ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ಹಣ್ಣಿಗೆ 1000 ರೂ; ಭರ್ಜರಿ ಬೇಡಿಕೆ ಗಿಟ್ಟಿಸಿಕೊಳ್ಳುತ್ತಿರುವ ಈ ಮಾವಿನ ತಳಿ ಎಲ್ಲಿದೆ?

|
Google Oneindia Kannada News

ಭೋಪಾಲ್, ಜೂನ್ 07: ಮಾವಿನ ಸೀಸನ್ ಬರುವುದೇ ತಡ, ಥರಾವರಿ ಮಾವುಗಳ ಮಾರಾಟವೂ ಭರ್ಜರಿಯಾಗಿರುತ್ತದೆ. ವಿಶೇಷ ರುಚಿಯ ಮಾವು ಸವಿಯಲು ಯಾರಿಗೆ ಇಷ್ಟವಿಲ್ಲ ಹೇಳಿ?... ವಿಶೇಷತೆಗೆ ತಕ್ಕಂತೆ ಆಯಾ ತಳಿ ಮಾವಿಗೆ ಬೇಡಿಕೆಯೂ ಹೆಚ್ಚೇ ಇರುತ್ತದೆ. ಹಾಗೆಯೇ ಮಧ್ಯಪ್ರದೇಶದ ಈ ವಿಶೇಷ ತಳಿಯ ಮಾವಿನ ಹಣ್ಣಿಗೂ ಭಾರೀ ಬೇಡಿಕೆ ಬಂದಿದೆ. ಒಂದು ಹಣ್ಣು 1000 ರೂಪಾಯಿಗೆ ಮಾರಾಟವಾಗುತ್ತಿದೆ.

ಹೌದು. ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯಲ್ಲಿ ಬೆಳೆಯುವ ನೂರ್ ಜಹಾನ್ ತಳಿಯ ಮಾವಿನ ಹಣ್ಣು ಈ ಪರಿಯ ಬೇಡಿಕೆ ಗಿಟ್ಟಿಸಿಕೊಂಡಿದೆಯಂತೆ. ಒಂದು "ನೂರ್ ಜಹಾನ್" ಮಾವಿನ ಹಣ್ಣಿನ ಬೆಲೆ 500 ರೂ ಇಂದ 1000 ರೂವರೆಗೂ ಇದೆಯಂತೆ. ಮುಂದೆ ಓದಿ...

 ಅಫ್ಘಾನ್ ಮೂಲದ ಮಾವಿನ ತಳಿ

ಅಫ್ಘಾನ್ ಮೂಲದ ಮಾವಿನ ತಳಿ

"ನೂರ್ ಜಹಾನ್ ಅಫ್ಘಾನ್ ಮೂಲದ ಹಣ್ಣಂತೆ. ಇಂದೋರ್‌ನಿಂದ 250 ಕಿ.ಮೀ ದೂರದಲ್ಲಿರುವ ಕತ್ತಿವಾಡ ಪ್ರದೇಶದ ಅಲಿರಾಜ್‌ಪುರ ಜಿಲ್ಲೆಯಲ್ಲಿ ಮಾತ್ರ ಇದನ್ನು ಬೆಳೆಯಲಾಗುತ್ತಿದೆಯಂತೆ.

ಒಂದು ಜಿಲ್ಲೆ, ಒಂದು ಉತ್ಪನ್ನ; ಧಾರವಾಡಕ್ಕೆ ಮಾವುಒಂದು ಜಿಲ್ಲೆ, ಒಂದು ಉತ್ಪನ್ನ; ಧಾರವಾಡಕ್ಕೆ ಮಾವು

 2 ರಿಂದ 3.5 ಕೆ.ಜಿ. ತೂಕದ ಹಣ್ಣು

2 ರಿಂದ 3.5 ಕೆ.ಜಿ. ತೂಕದ ಹಣ್ಣು

ಕೃಷಿಕ ಶಿವರಾಜ್ ಸಿಂಗ್ ಜಾಧವ್ ಇಲ್ಲಿ ಈ ಮಾವಿನ ತಳಿಯನ್ನು ಬೆಳೆಯುತ್ತಿದ್ದಾರೆ. "ನನ್ನ ತೋಟದಲ್ಲಿ ಮೂರು ಮಾವಿನ ಮರಗಳಿವೆ. ಈ ಬಾರಿ 250 ಹಣ್ಣುಗಳು ದೊರೆತಿವೆ. ಒಂದು ಹಣ್ಣಿಗೆ 500 ರೂ ಇಂದ 1000ರೂ ಬೆಲೆ ನಿಗದಿ ಮಾಡಲಾಗಿದೆ. ಗ್ರಾಹಕರು ಬುಕ್ಕಿಂಗ್ ಮಾಡುತ್ತಿದ್ದಾರೆ ಎಂದು ಶಿವರಾಜ್ ಹೇಳಿಕೊಂಡಿದ್ದಾರೆ. ಒಂದು ಹಣ್ಣಿನ ತೂಕ 2 ಕೆ.ಜಿಯಿಂದ 3.5 ಕೆ.ಜಿವರೆಗೂ ಇರುತ್ತದೆಯಂತೆ.

 ಈ ಬಾರಿ ಉತ್ತಮ ಇಳುವರಿ

ಈ ಬಾರಿ ಉತ್ತಮ ಇಳುವರಿ

2020ರಲ್ಲಿ ಹವಾಮಾನ ವೈಪರೀತ್ಯದಿಂದ ಈ ಮಾವಿನ ಮರ ಸರಿಯಾಗಿ ಹೂ ಬಿಟ್ಟಿರಲಿಲ್ಲ. ಈ ಬಾರಿ ಉತ್ತಮ ಇಳುವರಿ ನೀಡಿದೆ. ಇದು ಜನವರಿ -ಫೆಬ್ರವರಿಯಲ್ಲಿ ಹೂ ಬಿಡಲು ಆರಂಭಿಸುತ್ತದೆ. ಜೂನ್ ಆರಂಭದಲ್ಲಿ ಮಾವು ಹಣ್ಣಾಗುತ್ತದೆ. ರುಚಿಯೂ ತುಂಬಾ ಸಿಹಿಯಾಗಿರುತ್ತದೆ ಎಂದು ಮಾಹಿತಿ ನೀಡುತ್ತಾರೆ ಈ ಮಾವಿನ ತಳಿ ಕುರಿತು ಪರಿಣತಿ ಪಡೆದಿರುವ ಇಶಾಕ್ ಮನ್ಸೂರಿ.

ಹವಾಮಾನ ಬದಲಾವಣೆ; ಮಾವು ಬೆಳೆಯುವ ರೈತರಿಗೆ ಸಲಹೆಗಳುಹವಾಮಾನ ಬದಲಾವಣೆ; ಮಾವು ಬೆಳೆಯುವ ರೈತರಿಗೆ ಸಲಹೆಗಳು

"ನೂರ್ ಜಹಾನ್‌"ಗೆ ಬರುತ್ತಿದೆ ಭಾರೀ ಬೇಡಿಕೆ

ಕಳೆದ ಬಾರಿ ಹವಾಮಾನ ವೈಪರೀತ್ಯದ ನಡುವೆ ಹಣ್ಣಿನ ಇಳುವರಿ ಸಮರ್ಪಕವಾಗಿರಲಿಲ್ಲ. ಆಗ ಈ ತಳಿಯ ಹಣ್ಣಿನ ತೂಕ ಸರಾಸರಿ 2.75 ಕೆ.ಜಿ ಇತ್ತು. ಒಂದಕ್ಕೆ 1200 ರೂ ಮಾರಾಟವಾಗಿತ್ತು. ಈ ಬಾರಿ ಉತ್ತಮ ಇಳುವರಿ ದೊರೆತಿದೆ. 3.5 ಕೆ.ಜಿ ತೂಕದ ಹಣ್ಣುಗಳು ಇವೆ. ಆದರೆ ಲಾಕ್‌ಡೌನ್‌ನಿಂದಾಗಿ ಮಾರಾಟಕ್ಕೆ ಕೊಂಚ ಸಮಸ್ಯೆಯಾಗಿದೆ. ಆದರೂ ಮಧ್ಯಪ್ರದೇಶದ ಹಾಗೂ ನೆರೆಯ ಗುಜರಾತ್‌ ನ ಮಾವು ಪ್ರಿಯರು ಆನ್‌ಲೈನ್‌ನಲ್ಲಿಯೇ ಬೇಡಿಕೆ ಇಡುತ್ತಿದ್ದಾರೆ ಎಂದು ರೈತ ಶಿವರಾಜ್ ಸಿಂಗ್ ಹೇಳುತ್ತಾರೆ.

English summary
The ''Noorjahan'' mango, cultivated in Madhya Pradesh's Alirajpur district, is fetching a higher price this year
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X