ರಾಮನಗರದಲ್ಲಿ ರೇಷ್ಮೆ ರೈತರಿಗೆ ತಲೆ ನೋವಾಯ್ತು ಆನ್ಲೈನ್ ಪೇಮೆಂಟ್ ಪದ್ಧತಿ

ರಾಮನಗರ, ಜುಲೈ 27: ಏಷ್ಯಾದ ಅತೀ ದೊಡ್ಡ ರೇಷ್ಮೆ ಮಾರುಕಟ್ಟೆ ಎಂಬ ಖ್ಯಾತಿ ಹೊಂದಿದೆ ರಾಮನಗರ ಜಿಲ್ಲಾ ರೇಷ್ಮೆ ಮಾರುಕಟ್ಟೆ. ರಾಮನಗರ ಜಿಲ್ಲೆ ಮಾತ್ರವಲ್ಲದೇ ಹೊರ ಜಿಲ್ಲೆಗಳ, ಹೊರ ರಾಜ್ಯದ ರೈತರು ಸಹ ಈ ಮಾರುಕಟ್ಟೆಯಲ್ಲಿ ರೇಷ್ಮೆ ಬೆಳೆ ಮಾರಾಟ ಮಾಡುತ್ತಾರೆ. ಹಾಗಾಗಿಯೇ ಹೆಚ್ಚಿನ ಅನುಕೂಲಕ್ಕಾಗಿ ಇಲ್ಲಿ ಪ್ರಾಯೋಗಿಕವಾಗಿ ಆನ್ ಲೈನ್ ಪೇಮೆಂಟ್ ಪದ್ಧತಿಯನ್ನು ಜಾರಿಗೆ ತರಲಾಗಿದೆ.

ಆದರೆ ಅದೇ ಈಗ ರೈತರಿಗೆ ತಲೆನೋವಾಗಿ ಪರಿಣಮಿಸಿದೆ. ತಾವು ಶ್ರಮ ಪಟ್ಟು ಬೆಳೆದ ಬೆಳೆಯನ್ನು ತಂದು ಮಾರಾಟ ಮಾಡಿದ ರೈತರು ದಿನನಿತ್ಯ ಹಣಕ್ಕಾಗಿ ಅಲೆದಾಡುವಂಥ ಪರಿಸ್ಥಿತಿ ಉಂಟಾಗಿದೆ.

ಮಾರುಕಟ್ಟೆಯಲ್ಲಿ ಕಳೆದ ಆರು ತಿಂಗಳಿನಿಂದ ಆನ್‌ ಲೈನ್ ಪೇಮೆಂಟ್ ವ್ಯವಸ್ಥೆ ಜಾರಿಯಲ್ಲಿದ್ದು, ರೈತರಿಗೆ ಎರಡು ಮೂರು ದಿನಗಳಲ್ಲಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ ಎಂದು ರೈತರನ್ನು ಅಧಿಕಾರಿಗಳು ಸಾಗಹಾಕುತ್ತಿದ್ದಾರೆ. ಆದರೆ ಆ ಹಣ ಬರುವುದು 10-15 ದಿನಗಳಾಗುತ್ತಿದ್ದು, ಕೆಲವೊಮ್ಮೆ ತಿಂಗಳುಗಳೇ ಕಳೆದು ಹೋಗುತ್ತಿವೆ.

Online Payment Problem In Ramanagar Silk Market

"ಆನ್ ಲೈನ್ ಪೇಮೆಂಟ್ ಪದ್ಧತಿಯನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ಗೂಡು ಖರೀದಿಗಾರರು ರೈತರನ್ನು ಅಲೆಯುವಂತೆ ಮಾಡುತ್ತಿದ್ದಾರೆ. ಗೂಡು ಖರೀದಿಸಿ ಆನಂತರ ರೈತರ ಬ್ಯಾಂಕ್ ಖಾತೆಗೆಗೆ ಹಣ ಹಾಕದೇ ಸತಾಯಿಸುತ್ತಿದ್ದಾರೆ. ಫೋನ್ ಮಾಡಿದರೂ ಉತ್ತರ ಸಿಗುವುದಿಲ್ಲ' ಎಂದು ದೂರುತ್ತಾರೆ ಮೊಳಕಾಲ್ಮೂರು ರೈತ ಮಂಜುನಾಥ ಮತ್ತು ಮಧುಗಿರಿಯ ರೈತ ರಮೇಶ.

ಜೊತೆಗೆ, ಖರೀದಿಸಿದ ಗೂಡಿನ ಹಣವನ್ನು ರೈತರಿಗೆ ನೀಡುವ ಬದಲು ಚೆಕ್‌ಗಳನ್ನು ನೀಡುತ್ತಿದ್ದಾರೆ. ಅನಕ್ಷರಸ್ಥ ರೈತರಿಗೆ, ನಾಳೆಯೇ ಹಣ ಖಾತೆಗೆಗೆ ಬರುತ್ತೆ, ಚೆಕ್ ಹಾಕಿಕೊಳ್ಳಿ ಎಂದು 1೦-15 ದಿನಗಳ ಮುಂದಿನ ದಿನಾಂಕ ನಮೂದಿಸಿದ ಚೆಕ್‌ಗಳನ್ನು ನೀಡುತ್ತಿದ್ದಾರೆ. ಇದರಿಂದ ರೈತರು ಹಣವೂ ಸಿಗದೇ, ಸಾಲ ಮಾಡಿ ಬೆಳೆದ ಬೆಳೆಯಲ್ಲಿ ಸಾಲಗಾರರಿಗೆ ಸಾಲವನ್ನೂ ತೀರಿಸಲಾಗದೇ ಪರದಾಡುತ್ತಿದ್ದಾರೆ.

Online Payment Problem In Ramanagar Silk Market

ಅಧಿಕಾರಿಗಳು ಕೂಡ, ತಮಗೂ ರೈತರಿಗೂ ಯಾವ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ತಿಂಗಳು ಪೂರ್ತಿ ಶ್ರಮ ಹಾಕಿ ಬೆಳೆ ಬೆಳೆದು ಹಣಕ್ಕಾಗಿ ತಿಂಗಳುಗಟ್ಟಲೆ ಕಾಯುವಂತಾಗಿದೆ. ಇನ್ನಾದರೂ ರೇಷ್ಮೆ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಈ ಅವ್ಯವಸ್ಥೆಗೆ ಜಿಲ್ಲಾಡಳಿತ ತಡೆ ಹಾಕಿ ರೈತರ ನೆರವಿಗೆ ನಿಲ್ಲಲಿ ಎಂದು ಒತ್ತಾಯಿಸಿದ್ದಾರೆ ರೈತರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+