ಮನೆಯಲ್ಲೇ ಕುಳಿತು ಜಮೀನು, ಬೆಳೆಗಳ ವೀಕ್ಷಣೆ: ಬೆಳೆಗೆ ಕ್ಯಾಮೆರಾ ಕಣ್ಣು!
ರಾಯಚೂರು ಜನವರು 11: ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಮೇದಿನಾಪುರದ ರೈತ ಶರಣಬಸವ ಅವರು ತಮ್ಮ ಜಮೀನಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಮೂಲಕ ಬೆಳೆ ರಕ್ಷಣೆಗೆ ಮುಂದಾಗಿದ್ದಾರೆ. ಬರ ಹಿನ್ನೆಲೆ ರಾಯಚೂರು ಹಾಗೂ ಯಾದಗಿರಿಯಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗುತ್ತಿವೆ. ಹೀಗಾಗಿ ಕಳ್ಳತನ ಕೊನೆಗಾಣಿಸಲು ಜಮೀನಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಮನೆಯಲ್ಲೇ ಕುಳಿತು ಬೆಳೆ ನೋಡಲು ಮುಂದಾಗಿದ್ದಾರೆ.
ಸದ್ಯ ಹುಲುಸಾಗಿ ಬೆಳೆದಿರುವ ಮಣಿಸಿನಕಾಯಿ ಬೆಳೆಯನ್ನು ಕಳ್ಳರಿಂದ ರಕ್ಷಿಸಿಕೊಳ್ಳುವುದೇ ಸವಾಲಾಗಿದೆ. ಹೀಗಾಗಿ ಜಮೀನಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಮೊಬೈಲ್ ನಲ್ಲಿ ಸಾಫ್ಟ್ ವೇರ್ ಹಾಕಿಕೊಂಡು ಇದ್ದ ಜಾಗದಿಂದಲೇ ಜಮೀನನ್ನು ವೀಕ್ಷಿಸುತ್ತಿರುವುದರಿಂದ ಕಳ್ಳರಿಗೆ ನುಂಗಲಾರದ ತುತ್ತಾಗಿದೆ. ಬೆಳೆದು ನಿಂತಿರುವ ಬೆಳೆಗೆ ಕಳ್ಳರ ಕಾಟ ಹೆಚ್ಚಾಗಿದೆ. ಹೀಗಾಗಿ ಪೊಲೀಸ್ ಇಲಾಖೆಯೂ ಸಹಾಯಕ್ಕೆ ಬರಬೇಕು ಎಂದು ರೈತರು ಮನವಿ ಮಾಡಿದ್ದಾರೆ.

ಕೀಟನಾಶಕ, ಗೊಬ್ಬರಕ್ಕಾಗುವ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಎಕರೆಗೆ 10 ರಿಂದ 12 ಕ್ವಿಂಟಾಲ್ ಬೆಳೆ ಬರುವ ನಿರೀಕ್ಷೆ ಇದೆ. 2 ರಿಂದ 3 ಕ್ವಿಂಟಾಲ್ ಬೆಳೆ ಕಳ್ಳರ ಪಾಲಾಗುವ ಆತಂಕದಲ್ಲಿ ರೈತರು ಇದ್ದಾರೆ. ಲಿಂಗಸೂಗೂರು ತಾಲ್ಲೂಕಿನ ಮೇದಿನಾಪುರ ಗ್ರಾಮದ ರೈತ ಶರಣಬಸವ, ತಮ್ಮ ಜಮೀನಿಗೆ ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ. ಮೊಬೈಲ್ ನಲ್ಲಿ ಸಾಫ್ಟ್ ವೇರ್ ಹಾಕಿಕೊಂಡಿದ್ದಾರೆ.
ಮನೆಯಿ ಂದಲೇ ಜಮೀನು ವೀಕ್ಷಣೆ ಮಾಡುತ್ತಿದ್ದಾರೆ. ಆದರೂ ಕಳ್ಳರ ಭಯದಿಂದ ರಾತ್ರಿ ಜಮೀನಿನಲ್ಲೇ ಮಲಗುತ್ತಾರೆ. 3 ಎಕರೆಯಲ್ಲಿ ಮೆಣಿಸಿನಕಾಯಿ ಬೆಳೆದಿದ್ದಾರೆ. 3.5 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಬೆಳೆ ಉಳಿಸಿಕೊಳ್ಳಲು 13 ಸಾವಿರ ರೂಪಾಯಿ ಖರ್ಚು ಮಾಡಿ ಸಿಸಿ ಕ್ಯಾಮೆರಾದ ಮೊರೆ ಹೋಗಿದ್ದಾರೆ. 30 ಮೀಟರ್ ವ್ಯಾಪ್ತಿ ಯಲ್ಲಿ ಯಾವುದೇ ವ್ಯಕ್ತಿ ಜಮೀನಿಗೆ ಕಾಲಿಟ್ಟರೆ , ಬೀಪ್ ಸೌ ಂಡ್ ಬರುತ್ತದೆ.

ಹೀಗಾಗಿ ಕಳ್ಳರ ಜತೆಗೆ ಕಾಡುಪ್ರಾಣಿಗಳಿಂದಲೂ ರಕ್ಷಣೆಗೆ ಅನುಕೂಲವಾಗಿದೆ. ಮೆಣಿಸಿನಕಾಯಿ ಬೆಳೆದಿರುವ ರೈತರಿಗೆ ಕಳ್ಳರ ಕಾಟ ಶುರುವಾಗಿದೆ. ಈ ಮೊದಲು ಹತ್ತಿ , ತೊಗರಿ ಕಳ್ಳತನ ಮಾಡುತ್ತಿದ್ದರು. ಈಗ ಮೆಣಿಸಿನಕಾಯಿಗೂ ಲಗ್ಗೆ ಇಟ್ಟಿದ್ದಾರೆ. ಗಿಡಸಹಿತ ಕಳ್ಳತನ ಮಾಡಿದರೆ ಒಣಗಲು ಹಾಕಿದ ಮೆಣಿಸಿನಕಾಯಿ ಕಾಯುವುದೇ ರೈತರಿಗೆ ಕೆಲಸವಾಗಿದೆ.
ಜಿ ಲ್ಲೆಯಲ್ಲಿ ಬರ ಅವರಿಸಿದ್ದರಿಂದ ಬೆಳೆಗಳಿಗೆ ಕಳ್ಳರ ಕಾಟ ಹೆಚ್ಚಾಗಿದೆ. ಹೀಗಾಗಿ 3 ಎಕರೆಗೆ ಜಮೀನಿನಲ್ಲಿ 3.5 ಲಕ್ಷ ರೂಪಾಯಿ ಖರ್ಚು ಮಾಡಿ ಮೆಣಿಸಿನಕಾಯಿ ಬೆಳೆ ಯಲಾಗಿದೆ. ಬೆಳೆ ಉಳಿಸಿಕೊಳ್ಳಲು 13 ಸಾವಿರ ರೂಪಾಯಿ ಖರ್ಚು ಮಾಡಿ ಸಿಸಿ ಕ್ಯಾಮೆರಾ ಅಳವಡಿಸಿರುವೆ ಎ ಂದು ಲಿಂಗಸೂಗೂರು ರೈತ ಶರಣಬಸವ ಹೇಳಿದರು.












Click it and Unblock the Notifications