ಪಿಎಂ ಕಿಸಾನ್ ಇ-ಕೆವೈಸಿ, ರೈತರಿಗೆ ಆ. 31ರ ತನಕ ಗಡುವು
ನವದೆಹಲಿ ಆಗಸ್ಟ್ 21: ರೈತರು ಸಹಾಯಧನದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭ ಪಡೆಯಲು ಇಕೆವೈಸಿ ಪೂರ್ಣಗೊಳಿಸುವ ಗಡುವನ್ನು ಸರ್ಕಾರವು ಆಗಸ್ಟ್ 31ರವರೆಗೆ ವಿಸ್ತರಿಸಿ ಅಧಿಸೂಚನೆ ಹೊರಡಿಸಿದೆ.
ಈ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (ಪಿಎಂ ಕಿಸಾನ್) ಕೇಂದ್ರ ಸರ್ಕಾರದ ರಾಷ್ಟ್ರೀಯ ಯೋಜನೆಗಾಗಿ ರೈತರು ಹೇಗೆ ಇಕೆವೈಸಿ ಮಾಡಿಸಿಕೊಳ್ಳಬೇಕು. ಎಷ್ಟನೇ ಕಂತಿನ ಹಣ ರೈತರಿಗೆ ತಲುಪಲಿದೆ? ಎಂಬಿತ್ಯಾದಿ ಮಾಹಿತಿ ಬಗ್ಗೆ ಇಲ್ಲಿ ಪರಿಶೀಲಿಸಬಹುದು.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಫಲಾನುಭ ರೈತರಿಗೆ ಕೇಂದ್ರ ಸರ್ಕಾರ ಯೋಜನೆಯ 12ನೇ ಕಂತಿನ ಹಣ ನೀಡಲಿದೆ. ಈ ಸಂಬಂಧ ರೈತರು ಇಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯ ಮಾಡಿದೆ.

ಅಧಿ ಸೂಚನೆ ಪ್ರಕಾರ ಮುಂದಿನ ತಿಂಗಳ ಸೆಪ್ಟೆಂಬರ್ 1ರಂದು ರೈತರಿಗೆ ಕೇಂದ್ರವು 12ನೇ ಕಂತಿನ 2000 ರೂ. ಖಾತೆಗೆ ಜಮೆ ಮಾಡುವ ಸಾಧ್ಯತೆ ಇದೆ. ಇದಕ್ಕಾಗಿ ರೈತರು ಕೆಲವು ಮಾರ್ಗಸೂಚಿಗಳನ್ನು ಪಾಲಿಸಬೇಕು. ಅವುಗಳು ಈಕೆಳಗಿನಂತಿವೆ.
ಇ-ಕೆವೈಸಿ ಜೋಡನೆಗೆ ಈ ವಿಧಾನ ಪಾಲಿಸಿ; ಮೊದಲು ರೈತರು ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್ www.pmkisan.gov.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ನಂತರ ವೈಬ್‌ಸೈಟ್‌ನ ಮುಖಪುಟದ ಬಲಭಾಗದಲ್ಲಿ ಇಕೈವೈಸಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಅಲ್ಲಿನ ಸ್ಥಳದಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ಹುಡುಕಾಟದ ಮೇಲೆ ಟ್ಯಾಪ್ ಮಾಡಬೇಕು.
ನಂತರ ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿದರೆ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಿದ ಓಟಿಪಿ (OTP) ಅನ್ನು ವೆಬ್‌ಸೈಟ್ ಕೇಳುವ ಸ್ಥಳದಲ್ಲಿ ನಮೂದಿಸಿದರೆ ಇಕೆವೈಸಿ ಯಶಸ್ವಿಯಾಗುತ್ತದೆ. ಇದರಿಂದ ನೀವು ಕೃಷಿ ಸಹಾಯಧನ 2,000ರೂ.ಪಡೆಯಲು ಅರ್ಹರಾಗುತ್ತೀರಿ ಎಂದು ಅಧಿಸೂಚನೆ ತಿಳಿಸಿದೆ.

ಇಕೆವೈಸಿ ಮಾಡುವಾಗ ನಿಮ್ಮಲ್ಲಿರುವ ಎಲ್ಲ ಮಾಹಿತಿಗಳು ಹೊಂದಬೇಕು. ಇಲ್ಲವಾದಲ್ಲಿ ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಸರಿಪಡಿಸಿಕೊಳ್ಳಬಹುದು. ಜತೆಗೆ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ (ಸಿಎಸ್‌ಸಿ) ಭೇಟಿ ನೀಡುವ ಮೂಲಕ ಇಕೆವೈಸಿ ಆಫ್‌ಲೈನ್‌ನಲ್ಲಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂಬುದನ್ನು ಗಮನಿಸಿಕೊಳ್ಳುವುದು ಉತ್ತಮ. ಈ ಸಂಬಂಧ ರೈತರಿಗೆ ಅನುಕೂಲವಾಗಲೆಂದು ಸರ್ಕಾರ ಈ ಮೊದಲು ನೀಡಿದ್ದ ಇಕೆವೈಸಿ ಜೋಡನಾ ದಿನಾಂಕವನ್ನು ಆಗಸ್ಟ್ 31ರವರೆಗೆ ವಿಸ್ತರಿಸಿದೆ.
ಕೇಂದ್ರದಿಂದ ವಾರ್ಷಿಕ 6 ಸಾವಿರ; ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಭಾಗವಾಗಿ ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆಯಂತೆ 2,000 ರೂ. ಹಣವನ್ನು ಮೂರು ಸಮಾನ ಕಂತುಗಳಲ್ಲಿ ಭೂಮಿ ಹೊಂದಿರುವ ರೈತ ಕುಟುಂಬಗಳಿಗೆ ವಾರ್ಷಿಕವಾಗಿ 6,000 ರೂಪಾಯಿ ಆರ್ಥಿಕ ಲಾಭವನ್ನು ನೀಡಲಾಗುತ್ತದೆ. ಇದು ಕೊರೊನಾ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಯೋಜನೆ ಆಗಿದೆ.











Click it and Unblock the Notifications