ದೆಹಲಿ ಗಡಿ ಪ್ರತಿಭಟನಾ ಸ್ಥಳದಿಂದ ಹಿಂದಿರುಗಿದ ನಂತರ ಪಂಜಾಬ್ ರೈತ ಆತ್ಮಹತ್ಯೆ
ಚಂಡೀಗಡ, ಡಿಸೆಂಬರ್ 20: ಡಿಸೆಂಬರ್ 18 ರಂದು ದೆಹಲಿ ಗಡಿಯ ಸಮೀಪ ರೈತ ಪ್ರತಿಭಟನಾ ಸ್ಥಳದಿಂದ ಮರಳಿದ್ದ 22 ವರ್ಷದ ಪಂಜಾಬ್ ರೈತ ವಿಷಕಾರಿ ವಸ್ತು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಪಂಜಾಬ್ ರಾಜ್ಯದ ಬತಿಂಡಾ ಜಿಲ್ಲೆಯ ದಯಾಲ್‌ಪುರ ಮಿರ್ಜಾ ಗ್ರಾಮದ ನಿವಾಸಿ ಗುರ್ಲಭ್ ಸಿಂಗ್, ದೆಹಲಿ ಗಡಿಯ ಸಮೀಪ ಪ್ರತಿಭಟನೆಯ ಭಾಗವಾಗಿದ್ದರು. ಡಿಸೆಂಬರ್ 18ರ ಶುಕ್ರವಾರ ತಮ್ಮ ಗ್ರಾಮಕ್ಕೆ ವಾಪಸ್ಸಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆತನ ಮನೆಯಲ್ಲಿ ಶನಿವಾರ ಕೆಲವು ವಿಷಕಾರಿ ಪದಾರ್ಥಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು ಎಂದು ಘೋಷಿಸಲಾಗಿದೆ.

ಆತ್ಮಹತ್ಯೆಯ ಹಿಂದಿನ ಕಾರಣವನ್ನು ಇನ್ನೂ ತನಿಖೆ ಮಾಡಬೇಕಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಗುರ್ಲಭ್ ಸಿಂಗ್ ಅವರು ಸಣ್ಣ ಕೃಷಿಕರಾಗಿದ್ದು, ಅವರ ಸಾಲ 6 ಲಕ್ಷ ರೂ.ಗೆ ಏರಿಕೆಯಗಿತ್ತು ಎನ್ನಲಾಗಿದೆ.
ಕೇಂದ್ರ ಸರ್ಕಾರದ ಇತ್ತೀಚಿನ ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಹರಿಯಾಣ ಮತ್ತು ಪಂಜಾಬ್ ಸೇರಿದಂತೆ ದೇಶದ ವಿವಿಧ ಭಾಗಗಳ ರೈತರು ನಾಲ್ಕು ವಾರಗಳ ಕಾಲ ದೆಹಲಿಯ ವಿವಿಧ ಗಡಿ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ.












Click it and Unblock the Notifications