ಮತ್ತೆ ಬಂದಿದೆ ಮೈಸೂರು ದಸರಾ, ಹೋಗೋಣ ಬರ್ತಿರಾ?
ಮೈಸೂರು, ಅಕ್ಟೋಬರ್, 12: ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಅಗ್ರ ಪೂಜೆಯೊಂದಿಗೆ 'ದಸರಾ ಮಹೋತ್ಸವ 2015' ಅಕ್ಟೋಬರ್ 13ರಂದು ಆರಂಭಗೊಳ್ಳಲಿದೆ. ಬೆಳಿಗ್ಗೆ 11-05 ರಿಂದ 11-55ರೊಳಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಪ್ರಗತಿಪರ ರೈತ ಪುಟ್ಟಯ್ಯ ಅವರು ಉದ್ಘಾಟಿಸಲಿದ್ದಾರೆ.
ದಸರಾ ಮಹೋತ್ಸವ-2015 ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್, ಲೋಕೋಪಯೋಗಿ ಸಚಿವ ಎಚ್.ಸಿ ಮಹಾದೇವಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಸಂಸ್ಕೃತಿ ಸಚಿವೆ ಉಮಾಶ್ರೀ, ಸಹಕಾರ ಮತ್ತು ಸಕ್ಕರೆ ಸಚಿವ ಎಚ್. ಎಸ್ ಮಹದೇವ ಪ್ರಸಾದ್, ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಶಾಸಕ ಜಿ.ಟಿ ದೇವೇಗೌಡ ದಸರಾದ ಅಧ್ಯಕ್ಷತೆ ವಹಿಸಲಿದ್ದಾರೆ.[ಮೈಸೂರು ದಸರಾ ಉದ್ಘಾಟಿಸುವ ರೈತ ಪುಟ್ಟಯ್ಯ ಪರಿಚಯ]

ಅಕ್ಟೋಬರ್ 13ರ ದಸರಾದ ಮಧ್ಯಾಹ್ನ ಕಾರ್ಯಕ್ರಮಗಳೇನು?
* ನಾಗನ ಹಳ್ಳಿ ಕೃಷಿ ತರಬೇತಿ ಕೇಂದ್ರದಲ್ಲಿ ಅಕ್ಟೋಬರ್ 13ರ ಮಂಗಳವಾರ 1.30ಕ್ಕೆ ರೈತ ದಸರಾಗೆ ಕೃಷಿ ಸಚಿವ ಕೃಷ್ಣ ಬೈರೇಗೌಡ ಚಾಲನೆ ನೀಡಲಿದ್ದಾರೆ.
* ದಸರಾ ನಾಡ ಕುಸ್ತಿಯನ್ನು ಮಧ್ಯಾಹ್ನ 3.30ಕ್ಕೆ ಡಿ . ದೇವರಾಜ ಅರಸು ವಿವಿದೋದ್ದೇಶ ಕ್ರೀಡಾಂಗಣ ವಸ್ತು ಪ್ರದರ್ಶನ ಆವರಣದಲ್ಲಿ ಮೀನುಗಾರಿಕೆ ಸಚಿವ ಕೆ. ಅಭಯಚಂದ್ರ ಜೈನ್ ಉದ್ಘಾಟಿಸಲಿದ್ದಾರೆ.
ಸಂಜೆ ಕಾರ್ಯಕ್ರಮಗಳು :
* ದಸರಾ ಫಲಪುಷ್ಪ ಪ್ರದರ್ಶನವನ್ನು ಡಾ. ಶಾಮನೂರು ಶಿವ ಶಂಕರಪ್ಪ ಸಂಜೆ 4.30ಕ್ಕೆ ಕುಪ್ಪಣ್ಣ ಉದ್ಯಾನವನದಲ್ಲಿ ಉದ್ಘಾಟಿಸಲಿದ್ದಾರೆ.
* ಕನ್ನಡ ಪುಸ್ತಕ ಮೇಳವನ್ನು ಕನ್ನಡ ಸಂಸ್ಕೃತಿ ಸಚಿವೆ ಉಮಾಶ್ರೀ ಸಂಜೆ 5 ಕ್ಕೆ ಕಾಡಾ ಕಚೇರಿಯಲ್ಲಿ ಚಾಲನೆ ನೀಡಲಿದ್ದಾರೆ.
* ರೈತನೆಡೆಗೆ ರಂಗಾಯಣ ನಡಿಗೆ ಕಾರ್ಯಕ್ರಮವನ್ನು ಕಂದಾಯ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ರಂಗಾಯಣ ಆವರಣದಲ್ಲಿ ಸಂಜೆ 5.30ಕ್ಕೆ ಉದ್ಘಾಟನೆ ಮಾಡಲಿದ್ದಾರೆ.
* ಅರಮನೆ ಆವರಣದಲ್ಲಿ ಸಂಜೆ 6ಗಂಟೆಗೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಸಮಾರಂಭ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾರಥ್ಯ ವಹಿಸಲಿದ್ದು, ಶಾಸಕ ಎಂ.ಕೆ ಸೋಮಶೇಖರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
* ದಸರಾ ದೀಪಾಲಂಕಾರ ಸಮಾರಂಭಕ್ಕೆ ಇಂಧನ ಸಚಿವ ಡಿ.ಕೆ ಶಿವಕುಮಾರ್ ನಗರದ ಸಯ್ಯಾಜಿ ರಸ್ತೆಯಲ್ಲಿರುವ ಹಸಿರು ಮಂಟಪದಲ್ಲಿ ಸಂಜೆ 6.30ಕ್ಕೆ ಚಾಲನೆ ನೀಡಲಿದ್ದಾರೆ.
ಅಕ್ಟೋಬರ್ 14ರ ಬುಧವಾರ ಕಾರ್ಯಕ್ರಮಗಳು:
* 'ಪಾರಂಪರಿಕ ನಡಿಗೆ'ಯನ್ನು ಮಾಹಿತಿ ತಂತ್ರಜ್ಞಾನ ಸಚಿವ ಎಸ್.ಆರ್ ಪಾಟೀಲ್ ಅವರು ರಂಗಚಾರ್ಲು ಪುರಭವನದಲ್ಲಿ ಬೆಳಿಗ್ಗೆ 7ಕ್ಕೆ ಚಾಲನೆ ಮಾಡಲಿದ್ದಾರೆ.
* ಕಲಾ ಮಂದಿರದ ಸುಚಿತ್ರ ಆರ್ಟ್ ಗ್ಯಾಲರಿಯಲ್ಲಿ ನಡೆಯುವ ದಸರಾ ಚಿತ್ರಕಲಾ ಪ್ರದರ್ಶನವನ್ನು ವಸತಿ ಸಚಿವ ಅಂಬರೀಶ್ ಬೆಳಿಗ್ಗೆ 11ಕ್ಕೆ ಉದ್ಘಾಟಿಸಲಿದ್ದಾರೆ.
* ಅಕ್ಟೋಬರ್ 15ರಂದು ನಡೆಯುವ ಪಾರಂಪರಿಕ ನಡಿಗೆಗೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವ ಎಚ್. ಆಂಜನೇಯ ಬೆಳಿಗ್ಗೆ 7ಕ್ಕೆ ಉದ್ಘಾಟನೆ ಕೈಗೊಳ್ಳಲಿದ್ದಾರೆ.
ಅಕ್ಟೋಬರ್ 16ರ ಕಾರ್ಯಕ್ರಮಗಳು:
* ಪಾರಂಪರಿಕ ಸೈಕ್ಲಿಂಗ್ ಸ್ಪರ್ಧೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಆರ್. ಪಾಟೀಲ್ ಅವರು ರಂಗಾಚಾರ್ಲು ಭವನದಲ್ಲಿ ಬೆಳಿಗ್ಗೆ 7 ಗಂಟೆಗೆ ಉದ್ಘಾಟಿಸಲಿದ್ದಾರೆ.
* ನಾರಿ ಶಕ್ತಿ ಪ್ರಾತ್ಯಕ್ಷಿಕೆ ಬಿಡುಗಡೆಯು ಲೋಕೋಪಯೋಗಿ ಸಚಿವ ಡಾ. ಎಚ್ ಸಿ ಮಹದೇವಪ್ಪ ಅವರ ಸಾರಥ್ಯದಲ್ಲಿ ಬೆಳಿಗ್ಗೆ 9ಕ್ಕೆಕೋಟೆ ಆಂಜನೇಯ ದೇವಸ್ಥಾನ ಎದುರು ಜರುಗಲಿದೆ.[ಮೈಸೂರು ದಸರಾ : ರೈತ ದಸರಾ ಕಾರ್ಯಕ್ರಮಗಳ ಪಟ್ಟಿ]

ಅಕ್ಟೋಬರ್ 18ರ ಕಾರ್ಯಕ್ರಮಗಳು :
* ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಜರುಗುವ ಹಾಫ್ ಮ್ಯಾರಥಾನ್ ಅಂತರಾಷ್ಟರೀಯ ಕ್ರೀಡಾಪಟು ಅರ್ಜಿನ ದೇವಯ್ಯ ಹಾಗೂ ಮೀನುಗಾರಿಕೆ ಸಚಿವ ಕೆ. ಅಭಯಚಂದ್ರ ಜೈನ್ ಬೆಳಿಗ್ಗೆ 7ಗಂಟೆಗೆ ಚಾಲನೆ ನೀಡಲಿದ್ದಾರೆ.
* ಅರಮನೆ ಆವರಣದಲ್ಲಿ ನಡೆಯುವ ಪೊಲೀಸ್ ಸಮೂಹ ವಾದ್ಯ ವೃಂದವನ್ನು ಗೃಹ ಸಚಿವ ಕೆ. ಜಾರ್ಜ್, ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್, ಸಹಕಾರ ಹಾಗೂ ಸಕ್ಕರೆ ಸಚಿವ ಎಚ್.ಎಸ್. ಮಹಾದೇವ ಪ್ರಸಾದ್ ಉದ್ಘಾಟಿಸಲಿದ್ದಾರೆ.
ಅಕ್ಟೋಬರ್ 19 : ಬೆಳಿಗ್ಗೆ 10ಗಂಟೆಗೆ ಮಾನಸ ಗಂಗೋತ್ರಿ ಮಾನವಿಕ ಸಭಾಂಗಣದಲ್ಲಿ ನಡೆಯುವ ದಸರಾ ಕವಿಗೋಷ್ಠಿಗೆ ಪ್ರಸಿದ್ಧ ಲೇಖಕಿ ಡಾ. ಎಂ ಲತಾ ರಾಜಶೇಖರ್ ಚಾಲನೆ ನೀಡಲಿದ್ದಾರೆ.
ಅಕ್ಟೋಬರ್ 20: ಜಗಮೋಹನ್ ಅರಮನೆಯಲ್ಲಿ 'ಕೃಷಿ ಕಾವ್ಯಸಿರಿ' ಎಂಬ ಹೆಸರಿನಲ್ಲಿ ಜರುಗುವ ಪ್ರಧಾನ ಕವಿಗೋಷ್ಠಿಗೆ ಪ್ರಸಿದ್ಧ ಕವಯತ್ರಿ ನಾಡೋಜ ಡಾ. ಕಮಲಾ ಹಂಪನಾ ಬೆಳಿಗ್ಗೆ 10-30ಕ್ಕೆ ಉದ್ಘಾಟಿಸಲಿದ್ದಾರೆ.
ಜಂಬೂ ಸವಾರಿ ಉದ್ಘಾಟನೆ :
* ಅಕ್ಟೋಬರ್ 23ರಂದು ಮಧ್ಯಾಹ್ನ 12-07ರಿಂದ 12-21 ಗಂಟೆಯೊಳಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಅರಮನೆ ಬಲರಾಮ ಧ್ವಾರದಲ್ಲಿ ನಂದಿ ಪೂಜೆ ನಡೆಯಲಿದೆ.
* 12-30 ರಿಂದ 2 ಗಂಟೆಯೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆ ಆವರಣದಲ್ಲಿ ವಿಜಯದಶಮಿ ಮೆರವಣಿಗೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಲಿದ್ದಾರೆ.[ಈ ಬಾರಿ ಆಯುಧಪೂಜೆ ದಿನದಂದು ಜಂಬೂ ಸವಾರಿ]
ಪಂಜಿನ ಕವಾಯತು :
* ಬನ್ನಿ ಮಂಟಪ ಮೈದಾನದಲ್ಲಿ ನಡೆಯಲಿರುವ ಪಮಜಿನ ಕವಾಯತು ಕಾರ್ಯಕ್ರಮವನ್ನು ರಾಜ್ಯಪಾಲ ವಜುಭಾಯಿ ರೂಡಾಭಾಯಿ ವಾಲಾ ಅವರು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸೇರೊದಮತೆ ಹಲವಾರು ಗಣ್ಯರು ಬಾಗವಹಿಸಲಿದ್ದಾರೆ.
ಅರಮನೆ ಆವರಣದಲ್ಲಿ ಜರುಗು ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು:
* ಅಕ್ಟೋಬರ್ 13 : ರಾತ್ರಿ 7.45ಕ್ಕೆ ಮಳೆ-ಇಳೆ-ಬೆಳೆ ನೃತ್ಯ ರೂಪ, ಸುನೀತ ಚಂದ್ರ ಶೇಖರ್ ಅವರಿಂದ ಸಂಗೀತ ಕಾರ್ಯಕ್ರಮ, ಮೈಸೂರಿನ ಕಲಾಸಂದೇಶ್ ಪ್ರತಿಷ್ಟಾನ ನೃತ್ಯ ನಡೆಯಲಿದೆ.
* ಅಕ್ಟೋಬರ್ 14 : ರಾತ್ರಿ 7ಕ್ಕೆ ಮೈಸೂರಿನ ಕಲಾ ಸತ್ಪರ್ಥ ಇನ್ಸಿಟಿಟ್ಯೂಟ್ ಆಫ್ ಡ್ಯಾನ್ಸ್ ಅವರಿಂದ ನೃತ್ಯ ನೃತ್ಯ ರೂಪಕ
* ಅಕ್ಟೋಬರ್ 15 : ರಾತ್ರಿ 7ಕ್ಕೆ ಮೈಸೂರು ಜನಾರ್ಧನ್ ತಂಡದಿಂದ ಜಾನಪದ ಸಂಭ್ರಮ, ನಂತರ ಡಾ. ಆರ್. ಎಸ್ ನಂದಕುಮಾರ್ ಅವರಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ
* ಅಕ್ಟೋಬರ್ 16 : ರಾತ್ರಿ 7ಕ್ಕೆ ಮೈಸೂರಿನ ಶಾಂತಲಾ ವಟ್ಟಂ ಅವರಿಂದ ಗಝಲ್, ನಮತರ ವೈಣಿಕ ರತ್ನ ಆರ್.ಕೆ ಪದ್ಮನಾಭ್ ಅವರಿಂದ ದಶವೀಣೆ
* ಅಕ್ಟೋಬರ್ 17 : ರಾತ್ರಿ 7ಕ್ಕೆ ಮೈಸೂರಿನ ವಿದೂಷಿ ಕೃಪಾ ಫಡಕೆ ತಂಡದಿಂದ ಸಮೂಹ ನೃತ್ಯ, ಬಳಿಕ ವಿದ್ವಾನ್ ನಾಗರಾಜ ಹಾಗೂ ಮಮಜುನಾಥ್ ಅವರಿಂದ ವಿಶೇಷ ದ್ವಂದ್ವ ವಯೋಲಿನ್ ಕಾರ್ಯಕ್ರಮ
* ಅಕ್ಟೋಬರ್ 18 : ರಾತ್ರಿ 7ಕ್ಕೆ ಪೊಲೀಸ್ ಸಮೂಹ ವಾದ್ಯ ವೃಂದ
* ಅಕ್ಟೋಬರ್ 19: ರಾತ್ರಿ 7ಕ್ಕೆ ವಿದ್ವಾನ್ ವಿ. ನಟರಾಜ್ ಗುರುರಾಜ್ ವಾದ್ಯ ವೃಂದದಿಂದ ವಾದ್ಯ ಸಂಗೀತ, ಡಾ.ಪಿ.ಕೆ ರಾಜಶೇಖರ್ ತಂಡದಿಂದ ಜಾನಪದ ಸಂಗೀತ ಕಾರ್ಯಕ್ರಮ
* ಅಕ್ಟೋಬರ್ 20: ರಾತ್ರಿ 7ಕ್ಕೆ ಹಂಗೇರಿ ದೇಶದ ಕಲಾವಿದರಿಂದ ಜಾನಪದ ಸಂಗೀತ, ವಿಜಯ ಪ್ರಕಾಶ್ ತಂಡದಿಂದ ಸುಗಮ ಸಂಗೀತ
* ಅಕ್ಟೋಬರ್ 21: ರಾತ್ರಿ 7ಕ್ಕೆ ನಿತಿನ್ ರಾಜತರಾಂ ಶಾಸ್ತ್ರೀ ಮತ್ತು ಸುನಿತಾ ಎಚ್ ಅವರಿಂದ ಸುಗಮ ಸಂಗೀತ, ಬಳಿಕ ಎಚ್.ಎಲ್ ಶಿವಶಂಕರ್ ತಂಡದಿಂದ ಲಯ ಲಹರಿ ವಿಶೇಷ ತಾಳವಾದ್ಯ ಸಂಗೀತ ಕಾರ್ಯಕ್ರಮ












Click it and Unblock the Notifications