ್ತೆಯನ್ನು ಅಗಲ ಮಾಡಿ 25 ಎಕರೆ ಜಮೀನಿನಲ್ಲಿ ರಸ್ತೆ ನಿರ್ಮಾಣ ಮಾಡಿದ್ದಾನೆ. ರೈತರು ಸರ್ವೆ ನಕ್ಷೆಯನ್ನು ಹಿಡಿದು 'ನೋಡಿ ಸಾರ್ ಇಲ್ಲಿ ಯಾವುದೇ ರಸ್ತೆ ಇಲ್ಲ' ಆದ್ರೂ ದೊಡ್ಡವರು ರಸ್ತೆ ನಿರ್ಮಾಣ ಮಾಡಿದ್ದಾರೆ ಅಂತಾರೆ ಸಣ್ಣ ರೈತರು.
ಸದಾಶಿವಪ್ಪ ಗೌಡ ರಾತ್ರೋ ರಾತ್ರಿ ಬುಲ್ಡೋಜರ್ ಹಚ್ಚಿ, ಹೋಲದಲ್ಲಿ ಇದ್ದ ಬೆಳೆ ಎಲ್ಲಾ ಹಾಳುಮಾಡಿ ತನ್ನ ಹೋಲಕ್ಕೆ ದೊಡ್ಡ ರಸ್ತೆ ಮಾಡಿಕೊಂಡಿದ್ದಾನೆ. ಇದರಿಂದ ಸಣ್ಣ ಪುಟ್ಟ ಜಮೀನು ಇದ್ದ ರೈತರ ಬಾಳು ಗೋಳಾಗಿದೆ. ಇದರ ಹಿಂದೆ ಕೆಲ ರಾಜಕೀಯ ಧುರೀಣರ ಕೈವಾಡವಿದೆ ಎಂದು ರೈತರು ಆರೋಪಿಸುತ್ತಾರೆ.
ಮಳೆಯೇ ಇಲ್ಲದೆ ಅಷ್ಟೊ ಇಷ್ಟೊ ಬೆಳೆದಿದ್ದ ಬೆಳೆ ಕೂಡ ಕೈಗೆ ಬಾರದಂತಾಗಿದೆ. ಈ ಜಮೀನಿನ ರೈತರು ಕೋರ್ಟಿನಲ್ಲಿ ದಾವೆ ಹೂಡಿದ್ದಾರೆ ಮತ್ತು ನ್ಯಾಯಾಲಯದಿಂದ ರಸ್ತೆ ನಿರ್ಮಾಣಕ್ಕೆ ತಡೆಯಾಜ್ಞೆ ತಂದಿದ್ದಾರೆ. ಆದರೂ ಬೆಳೆ ಹಾಳು ಮಾಡಿ ರಸ್ತೆ ನಿರ್ಮಾಣ ಮಾಡಲಾಗಿದೆ. ಯಾದಗಿರಿ ಜಿಲ್ಲಾಧಿಕಾರಿ ಗುರು ನೀತ್ ತೇಜ್ ಮೇನನ್ ರೈತರ ಕೂಗಿಗೆ ಸ್ಪಂದಿಸಲಿ.












Click it and Unblock the Notifications