ಉಪವಾಸ ಹಿಂಪಡೆದ ಶಿವರಾಜ್ ಸಿಂಗ್ ಚೌಹಾಣ್: ಕಾಂಗ್ರೆಸ್ ನಿಂದ ಟೀಕೆ
ಭೂಪಾಲ್, ಜೂನ್ 12 : ಮಧ್ಯಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ರೈತರ ಹೋರಾಟ ಶಾಂತವಾಗಲಿ ಎಂದು ಅನಿರ್ದಿಷ್ಟಾವಧಿ ಉಪವಾಸ ಕೈಗೊಂಡಿದ್ದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇಂದು ಉಪವಾಸವನ್ನು ಹಿಂಪಡೆದಿದ್ದು, ತೀವ್ರ ಟೀಕೆಗೆ ಗುರಿಯಾಗಿದೆ.
ವಿರೋಧ ಪಕ್ಷಗಳು ಇದನ್ನು ನಾಟಕ ಎಂದೇ ಕರೆಯುತ್ತಿವೆ. ಆದರೆ, ಹಲವು ರೈತರು ತಮ್ಮ್ ಬಳಿ ಬಂದು ಮುಕ್ತವಾಗಿ ಅವರ ಸಮಸ್ಯೆಗಳನ್ನು ಹಂಚಿಕೊಂಡಿದ್ದರಿಂದ ತಾನನು ಉಪವಾಸ ಹಿಂಪಡೆದಿದ್ದೇನೆ ಎಂದು ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

ರೈತರ ಸಾಲಮನ್ನಾ, ಮತ್ತು ರೈತರ ಬೆಳೆಗಳಿಗೆ ಬೆಬಲ ಬೆಲೆ ನೀಡುವ ಕುರಿತು ಇಲ್ಲಿ ಎದ್ದಿದ್ದ ರೈತರ ಆಕ್ರೋಶ, ಇದೀಗ ಕೊಂಚ ನಿಯಂತ್ರಣಕ್ಕೆ ಬಂದಿದೆ. ಈ ಹೋರಾಟದಲ್ಲಿ ಆರು ರೈತರು ದುರಂತ ಅಂತ್ಯ ಕಂಡಿದ್ದರು.












Click it and Unblock the Notifications