3 ಜಿಲ್ಲೆಗಳ ಬಿಪಿಎಲ್ ಕಾರ್ಡುದಾರರಿಗೆ ರಾಗಿ ಸುಗ್ಗಿ

ಬೆಂಗಳೂರು, ಫೆ.12: 3 ಜಿಲ್ಲೆಗಳ ಬಿಪಿಎಲ್ ಪಡಿತರ ಕಾರ್ಡುದಾರರಿಗೆ ರಾಗಿ ಭಾಗ್ಯ ಒದಗಿಸುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ದಿನೇಶ್ ಗುಂಡೂರಾವ್ ಅವರು ಘೋಷಿಸಿದ್ದಾರೆ. ಮಾರ್ಚ್ 1ರಿಂದಲೇ ಈ ಯೋಜನೆ ಜಾರಿಗೆ ಬರಲಿದ್ದು, ಕೆಜಿಗೆ 1 ರೂ. ನಂತೆ 2 ಕೆಜಿ ರಾಗಿಯನ್ನು ವಿತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮಂಡ್ಯ, ಮೈಸೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಅಕ್ಕಿ, ಗೋಧಿ ಜತೆಗೆ ಪ್ರತಿ ಯೂನಿಟ್‌ಗೆ 1 ರೂ. ನಂತೆ 2 ಕೆಜಿ ರಾಗಿ ವಿತರಿಸಲಾಗುವುದು. ಹಂತ ಹಂತವಾಗಿ ವಿವಿಧ ಜಿಲ್ಲೆಗಳಿಗೂ ರಾಗಿ ವಿತರಣೆಯನ್ನು ವಿಸ್ತರಿಸಲಾಗುವುದು ಎಂದೂ ಸಚಿವರು ಹೇಳಿದರು.

mandya-mysore-hassan-dist-bpl-card-holders-to-get-2-kgs-ragi

ಬಿಪಿಎಲ್ ಕಾರ್ಡಿಗಾಗಿ 40 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ಈವರೆಗೆ 8.5 ಲಕ್ಷ ಕಾರ್ಡುಗಳನ್ನು ವಿತರಿಸಲಾಗಿದೆ. ಇನ್ನೂ 10 ಲಕ್ಷ ಅರ್ಹ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್‌ ವಿತರಿಸಬೇಕಾಗಿದೆ ಎಂದು ತಿಳಿಸಿದರು.

ರೈತರಿಗೆ ಬೆಂಬಲ ಬೆಲೆ ನೀಡಿ ರಾಗಿ ಖರೀದಿ:
ಅಕ್ಕಿಗಿಂತಲೂ ಗೋಧಿ, ಜೋಳ ಅಧಿಕ ಪೌಷ್ಠಿಕಾಂಶ ಹೊಂದಿದೆ. ಇವೆಲ್ಲದವುದಕ್ಕಿಂತ ರಾಗಿ ಹೆಚ್ಚು ಪೌಷ್ಠಿಕಾಂಶ ಹೊಂದಿದೆ. ಪಡಿತರ ವ್ಯವಸ್ಥೆಯಲ್ಲಿ ಅಕ್ಕಿಯನ್ನು ಮಾತ್ರ ವಿತರಿಸಲಾಗುತ್ತಿದ್ದು, ಇನ್ಮುಂದೆ ಅಂದರೆ ಮಾರ್ಚ್ 1 ರಿಂದ ರಾಗಿಯನ್ನು ವಿತರಿಸಲಾಗುವುದು. ಇದಕ್ಕಾಗಿ ರೈತರಿಗೆ ಬೆಂಬಲ ಬೆಲೆ ನೀಡಿ ರಾಗಿ ಖರೀದಿಸಲಾಗುವುದು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+