• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಂ ಕಿಸಾನ್: 12ನೇ ಕಂತಿನ ಪಟ್ಟಿಯಲ್ಲಿ ನಿಮ್ಮ ಹೆಸರು ಹೇಗೆ ಪರಿಶೀಲಿಸಬೇಕು ತಿಳಿಯಿರಿ

|
Google Oneindia Kannada News

ಕೇಂದ್ರ ಸರಕಾರವಾಗಲಿ ಅಥವಾ ರಾಜ್ಯ ಸರಕಾರಗಳಾಗಲಿ, ಇವೆರಡೂ ಆಯಾ ಹಂತಗಳಲ್ಲಿ ಅನೇಕ ಪ್ರಯೋಜನಕಾರಿ ಮತ್ತು ಕಲ್ಯಾಣ ಯೋಜನೆಗಳನ್ನು ನಿರ್ವಹಿಸುತ್ತವೆ. ಸಮಾಜದ ಪ್ರತಿಯೊಂದು ಬಡ ವರ್ಗವನ್ನು ತಲುಪುವುದು ಈ ಯೋಜನೆಗಳ ಉದ್ದೇಶವಾಗಿದೆ.

ಆರ್ಥಿಕ ಪ್ರಯೋಜನಗಳನ್ನು ನೀಡುವ ಆರೋಗ್ಯ, ಉದ್ಯೋಗ ಶಿಕ್ಷಣದಂತಹ ಹಲವು ರೀತಿಯ ಯೋಜನೆಗಳು ಇವುಗಳಲ್ಲಿ ಸೇರಿವೆ. ಬಡ ರೈತರಿಗಾಗಿ ಕೇಂದ್ರ ಸರ್ಕಾರ ನಡೆಸುತ್ತಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಂತಹ ಒಂದು ಯೋಜನೆಯಾಗಿದೆ.

ಇದರಲ್ಲಿ ವಾರ್ಷಿಕವಾಗಿ ಒಟ್ಟು 6 ಸಾವಿರ ರೂ.ಗಳನ್ನು ನೀಡಲಾಗುತ್ತಿದ್ದು, ತಲಾ 2 ಸಾವಿರ ರೂ.ಗಳಂತೆ ಮೂರು ಕಂತುಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ರವಾನೆಯಾಗುತ್ತದೆ. ಇದುವರೆಗೆ 11 ಕಂತುಗಳು ಬಿಡುಗಡೆಯಾಗಿದ್ದು, 12ನೇ ಕಂತಿಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಆದರೆ ಅದಕ್ಕೂ ಮೊದಲು ನೀವು ಬಯಸಿದರೆ ನಿಮ್ಮ ಸ್ಥಿತಿಯನ್ನು ನೀವು ಪರಿಶೀಲಿಸಬಹುದು ರೈತರಿಗೆ ಅಗತ್ಯವಾಗಿದೆ.

 ಪಿಎಂ ಕಿಸಾನ್ 12ನೇ ಕಂತಿನ ಹಣ ಯಾವಾಗ ಬರುತ್ತದೆ?

ಪಿಎಂ ಕಿಸಾನ್ 12ನೇ ಕಂತಿನ ಹಣ ಯಾವಾಗ ಬರುತ್ತದೆ?

ಇದುವರೆಗೆ ರೈತರ ಪಿಎಂ ಕಿಸಾನ್‌ 12 ನೇ ಕಂತಿನ ಬಗ್ಗೆ ಸರ್ಕಾರದಿಂದ ಯಾವುದೇ ನವೀಕರಣವನ್ನು ನೀಡಲಾಗಿಲ್ಲ. ಮಾಧ್ಯಮ ವರದಿಗಳ ಪ್ರಕಾರ, 12ನೇ ಕಂತು ಅಕ್ಟೋಬರ್ ತಿಂಗಳ ಯಾವುದೇ ದಿನದಂದು ಬಿಡುಗಡೆಯಾಗಬಹುದು ಅಥವಾ ದೀಪಾವಳಿ ಹಬ್ಬದ ಮುನ್ನವೇ ಹಣ ರೈತರ ಖಾತೆಗೆ ಜಮಾ ಆಗಬಹುದು.
ಸಾಮಾನ್ಯವಾಗಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ, ಮೊದಲ ಕಂತನ್ನು ಏಪ್ರಿಲ್ 1 ಮತ್ತು ಜುಲೈ 31ರ ನಡುವೆ ವರ್ಗಾಯಿಸಲಾಗುತ್ತದೆ. ಎರಡನೇ ಕಂತನ್ನು ಆಗಸ್ಟ್ 1 ರಿಂದ ನವೆಂಬರ್ 30ರ ನಡುವೆ ವರ್ಗಾಯಿಸಲಾಗುತ್ತದೆ. ಮೂರನೇ ಕಂತನ್ನು ಡಿಸೆಂಬರ್ 1 ರಿಂದ ಮಾರ್ಚ್ 31 ರ ನಡುವೆ ವರ್ಗಾಯಿಸಲಾಗುತ್ತದೆ.

 ಪಿಎಂ ಕಿಸಾನ್ ಪಾವತಿಯನ್ನು ಹೀಗೆ ಪರಿಶೀಲಿಸಿ

ಪಿಎಂ ಕಿಸಾನ್ ಪಾವತಿಯನ್ನು ಹೀಗೆ ಪರಿಶೀಲಿಸಿ

*ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ( https://pmkisan.gov.in)
*ನೀವು 'ಫಲಾನುಭವಿ ಸ್ಥಿತಿ' ಆಯ್ಕೆಯನ್ನು ಕ್ಲಿಕ್ ಮಾಡಬೇಕು.
*ಇಲ್ಲಿ ಹೊಸ ಪುಟ ತೆರೆಯುತ್ತದೆ.
*ನಿಮ್ಮ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆಯಿಂದ ಯಾವುದಾದರೂ ಒಂದು ಆಯ್ಕೆಯನ್ನು ಆರಿಸಿಕೊಳ್ಳಿ.
*ನಿಮ್ಮ ಖಾತೆಗೆ ಹಣ ಬರುತ್ತದೋ ಇಲ್ಲವೋ ಎಂಬುದನ್ನು ಈ 2 ಸಂಖ್ಯೆಗಳ ಮೂಲಕ ಪರಿಶೀಲಿಸಬಹುದು.
*ಇವುಗಳಲ್ಲಿ ಯಾವುದಾದರೂ ಸಂಖ್ಯೆಯನ್ನು ನಮೂದಿಸಿ, ನೀವು 'ಡೇಟಾ ಪಡೆಯಿರಿ' ಮೇಲೆ ಕ್ಲಿಕ್ ಮಾಡಬೇಕು
*ಎಲ್ಲಾ ವಹಿವಾಟಿನ ವಿವರಗಳನ್ನು ವೀಕ್ಷಿಸಿ.
*ಇ-ಕೆವೈಸಿ ಇಲ್ಲದಿರುವವರು ಸಮಸ್ಯೆಗಳನ್ನು ಎದುರಿಸಬಹುದು
*ವರದಿಗಳ ಪ್ರಕಾರ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಇನ್ನೂ ಇ-ಕೆವೈಸಿ ಮಾಡದ ರೈತರು 12ನೇ ಕಂತು ಪಡೆಯಲು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ಗಮನಿಸಬೇಕಾದ ಸಂಗತಿಯೆಂದರೆ, ಸರ್ಕಾರವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಇ-ಕೆವೈಸಿಗೆ 31 ಆಗಸ್ಟ್ 2022ನ್ನು ಕೊನೆಯ ದಿನಾಂಕವೆಂದು ನಿಗದಿಪಡಿಸಿದೆ, ಅದು ಈಗ ಜಾರಿಗೆ ಬಂದಿದೆ.

 ಒಂದು ವೇಳೆ ಈ ಬಾರಿ ವಿಳಂಬಕ್ಕೆ ಕಾರಣ

ಒಂದು ವೇಳೆ ಈ ಬಾರಿ ವಿಳಂಬಕ್ಕೆ ಕಾರಣ

ನಿಯಮಗಳ ಪ್ರಕಾರ, ಈ ಯೋಜನೆಯ ಲಾಭ ಪಡೆಯಲು ಇ-ಕೆವೈಸಿ ಕಡ್ಡಾಯವಾಗಿದೆ. ರೈತ ಫಲಾನುಭವಿಯು ತನ್ನ ಇ-ಕೆವೈಸಿಯನ್ನು ಮಾಡದಿದ್ದರೆ, ರೈತರ ಮುಂದಿನ ಕಂತು ಹಣವು ಬರದೆ ಇರಬಹುದು ದಯವಿಟ್ಟು ನಿಮ್ಮ ಹತ್ತಿರದ ಕೃಷಿ ಇಲಾಖೆಗೆ ಭೇಟಿ ನೀಟಿ ನಿಮ್ಮ ಇ-ಕೆವೈಸಿ ಬಗ್ಗೆ ನೀವು ಖಚಿತ ಮಾಹಿತಿಯನ್ನು ತಿಳಿದುಕೊಳ್ಳಬಹುದು.ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ವಂಚನೆಯನ್ನು ತಡೆಯಲು ಸರ್ಕಾರ ಕಟ್ಟುನಿಟ್ಟಾಗಿದೆ. ಯಾವಾಗ ಮೋದಿ ಸರ್ಕಾರ ಇ-ಕೆವೈಸಿಯನ್ನು ಕಡ್ಡಾಯಗೊಳಿಸಿತು, ಆಗ ಪಿಎಂ ಕಿಸಾನ್‌ನ ಕಂತು ವಿಳಂಬವಾಗತೊಡಗಿತು. ಇದಲ್ಲದೇ ರಾಜ್ಯ ಸರಕಾರ ಇದೀಗ ಗ್ರಾಮದಿಂದ ಗ್ರಾಮಕ್ಕೆ ಫಲಾನುಭವಿಗಳ ಭೌತಿಕ ಪರಿಶೀಲನೆ ನಡೆಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸಹಿ ಮಾಡಲಾಗುತ್ತಿಲ್ಲ. ಎಎಫ್‌ಟಿಗೆ ಸಹಿ ಮಾಡಿದ ನಂತರವೇ ಎಫ್‌ಟಿಒ ರಚಿಸಲಾಗುತ್ತದೆ ಮತ್ತು ಕಂತುಗಳನ್ನು ನಿಗದಿತ ದಿನಾಂಕದಂದು ರೈತರ ಖಾತೆಗಳಿಗೆ ಕಳುಹಿಸಲಾಗುತ್ತದೆ.

 12 ಕೋಟಿ ರೈತರಿಗೆ ಲಾಭ

12 ಕೋಟಿ ರೈತರಿಗೆ ಲಾಭ

ಯೋಜನೆಯ ವಿವರಗಳು: ಕೇಂದ್ರ ಸರ್ಕಾರವು 2019 ರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯನ್ನು ಪ್ರಾರಂಭಿಸಿತು. ಯೋಜನೆಯಡಿ ಆರ್ಥಿಕವಾಗಿ ದುರ್ಬಲವಾಗಿರುವ ರೈತರಿಗೆ ಸರಕಾರ ಪ್ರತಿ ವರ್ಷ 6000 ರೂ. ಈ ಮೊತ್ತವನ್ನು ಮೂರು ಸಮಾನ ಕಂತುಗಳಲ್ಲಿ ನೀಡಲಾಗುತ್ತದೆ. ಪ್ರತಿ ಕಂತಿನಲ್ಲಿ 2000 ರೂಪಾಯಿಗಳನ್ನು ವರ್ಗಾಯಿಸಲಾಗುತ್ತದೆ.ರೈತರ ಖಾತೆಗೆ ಈಗಾಗಲೇ ಒಟ್ಟು 11 ಕಂತಿನ ಹಣ ಬಂದಿದೆ. ಕೊನೆಯ ಕಂತುಗಳನ್ನು 11,19,83,555 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ಈಗ 12 ಕೋಟಿಗೂ ಹೆಚ್ಚು ರೈತರು 12ನೇ ಕಂತಿನ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಇದಕ್ಕಾಗಿ ಇ-ಕೆವೈಸಿ ಕಡ್ಡಾಯವಾಗಿದೆ.

English summary
PM Kisan Yojana: Know how to check your name in 12th Installment list. Here details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X