ಮೂವರು ಜಿಲ್ಲಾಧಿಕಾರಿಗಳು ಬಂದರೂ ಪರಿಸ್ಥಿತಿ ಮಾತ್ರ ಬದಲಾಗಲಿಲ್ಲ; ದಯಾಮರಣಕ್ಕೆ ಮನವಿ ಸಲ್ಲಿಸಿದ ರೈತ
ರಾಮನಗರ, ನವೆಂಬರ್ 26: ಸಿಎಂ ಪತ್ರಕ್ಕೂ ಕ್ಯಾರೇ ಎನ್ನದ ಅಧಿಕಾರಿ ವರ್ಗ... ಐದು ವರ್ಷದ ಅವಧಿಯಲ್ಲಿ ಮೂವರು ಜಿಲ್ಲಾಧಿಕಾರಿಗಳು... ಐದು ಮಂದಿ ಅಸಿಸ್ಟೆಂಟ್ ಕಮಿಷನರ್, ಆರು ಮಂದಿ ತಾಲ್ಲೂಕು ದಂಡಾಧಿಕಾರಿಗಳು... ಆದರೂ ಬಗೆಹರಿಯದ ಸಮಸ್ಯೆ... ಇವೆಲ್ಲವನ್ನೂ ನೋಡಿ ಮನನೊಂದ ರೈತರೊಬ್ಬರು ರಾಮನಗರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ತಾಲೂಕಿನ ಜೋಗಿದೊಡ್ಡಿ ಗ್ರಾಮದ ರೈತ ಜಗದೀಶ್ ಹಾಗೂ ಪತ್ನಿ ತೇಜೋಮಣಿ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾಗೆ ದಯಾಮರಣ ಕೋರಿ ಪತ್ರ ಬರೆದಿದ್ದಾರೆ. ಕೋಳಿ ಫಾರಂ ನಡೆಸಲು ತನ್ನ ಜಮೀನಿಗೆ ರಸ್ತೆ ಮಾಡಿಸಿ, ಇಲ್ಲ ನನ್ನ ಕುಟುಂಬಕ್ಕೆ ದಯಾಮರಣ ಕರುಣಿಸಿ ಎಂದು ಪತ್ರದಲ್ಲಿ ಕೇಳಿಕೊಂಡಿದ್ದಾರೆ.
ಇವರಿಗೆ ಎರಡು ಎಕರೆ ಕೃಷಿ ಭೂಮಿ ಇದೆ. ಆ ಭೂಮಿಯಲ್ಲಿ ದುಡಿದು ತಾವೂ ಎಲ್ಲರಂತೆ ಚೆನ್ನಾಗಿ ಜೀವನ ಸಾಗಿಸಬೇಕೆಂದುಕೊಂಡಿದ್ದರು. ರಾಮನಗರ ಶಾಖೆಯ ಪಿಎಲ್ ಡಿ ಬ್ಯಾಂಕ್‌ನಿಂದ 2014ರಲ್ಲಿ ಕೋಳಿ ಫಾರಂ ಮಾಡುವುದಕ್ಕಾಗಿ 9.50 ಲಕ್ಷ ರೂಪಾಯಿ ಸಾಲ ಕೂಡ ಪಡೆದಿದ್ದರು. ಆದರೆ ಕೋಳಿ ಫಾರಂ ಕಟ್ಟಿಸಿ ಇನ್ನೇನು ವ್ಯವಹಾರ ಶುರು ಮಾಡಬೇಕಿತ್ತು, ಅಷ್ಟರಲ್ಲಿ ಇವರ ಜಮೀನಿನ ಅಕ್ಕಪಕ್ಕದವರು ತಗಾದೆ ತೆಗೆದು ಇವರ ಜಮೀನಿಗಿದ್ದ ರಸ್ತೆಯನ್ನೇ ಬಂದ್ ಮಾಡಿದರು. ರಸ್ತೆ ಬಂದ್ ಮಾಡಿದ ಕಾರಣ ಕೋಳಿ ಫಾರಂ ಬ್ಯುಸಿನೆಸ್ ಅರ್ಧಕ್ಕೆ ನಿಂತಿತು. ನಂತರ ಜಗದೀಶ್ ತಮ್ಮ ಜಮೀನಿಗೆ ರಸ್ತೆ ಮಾಡಿಕೊಡಿ ಎಂದು ಕಳೆದ ಐದು ವರ್ಷಗಳಿಂದ ಅಂದಿನಿಂದ ಇಂದಿನವರೆಗೆ ತಾಲೂಕು ಅಧಿಕಾರಿಗಳು, ಜಿಲ್ಲಾಧಿಕಾರಿಗಳಿಗೆ ಸಾಕಷ್ಟು ಪತ್ರ ಬರೆದಿದ್ದಾರೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ.

ಸಿಎಂ ಪತ್ರಕ್ಕೂ ಕ್ಯಾರೇ ಎನ್ನದ ಅಧಿಕಾರಿಗಳು: ಈ ಹಿಂದೆ ಕ್ಷೇತ್ರದ ಶಾಸಕರು ಹಾಗೂ ಸಿಎಂ ಆಗಿದ್ದ ಎಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಇವರು ಜನತಾ ದರ್ಶನದಲ್ಲಿ ಸಮಸ್ಯೆ ಹೇಳಿಕೊಂಡು ಪತ್ರ ನೀಡಿದ್ದಾರೆ. ಇದಕ್ಕೆ ಸ್ಪಂದಿಸಿದ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. "ಆದರೆ ಅಧಿಕಾರಿಗಳು ಯಾವುದಕ್ಕೂ ಸ್ಪಂದಿಸುತ್ತಿಲ್ಲ, ಪ್ರತಿ ದಿನ ಕಚೇರಿಗೆ ತಿರುಗಿದರೂ ಪ್ರಯೋಜನವಾಗಿಲ್ಲವೆಂದು" ಎಂದು ಬೇಸರ ವ್ಯಕ್ತಪಡಿಸುತ್ತಾರೆ ಜಗದೀಶ್.

ಸಾಲದ ಶೂಲದಲ್ಲಿ ರೈತ: ಕೋಳಿ ಫಾರಂಗಾಗಿ ಪಡೆದಿದ್ದ 9.5 ಲಕ್ಷದ ಜೊತೆಗೆ ಈಗ 4 ಲಕ್ಷ ಬಡ್ಡಿ ಕೂಡ ಹೆಚ್ಚಳವಾಗಿದ್ದು, ಯಾವುದೇ ಸಂಪಾದನೆಯಿಲ್ಲದೆ ಸಾಲ ತೀರಿಸುವುದು ಹೇಗೆ ಎಂದು ಪ್ರಶ್ನಿಸುತ್ತಾರೆ ಜಗದೀಶ್. ಬ್ಯಾಂಕಿನ ಸಾಲದ ನೋಟೀಸ್ ಪದೇ ಪದೇ ಬರುತ್ತಿರುವುದು ಇವರ ಆತಂಕ ಹೆಚ್ಚಿಸಿದೆ. "ರೈತರ ಸಾಲ ಮನ್ನಾ ಯೋಜನೆಯಲ್ಲೂ ನನ್ನ ಸಾಲ ಮನ್ನಾ ಆಗಿಲ್ಲ. ಬದುಕು ನಡೆಸುವುದು ಹೇಗೆ?, ನಮ್ಮ ಸಮಸ್ಯೆ ಪರಿಹರಿಸಿ ಇಲ್ಲಾ ನಮಗೆ ದಯಾಮರಣ ಕರುಣಿಸಿ ಎಂದು ಬೇಡಿಕೊಳ್ಳುತ್ತಿದ್ದೇವೆ" ಎನ್ನುತ್ತಿದ್ದಾರೆ ಈ ರೈತ ದಂಪತಿ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications