ಯಡ್ಡಿಯಿಂದ ದೇವಸ್ಥಾನಗಳಿಗೂ ಪ್ರತ್ಯೇಕ ಬಜೆಟ್: ಸಿದ್ದು
ಚಾಮರಾಜನಗರ,
ಫೆ.18: ಕೃಷಿಗೆ ಪ್ರತ್ಯೇಕ ಬಜೆಟ್ ಮಂಡಿಸುವುದಾಗಿ ಹೇಳುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಂದೆ ದೇವಸ್ಥಾನಗಳಿಗೂ ಪ್ರತ್ಯೇಕ ಬಜೆಟ್ ಮಂಡಿಸಿದರೆ ಆಶ್ಚರ್ಯವಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಇಲ್ಲಿ ವ್ಯಂಗ್ಯವಾಗಿ ಹೇಳಿದರು. ಚಾಮರಾಜನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಸರ್ಕಾರದಲ್ಲಿ "ಆಯ"ವೇ ಇಲ್ಲ. ಅಂದಮೇಲೆ ಅವರು ಅದನ್ನು ಆಯವ್ಯಯ ಎಂದು ಕರೆಯುವುದರಲ್ಲಿ ಅರ್ಥವಿಲ್ಲ ಎಂದರು. id="toptextpromo">ಯಡಿಯೂರಪ್ಪರಿಗೆ
ರಾಜೀನಾಮೆ ನೀಡುವ ಅನಿವಾರ್ಯತೆ ಇದೀಗ ನಿರ್ಮಾಣವಾಗಿದೆ. ಭ್ರಷ್ಟಾಚಾರ, ಸ್ವಜನ ಪಕ್ಷಪಾತದ ದೂರಿನ ಮೇಲೆ ನ್ಯಾಯಾಲಯ ಸಮನ್ಸ್ ನೀಡಬಹುದು. ಆದ್ದರಿಂದ ರಾಜಿನಾಮೆ ನೀಡುವ ಪರಿಸ್ಥಿತಿಯನ್ನು ಅವರೇ ಮಾಡಿಕೊಂಡಿದ್ದಾರೆ. ಅದಕ್ಕಾಗಿಯೇ ಕೇಂದ್ರ ಬಜೆಟ್‌ಗೂ ಮುನ್ನ ತಮ್ಮ ಬಜೆಟ್ ಮಂಡಿಸುತ್ತಿದ್ದಾರೆ. ಅವರು ಮಂಡಿಸಲಿರುವ ಬಜೆಟ್ ಕೇವಲ ಸುಳ್ಳಿನ ಕಂತೆಯಾಗಲಿದೆ ಎಂದು ಗೇಲಿ ಮಾಡಿದರು. id='are-slot-1' class='oiad oi-axt oiadv'> id='top-searched-articles'>ಯಡಿಯೂರಪ್ಪ
ಮೂರೂ ಬಿಟ್ಟ ಭಂಡ ಮುಖ್ಯಮಂತ್ರಿ, ಅವರಿಗೆ ನಾಚಿಕೆ ಎಂಬುದೇ ಇಲ್ಲ. ಬೇರೆ ಯಾರೇ ಈ ಜಾಗದಲ್ಲಿ ಇದ್ದು ಇಂತಹ ಭ್ರಷ್ಟಾಚಾರ ನಡೆದಿದ್ದರೆ ಒಂದು ಕ್ಷಣವೂ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಿರಲಿಲ್ಲ. ಮಾತೆತ್ತಿದರೆ ಭ್ರಷ್ಟಾಚಾರಗಳನ್ನು ಸಾಬೀತು ಮಾಡಿ ಎನ್ನುತ್ತಾರೆ. ತನಿಖೆಯಲ್ಲಿ ಸಾಬೀತಾದರೆ ಅವರು ಜೈಲಿಗೆ ಹೋಗುವುದು ಗ್ಯಾರಂಟಿ. ಅವರಿಗೆ ಹೀಗೆ ಅಧಿಕಾರ ಮಾಡಲು ಬಿಟ್ಟರೆ ರಾಜ್ಯವನ್ನು ಮಾರಿ ಬಿಡುತ್ತಾರೆ. ಪ್ರಜಾಪ್ರಭುತ್ವವೂ ಉಳಿಯುವುದಿಲ್ಲ ಎಂದರು.ನಾಡ
ರಕ್ಷಣಾ
ಮೆರವಣಿಗೆ:
ಯಡಿಯೂರಪ್ಪ
ನೇತೃತ್ವದ
ಭ್ರಷ್ಟ
ಬಿಜೆಪಿ
ಸರ್ಕಾರದ
ವಿರುದ್ಧ
ಮೈಸೂರಿನಲ್ಲಿ
ಫೆ.20
ರಂದು
ಕಾಂಗ್ರೆಸ್
ಏರ್ಪಡಿಸಿರುವ
ವಿಭಾಗ
ಮಟ್ಟದ
ನಾಡ
ರಕ್ಷಣಾ
ಮೆರವಣಿಗೆಗೆ
ಮೈಸೂರು
ವಿಭಾಗದ
ಮೈಸೂರು,
ಚಾಮರಾಜನಗರ,
ಮಂಡ್ಯ,
ದಕ್ಷಿಣ
ಕನ್ನಡ,
ಉಡುಪಿ,
ಹಾಸನ,
ಕೊಡಗು
ಚಿಕ್ಕಮಗಳೂರು
ಜಿಲ್ಲೆಗಳಿಂದ
ಲಕ್ಷಕ್ಕೂ
ಹೆಚ್ಚು
ಕಾಂಗ್ರೆಸ್
ಕಾರ್ಯಕರ್ತರು
ಪಾಲ್ಗೊಳ್ಳಲಿದ್ದಾರೆ
ಎಂದು
ಹೇಳಿದರು.
ಜಿಲ್ಲಾ
ಕಾಂಗ್ರೆಸ್
ಅಧ್ಯಕ್ಷರೂ
ಆದ
ಶಾಸದ
ಎಚ್.ಎಸ್.
ಮಹದೇವಪ್ರಸಾದ್,
ಶಾಸಕ
ಸಿ.
ಪುಟ್ಟರಂಗಶೆಟ್ಟಿ,
ಜಿಲ್ಲಾ
ಪಂಚಾಯಿತಿ
ನೂತನ
ಅಧ್ಯಕ್ಷೆ
ಕೆ.
ರಾಜೇಶ್ವರಿ
ಮುಂತಾದವರು
ಈ
ಸಂದರ್ಭದಲ್ಲಿ
ಇದ್ದರು.












Click it and Unblock the Notifications