ಖ್ಯಾತ ಪಾಪ್ ಗಾಯಕನ ಕೃಷಿ ಪ್ರೇಮ, 2004ರಲ್ಲಿ ಕೊಂಡ ಭೂಮಿಯಲ್ಲೀಗ ಅವಕಾಡೋ, ಕಾಫಿ, ಫ್ಯಾಷನ್ ಫ್ರೂಟ್ ಸಾವಯವ ಕೃಷಿ
Regenerative Farm : ಅಮೆರಿಕದ ಪ್ರಸಿದ್ಧ ಪಾಪ್ ಗಾಯಕ ಜೇಸನ್ ಮ್ರಾಜ್. ಇವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಸಂಗೀತ ಸೇವೆಯಲ್ಲಿ ಹೆಸರು ಮಾಡಿರುವ ಜೇಸನ್ ಕೃಷಿ ಕ್ಷೇತ್ರದಲ್ಲೂ ಅದ್ಬುತ ಸಾಧನೆ ಮಾಡಿದ್ದಾರೆ. ಇವರು 2004 ರಲ್ಲಿ ಸ್ಯಾನ್ ಡಿಯಾಗೋದಲ್ಲಿ ಆವಕಾಡೊ ತೋಟ ಖರೀದಿಸಿದ್ದರು. ಬರೋಬ್ಬರಿ ಎರಡು ದಶಕಗಳ ನಂತರ ಈ ಆವಕಾಡೋ ತೋಟ ಈಗ 17 ಎಕರೆ ವಿಸ್ತೀರ್ಣದ ಮ್ರಾಜ್ ಫ್ಯಾಮಿಲಿ ಫಾರ್ಮ್ಸ್ ಆಗಿ ಬೆಳೆದಿದೆ. ಇಲ್ಲಿ ಸಾವಯವ ಆವಕಾಡೊ, ಕಾಫಿ, ಫ್ಯಾಷನ್ ಫ್ರೂಟ್, ಬಾಳೆ, ಹೂವಿನ ಗಿಡ ಸೇರಿ ಬಹಳಷ್ಟು ಬೆಳೆ ಬೆಳೆಯುತ್ತಾರೆ.
ಈ ತೋಟದಲ್ಲಿ 1970ರ ಆಸುಪಾಸಿನಲ್ಲಿ ನೆಟ್ಟ ಆವಕಾಡೊ ಮರಗಳ ಕಾರಣದಿಂದ ಇದೀಗ ತೋಟ ಆರೋಗ್ಯಕರ ಮಣ್ಣು ಮತ್ತು ರೀಜನರೇಟಿವ್ ಸಾವಯವ ಕೃಷಿ ತೋಟವಾಗಿ ಬದಲಾಗಿದೆ. ಈ ತೋಟದಲ್ಲಿ ಬೆಳೆಯುವ ಹಣ್ಣನ್ನು ಆನ್ ಲೈನ್ ನಲ್ಲಿ, ಸ್ಥಳೀಯ ಅಂಗಡಿ, ರೆಸ್ಟೋರೆಂಟ್ ಗಳಿಗೆ ಮಾರಲಾಗುತ್ತದೆ. ಇದೀಗ ಮ್ರಾಜ್ ಮತ್ತು ಅವರ ಕುಟುಂಬದ ಜೀವನದಲ್ಲಿ ಈ ತೋಟ ಬಹಳ ಮುಖ್ಯ ಪಾತ್ರ ವಹಿಸ್ತಾ ಇದೆ.

ಹೊಸ ಲುಕ್ ಪಡೆದ ತೋಟ :
2004ರಲ್ಲಿ ಮ್ರಾಜ್ ಈ ಭೂಮಿ ಖರೀದಿಸುವ ಹೊತ್ತಿಗೆ ಈ ಫಾರ್ಮಲ್ಲಿ ಇಷ್ಟು ಬೆಳೆ ಇರಲಿಲ್ಲ. ನಗರದ ಜಂಜಾಟದಿಂದ ದೂರ ಬಂದು ನೆಮ್ಮದಿಯ ಒಂದೆರಡು ದಿನ ಕಳೆಯಲು ಈ ಜಾಗ ಹೇಳಿ ಮಾಡಿಸಿದ ಹಾಗಿತ್ತು. ಆದರೆ ಒಂದು ದಶಕದ ನಂತರ ತೋಟ ಹೊಸ ಲುಕನ್ನೇ ಪಡೆದುಕೊಂಡಿದೆ. ಇದ್ದ ಕೆಲವು ಮರಗಳಿಗೆ ಸ್ಟಂಪಿಂಗ್ ಮಾಡಿಸಲಾಗುತ್ತದೆ. ಇಲ್ಲಿ ಬೇರೆ ಬೇರೆ ಹಣ್ಣಿನ ಗಿಡಗಳನ್ನು ಬೆಳೆಯುತ್ತಾರೆ.
ಆವಕಾಡೊ ಮರಗಳು ನೆಟ್ಟ ನಂತರ ತಕ್ಷಣದ ಆದಾಯ ನೀಡುವುದಿಲ್ಲ. ಇದು ಬೆಳೆದು ಬೆಳೆ ನೀಡುವವರೆಗೆ ಕಾಯುವ ತಾಳ್ಮೆ ಇರಬೇಕು. ಹಾಗಾಗಿ ಕುಟುಂಬ ಆವಕಾಡೋ ಗಿಡಗಳ ನಡುವೆ ಕಾಫಿ, ಗಿಡಮೂಲಿಕೆ, ಹೂವು ಮತ್ತು ಬಾಳೆಹಣ್ಣಿನ (banana) ಗಿಡಗಳನ್ನು ಕೂಡಾ ನೆಡುತ್ತಾರೆ.
ಬೇರೆ ಬೇರೆ ಪ್ರಭೇದದ ಆವಕಾಡೋ :
ಈ ತೋಟದಲ್ಲಿ ಬೆಳೆದ ಆವಕಾಡೊ ಜಮೀನಿನ ಕೇಂದ್ರಬಿಂದುವಾಗಿದೆ. ಇಲ್ಲಿ ವಿಶೇಷ ಕಾಫಿಯ ಜೊತೆಗೆ ಹಾಸ್ ಮತ್ತು ರೀಡ್ ಪ್ರಭೇದಗಳನ್ನು ಒಳಗೊಂಡಂತೆ ಸಾವಯವ ಕ್ಯಾಲಿಫೋರ್ನಿಯಾ ಆವಕಾಡೊಗಳನ್ನು ಬೆಳೀತಾರೆ. ಇಲ್ಲಿ ಬೆಳೆಯುವ ಫಾರ್ಮ್ ಪ್ಯಾಶನ್ ಫ್ರೂಟಿಗೂ ಒಳ್ಳೆಯ ಬೇಡಿಕೆ ಇದೆ. 2014 ರಲ್ಲಿ, ಸ್ಯಾನ್ ಡಿಯಾಗೋ ಯೂನಿಯನ್-ಟ್ರಿಬ್ಯೂನ್ ವರದಿ ಮಾಡಿರುವ ಹಾಗೆ ಮ್ರಾಜ್ ತೋಟ ಸುಮಾರು 34,000 ಪೌಂಡ್ ಹಾಸ್ ಆವಕಾಡೊಗಳನ್ನು ರೆಸ್ಟೋರೆಂಟಿಗೆ ಸರಬರಾಜು ಮಾಡಿದೆ.
Regenerative Farm ಅಂದ್ರೇನು?
ಈ ತೋಟದಲ್ಲಿ ಮಣ್ಣಿನ ಸತ್ವ ಹೆಚ್ಚಿಸುವ ರೀಜನರೇಟಿವ್ ಪದ್ಧತಿಯನ್ನು ಅನುಸರಿಸಲಾಗುತ್ತದೆ. ಕತ್ತರಿಸಿದ ಮರದ ಕೊಂಬೆ, ಎಲೆಯನ್ನೆಲ್ಲಾ ಅಲ್ಲೇ ಕೊಳೆಯಲು ಬಿಡ್ತಾರೆ. ನಂತರ ಅದನ್ನೇ ನೈಸರ್ಗಿಕ ಗೊಬ್ಬರವಾಗಿ ಬಳಸಲಾಗ್ತದೆ. ತೋಟದ ಮಣ್ಣಿನಲ್ಲಿ ಇಂಗಾಲವನ್ನು ಹಿಡಿದಿಟ್ಟುಕೊಳ್ಳುವ ಕೆಲವು ಸಸ್ಯವನ್ನು ಕೂಡಾ ಬೆಳೆದಿದ್ದಾರೆ. ಈ ಮೂಲಕ ತೋಟದ ಮಣ್ಣನ್ನು ಕೇವಲ ಬೆಳೆ ಬೆಳೆಯುವ ಜಾಗವಾಗಿ ನೋಡದೆ, ಜೀವಂತ ಪರಿಸರ ವ್ಯವಸ್ಥೆಯಾಗಿ ಪರಿವರ್ತಿಸಲಾಗಿದೆ.
ಫಾರ್ಮ್ ವೆಬ್‌ಸೈಟಲ್ಲಿ ಹಣ್ಣಿನ ಮಾರಾಟ
ಇಲ್ಲಿ ಬೆಳೆಯುವ ಹಣ್ಣನ್ನು (fruits) ಸೀಸನಿಗೆ ತಕ್ಕಂತೆ ಫಾರ್ಮ್ ನ ವೆಬ್ ಸೈಟಲ್ಲಿ ಮಾರಲಾಗುತ್ತದೆ. ವೈವಿಧ್ಯತೆಗೆ ಅನುಗುಣವಾಗಿ ಆವಕಾಡೋ ವರ್ಷದ ಎಲ್ಲಾ ಸೀಸನಿನ್ನಲ್ಲಿ ಬೇರೆ ಬೇರೆ ಭಾಗದಲ್ಲಿ ಸಿಗುತ್ತದೆ. ಹಾಸ್ ಮಾದರಿಯ ಆವಕಾಡೋ ದೀರ್ಘ ಹ್ಯಾಂಗ್ ಟೈಮ್ ಹೊಂದಿರುತ್ತದೆ. ಅಂದರೆ ಹಣ್ಣು ಕೀಳಲು ರೆಡಿಯಾಗುವವರೆಗೆ ಮರದ ಮೇಲೆ ಹಾಗೆಯೇ ಬಿಡಬಹುದು. ಆರ್ಡರ್ ಸಿಕ್ಕಿದ ಕೂಡಲೇ ಇದನ್ನು ಮರದಿಂದ ಕೀಳಲಾಗುತ್ತದೆ. ಫಾರ್ಮಿನ ಹಣ್ಣುಗಳನ್ನು ಓಷಿಯನ್ ಸೈಡ್ ಅಂಗಡಿ, ರೆಸ್ಟೋರೆಂಟ್ ಮತ್ತು ಚಿಲ್ಲರೆ ಅಂಗಡಿಯವರಿಗೆ ಮಾರಾಟ ಮಾಡಲಾಗುತ್ತದೆ.
ಮ್ರಾಜ್ ಅವರ ಪತ್ನಿ ಕ್ರಿಸ್ಟಿನಾ ಇ ತೋಟವನ್ನು ಬಹಳ ಮುತುವರ್ಜಿಯಿಂದ ನೊಡಿಕೊಳ್ಳುತ್ತಾರೆ. ಇವರು ತೋಟದಲ್ಲಿ ಕೆಲಸ ಮಾಡುವ ರೈತರ ಜೊತೆ ಸೇರಿಕೊಂಡು ಸಣ್ಣ ಸಣ್ಣ ವಿಷಯಗಳ ಬಗ್ಗೆಯೂ ಗಮನ ಹರಿಸುತ್ತಾರೆ. ಜಗತ್ತಿನಲ್ಲೇ ಪ್ರಸಿದ್ದಿ ಪಡೆದ ಗಾಯನ ಕೃಷಿ ಸೇವೆ ಮತ್ತು ಕೃಷಿ ಪ್ರಯೋಗ ಇದೀಗ ವಿಶ್ವ ಮಟ್ಟದಲ್ಲೇ ಹೆಸರು ಮಾಡಿದೆ.


Click it and Unblock the Notifications
