ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

PMFBY ಯೋಜನೆಯು ವಿಶ್ವದ 3ನೇ ದೊಡ್ಡ ಬೆಳೆ ವಿಮೆ ವ್ಯವಸ್ಥೆ ಆಗಿದೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 21: ರೈತರ ಸಂಕಷ್ಟಕ್ಕೆ ಆರ್ಥಿಕವಾಗಿ ಸ್ಪಂದಿಸುವ ಈ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ (ಪಿಎಂಜಿಎಸ್‌ವೈ) ಒಟ್ಟು ಪ್ರೀಮಿಯಂ ಪ್ರಕಾರ ವಿಶ್ವದ ಮೂರನೇ ಅತೀ ದೊಡ್ಡ ಬೆಳೆ ವಿಮಾ ಯೋಜನೆ ಆಗಿದ ಎಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ತಿಳಿಸಿದರು.

ಬುಧವಾರ ಸಂಸತ್ತಿಗೆ ಮಾಹಿತಿ ನೀಡಿದ ಅವರು, 2016 ರಲ್ಲಿ ಪ್ರಾರಂಭವಾದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್‌ಬಿವೈ)ಯು ರೈತರ ಅರ್ಜಿಗಳ ಪರಿಹಾರ ವಿಚಾರದಲ್ಲಿ ವಿಶ್ವದ ನಂಬರ್ ಒನ್ ಬೆಳೆ ವಿಮಾ ಯೋಜನೆಯೂ ಆಗಿದೆ. ರಾಜ್ಯ ಸರ್ಕಾರವು ಸೂಚಿಸಿದ ಬೆಳೆಗಳಿಗೆ ಬಿತ್ತನೆ ಪೂರ್ವದಿಂದ ಸುಗ್ಗಿಯ ನಂತರದವರೆಗೆ ಎದುರಿಸುವ ನೆರೆ, ಅತೀವೃಷ್ಟಿ, ಬರಗಾಲ ಮುಂತಾದ ನೈಸರ್ಗಿಕ ಅಪಾಯಗಳಿಗೆ ಉಂಟಾದ ಹಾನಿಯ ಪರಿಹಾರ ವಿಮೆಯನ್ನು ಯೋಜನೆ ಮೂಲಕ ಒದಗಿಸಲಾಗುತ್ತಿದೆ ಎಂದು ಅವರು ಲಿಖಿತವಾಗಿ ಉತ್ತರಿಸಿದರು.

ಕಾಂಗ್ರೆಸಿನ ಇತಿಹಾಸ ಪ್ರಜ್ಞೆ ಪ್ರಧಾನಮಂತ್ರಿ ಬದಲಾದಂತೆ ಬದಲಾಗುವುದೇ?: ಬಿಜೆಪಿ ಪ್ರಶ್ನೆಕಾಂಗ್ರೆಸಿನ ಇತಿಹಾಸ ಪ್ರಜ್ಞೆ ಪ್ರಧಾನಮಂತ್ರಿ ಬದಲಾದಂತೆ ಬದಲಾಗುವುದೇ?: ಬಿಜೆಪಿ ಪ್ರಶ್ನೆ

2021-22ನೇ ಹಣಕಾಸು ವರ್ಷದಲ್ಲಿ 832.24 ಲಕ್ಷ ರೈತರು ಪಿಎಂಎಫ್‌ಬಿವೈ ಅಡಿಯಲ್ಲಿ ವಿಮೆಗೆ ನೋಂದಣಿ ಮಾಡಿಕೊಂಡಿದ್ದಾರೆ. 2021-22ರಲ್ಲಿ ರೈತರು ಪಾವತಿಸಿದ ಪ್ರೀಮಿಯಂ ಹಣ ಒಟ್ಟು 3,77,026 ಕೋಟಿ ರೂಪಾಯಿ ಆಗಿದ್ದರೆ, ಪರಿಹಾರಕ್ಕಾಗಿ ಕ್ಲೈಮ್‌ ಮಾಡಿಕೊಂಡ ಹಣ ಸರಿಸುಮಾರು ಒಟ್ಟು 13,728.63 ಕೋಟಿ ರೂಪಾಯಿ ಎಂದು ಅವರು ತಿಳಿಸಿದರು.

PMFBY Is World 3rd Big Crop Insurance Scheme Narendra Singh Tomar

ಯೋಜನೆಯ ನಿಬಂಧನೆಗಳ ಪ್ರಕಾರ, ವಿಮಾ ಕಂಪನಿಗಳಿಂದ ಬಿಡ್ (ಹರಾಜು) ಪ್ರೀಮಿಯಂ ದರವನ್ನು ವಿಧಿಸಲಾಗುತ್ತದೆ. ಆದರೆ ರೈತರು ರಾಬಿ (ಹಿಂಗಾರು) ಮತ್ತು ಖಾರಿಫ್ (ಮುಂಗಾರು ಹಂಗಾಮು) ಆಹಾರ ಮತ್ತು ಎಣ್ಣೆಕಾಳು ಬೆಳೆಗಳಿಗೆ ಕ್ರಮವಾಗಿ ಶೇ.1.5 ಮತ್ತು ಶೇ.2 ಹಾಗೂ ವಾಣಿಜ್ಯ ಅಥವಾ ತೋಟಗಾರಿಕಾ ಬೆಳೆಗಳಿಗೆ ಶೇ.5ರಷ್ಟು ಗರಿಷ್ಠ ಪ್ರೀಮಿಯಂ ಮಾತ್ರ ಪಾವತಿಸಬೇಕಾಗುತ್ತದೆ.

ಬೆಳೆಗಳಿಗೆ ನೈಸರ್ಗಿಕ ಅಪಾಯ: ಮಾಹಿತಿ ಆಧರಿಸಿ ಪರಿಹಾರ

ಹರಾಜು ಪ್ರೀಮಿಯಂನ ಉಳಿದ ಭಾಗವನ್ನು 50:50 ಆಧಾರದ ಮೇಲೆ ಕೇಂದ್ರ ಮತ್ತು ಸಂಬಂಧಪಟ್ಟ ರಾಜ್ಯ ಸರ್ಕಾರವು ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ 90:10 ರ ಅನುಪಾತದಲ್ಲಿ ಹಂಚಿಕೊಳ್ಳುತ್ತವೆ. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅನ್ನು ಮುಖ್ಯವಾಗಿ 'ಏರಿಯಾ ಅಪ್ರೋಚ್' ಆಧಾರದ ಮೇಲೆ ಅಳವಡಿಸಲಾಗಿದೆ. ಹಂಗಾಮಿನ ಅಂತ್ಯ ಮತ್ತು ಒಟ್ಟಾರೆ ಇಳುವರಿ ಮಾಹಿತಿ ಆಧಾರದ ಮೇಲೆ ವಿಮಾ ಕಂಪನಿಗಳಿಂದ ವಿಮಾ ಪರಿಹಾರ ಮೊತ್ತ ವಿತರಣೆ ಕಾರ್ಯ ನಡೆಯುತ್ತದೆ. ಹಣ ನೇರವಾಗಿ ವಿಮಾ ಕಂಪನಿಗಳಿಂದ ಪಾವತಿಸಲಾಗುತ್ತದೆ.

PMFBY Is World 3rd Big Crop Insurance Scheme Narendra Singh Tomar

ಆಲಿಕಲ್ಲು ಮಳೆ, ಭೂಕುಸಿತ, ಮುಳುಗುವಿಕೆ ಮತ್ತು ನೈಸರ್ಗಿಕ ಬೆಂಕಿ ಮತ್ತು ಚಂಡಮಾರುತ, ಅಕಾಲಿಕ ಮಳೆಯಿಂದ ಸುಗ್ಗಿಯ ನಂತರದ ನಷ್ಟಗಳ ಮಾಹಿತಿಯನ್ನು ಕಲೆ ಹಾಕಲಾಗುತ್ತದೆ. ಅದನ್ನು ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟ ವಿಮಾ ಕಂಪನಿಯ ಪ್ರತಿನಿಧಿಗಳನ್ನು ಒಳಗೊಂಡ ಜಂಟಿ ಸಮಿತಿಯು ಮೌಲ್ಯಮಾಪನ ಮಾಡುತ್ತದೆ. ಬಳಿಕ ಪರಿಹಾರ ವಿತರಣೆ ಕಾರ್ಯ ನಡೆಯುತ್ತದೆ ಎಂದು ತೋಮರ್ ವಿವರಿಸಿದರು.

English summary
Pradhan Mantri Fasal Bima Yojana (PMFBY) of India is world 3rd big crop insurance scheme, Central Agriculture minister Narendra Singh Tomar said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X