ಕೃಷಿ ಕ್ಷೇತ್ರದ ಭವಿಷ್ಯ ಮರುರೂಪಿಸಿದ ಮಂಗಳೂರಿನ ವಿವೇಕ್ ರಾಜ್ ಪೂಜಾರಿ: ಹೇಗೆ? ಏನು ವಿವರ ಇಲ್ಲಿದೆ
ಒಂದು ದಶಕದಿಂದ ಮಂಗಳೂರಿನ ವಿವೇಕ್ ರಾಜ್ ಪೂಜಾರಿ ಅವರು ಹೊಸತನ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಕೃಷಿ ಕ್ಷೇತ್ರದ ಭವಿಷ್ಯವನ್ನು ಮರುರೂಪಿಸುತ್ತಿದ್ದಾರೆ. ಹಳೆಯ ಕೃಷಿ ಪದ್ಧತಿಯೊಂದಿಗೆ ಹೈಡ್ರೋಪೋನಿಕ್ ಮತ್ತು ಏರೋಪೋನಿಕ್ ಕೃಷಿ ವ್ಯವಸ್ಥೆಗಳ ಅಭಿವೃದ್ಧಿಯಲ್ಲಿ ವಿವೇಕ್ ಪ್ರಮುಖ ವ್ಯಕ್ತಿಯಾಗಿದ್ದಾರೆ.
ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಎರಡರಲ್ಲೂ ಸಕ್ರಿಯರಾಗಿರುವ ಅವರ ಕೆಲಸವು ಜನರಿಗೆ ಸಮರ್ಥ ಮತ್ತು ಪರಿಸರ ಸ್ನೇಹಿ ಕೃಷಿ ಪರಿಹಾರಗಳನ್ನು ರಚಿಸುವ ಅವರ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. 2014 ರಲ್ಲಿ ವಿವೇಕ್ ಅವರ ಹೈಡ್ರೋಪೋನಿಕ್ಸ್ ಪ್ರಯಾಣ ಆರಂಭವಾಯಿತು.

ಹೈಡ್ರೋಪೋನಿಕ್ಸ್ ಹವಾಮಾನ, ಕೀಟಗಳು ಮತ್ತು ರೋಗದಂತಹ ಅನಿರೀಕ್ಷಿತ ಅಂಶಗಳಿಂದ ಮುಕ್ತವಾದ ಸೂಕ್ತ ಪರಿಸ್ಥಿತಿಗಳಲ್ಲಿ ಬೆಳೆಗಳನ್ನು ಬೆಳೆಯಲು ಅನುವು ಮಾಡಿಕೊಡುತ್ತದೆ. ಜೊತೆಗೆ ನಿಯಂತ್ರಿತ ಪರಿಸರದಲ್ಲಿ ಕೃಷಿಯು ನಮಗೆ ಸಂಪೂರ್ಣ ನಿಯಂತ್ರಣವನ್ನು ನೀಡುತ್ತದೆ ಎಂದು ವಿವೇಕ್ ವಿವರಿಸುತ್ತಾರೆ.
ನಾವು ಗಿಡದ ಪರಿಪೂರ್ಣ ಬೆಳವಣಿಗೆಯ ಪರಿಸ್ಥಿತಿಗಳನ್ನು ರಚಿಸಬಹುದು, ಇದು ಉತ್ತಮ ಇಳುವರಿ ಮತ್ತು ಹೆಚ್ಚಿನ ಗುಣಮಟ್ಟಕ್ಕೆ ಕಾರಣವಾಗುತ್ತದೆ. ವಿವೇಕ್ ರಾಜ್ ಪೂಜಾರಿ ಅವರ ಕೃಷಿ ಕ್ಷೇತ್ರದ ಅಭಿವೃದ್ಧಿಯ ಬಯಕೆಯು ಕೇಸರಿ ಬೆಳೆಯೊಂದಿಗೆ ಪ್ರಾರಂಭವಾಯಿತು. ಕಾಶ್ಮೀರ ಮತ್ತು ಇರಾನ್‌ನಂತಹ ನಿರ್ದಿಷ್ಟ ಪ್ರದೇಶಗಳಲ್ಲಿ ಬೆಳೆಯುವ ಈ ಬೆಳೆಯನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಒಳಾಂಗಣದಲ್ಲಿ ಮೊದಲು ಬೆಳೆಸುವ ಮೂಲಕ ವಿವೇಕ್ ಹೊಸ ಹೆಜ್ಜೆ ಇಟ್ಟರು.
ಪ್ರಪಂಚದ ಅತ್ಯಂತ ದುಬಾರಿ ಮಸಾಲೆ ಎಂದು ಕರೆಯಲ್ಪಡುವ ಕೇಸರಿಯು ಹೆಚ್ಚಿನ ಬೇಡಿಕೆಯನ್ನು ಹೊಂದಿದೆ. ಆದರೆ ಅದರ ನಿರ್ದಿಷ್ಟ ಬೆಳವಣಿಗೆ ಹಾಗೂ ಕಾರ್ಮಿಕರ ಕೊರತೆಯಿಂದ ಕೇಸರಿ ಕೃಷಿ ಮಾಡುವುದು ಕಷ್ಟಕರವಾಗಿದೆ. ಈ ವಿಚಾರವನ್ನು ಗುರುತಿಸಿದ ವಿವೇಕ್ ಹೊಸತನದ ಅವಕಾಶವನ್ನು ಕಂಡುಕೊಂಡರು.
ಪರಿಸರದ ಪ್ರತಿಯೊಂದು ಅಂಶವನ್ನು ನಿಯಂತ್ರಿಸುವ ಮೂಲಕ ಅಂದರೆ ಬೆಳಕು, ತಾಪಮಾನ, ಆರ್ದ್ರತೆ ಮತ್ತು ಪೋಷಕಾಂಶಗಳ ವಿತರಣೆ ಎಲ್ಲವನ್ನೂ ಸರಿಯಾದ ಮಟ್ಟದಲ್ಲಿ ಪೂರೈಸಿದ ಕಾರಣ ಸಾಂಪ್ರದಾಯಿಕ ಕೃಷಿ ವಿಧಾನಗಳಿಗಿಂತ ಕಡಿಮೆ ಸಮಯದಲ್ಲಿ ಅಸಾಧಾರಣ ಗುಣಮಟ್ಟದ ಕೇಸರಿ ಉತ್ಪಾದಿಸಲು ನಮಗೆ ಸಾಧ್ಯವಾಯಿತು ಎಂದು ವಿವೇಕ್ ವಿರಿಸುತ್ತಾರೆ ಹಾಗೂ ಈ ಪ್ರಕ್ರಿಯೆಯನ್ನು ಅತ್ಯುತ್ತಮವಾಗಿಸಲು, ವಿವೇಕ್ ಅವರ ತಂಡವು AI-ಆಧಾರಿತ ಪೋಷಕಾಂಶಗಳ ವಿತರಣಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿದೆ. ಇದು ಸೂಕ್ತವಾದ ಬೆಳವಣಿಗೆಯ ಪರಿಸ್ಥಿತಿಗಳನ್ನು ಖಚಿತಪಡಿಸುತ್ತದೆ ಮತ್ತು ಕೇಸರಿ ಇಳುವರಿ ಮತ್ತು ಗುಣಮಟ್ಟ ಎರಡನ್ನೂ ಹೆಚ್ಚಿಸುತ್ತದೆ.
ವಿವೇಕ್ ಅವರ ಒಳಾಂಗಣ ಕೃಷಿ ಮಾದರಿಯ ಆರ್ಥಿಕ ಕಾರ್ಯಸಾಧ್ಯತೆ ಕೂಡ ಗಮನಾರ್ಹವಾಗಿದೆ. ವಿಶೇಷವಾಗಿ ಕೇಸರಿ, ಮಸಾಲೆಗಳು ಮತ್ತು ಔಷಧೀಯ ಸಸ್ಯಗಳಂತಹ ಹೆಚ್ಚಿನ ಮೌಲ್ಯದ ಬೆಳೆಗಳಿಗೆ. ನಮ್ಮ ಪ್ರಯೋಗಗಳಲ್ಲಿ ನಾವು 300% ಲಾಭದ ಅಂತರವನ್ನು ಸಾಧಿಸಿದ್ದೇವೆ ಎಂದಿರುವ ವಿವೇಕ್ ಹೈಡ್ರೋಪೋನಿಕ್ ಮತ್ತು ಏರೋಪೋನಿಕ್ ಕೃಷಿಯಲ್ಲಿ ಉತ್ತಮ ಯಶಸ್ಸು ಕಂಡಿದ್ದಾರೆ. ಈ ವಿಧಾನದಿಂದ ತ್ಯಾಜ್ಯವನ್ನು ಕಡಿಮೆ ಮಾಡುತ್ತದೆ, ನೀರಿನ ಬಳಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಹಾನಿಕಾರಕ ಕೀಟನಾಶಕಗಳು ಮತ್ತು ರಸಗೊಬ್ಬರಗಳ ಅಗತ್ಯವನ್ನು ನಿವಾರಿಸುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕುತೂಹಲ ಇರುವವರು ವಿವೇಕ್ ರಾಜ್ ಪೂಜಾರಿ ಅವರ ತಂಡವನ್ನು ಸಂಪರ್ಕಿಸಬಹುದಾಗಿದೆ.












Click it and Unblock the Notifications