ಮಧ್ಯರಾತ್ರಿವರೆಗೆ ಸಂಸದರು ಲೋಕಸಭೆಯಲ್ಲಿ ಚರ್ಚಿಸಿದ ವಿಷಯವೇನು?
ನವದೆಹಲಿ, ಜುಲೈ 17:ಲೋಕಸಭೆಯಲ್ಲಿ ಗದ್ದಲ, ಗಲಾಟೆ,ಧರಣಿ ಹಾಗೂ ಮುಂದೂಡಿಕೆಗಳ ಸುದ್ದಿಗಳನ್ನೇ ನೀವು ನೋಡಿರುತ್ತೀರಿ. ಅಪರೂಪವೆನ್ನುವಂತೆ ಲೋಕಸಭೆಯಲ್ಲಿ ಮಧ್ಯರಾತ್ರಿವರೆಗೂ ನಡೆದು ಜನರು ಹುಬ್ಬೇರಿಸುವಂತೆ ಮಾಡಿದೆ.
18 ವರ್ಷಗಳ ಬಳಿಕ ಕಳೆದ ವಾರ ರೈಲ್ವೆ ಸುಧಾರಣೆಗೆ ಸಂಬಂಧಿಸಿದಂತೆ ತಡರಾತ್ರಿವರೆಗೂ ಲೋಕಸಭೆಯಲ್ಲಿ ಚರ್ಚೆ ನಡೆದಿತ್ತು.ನಿನ್ನೆ ರಾತ್ರಿ ಕೂಡ ಸುಮಾರು 12 ಗಂಟೆವರೆಗೂ ದೇಶದ ಆರ್ಥಿಕ ಬೆನ್ನೆಲುಬಾಗಿರುವ ಕೃಷಿ ವಲಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ.
ರೈತರ ಆತ್ಮಹತ್ಯೆ,ಕೃಷಿ ಆದಾಯ ದುಪ್ಪಟ್ಟು, ನೀರಾವರಿ ಸಮಸ್ಯೆ , ಹವಾಮಾನ ವೈಪರೀತ್ಯ ಹಾಗೂ ಕೃಷಿ ಸೇರಿ ಕೃಷಿ ವಲಯದ ಸಮಸ್ಯೆಗಳ ಬಗ್ಗೆ ಸದಸ್ಯರು ಮಾತನಾಡಿದ್ದಾರೆ.

ಈ ಕುರಿತು ಮಾತನಾಡಿರುವ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಕೃಷಿ ಹಾಗೂ ರೈತರ ಬಗ್ಗೆ ಮಧ್ಯರಾತ್ರಿವರೆಗೆ ಉತ್ತಮ ಚರ್ಚೆ ನಡೆದಿರುವುದು ಸ್ವಾಗತಾರ್ಹ ಎಂದಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸಂಸತ್ತಿನಲ್ಲಿ ಈ ರೀತಿಯ ಬೆಳವಣಿಗೆ ಆಶಾದಾಯಕವಾದದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications