ಮಂಡ್ಯದಲ್ಲಿ ಕಬ್ಬು ಕಟಾವು; ಜೆಡಿಎಸ್ ಶಾಸಕರಿಂದ ಜಿಲ್ಲಾಧಿಕಾರಿ ಭೇಟಿ

ಮಂಡ್ಯ, ಮೇ 13 : ಮಂಡ್ಯ ಜಿಲ್ಲೆಯಲ್ಲಿ ಕಬ್ಬು ಕಟಾವಿಗೆ ಬಂದಿದೆ. ಅದನ್ನು ಕಟಾವು ಮಾಡಿ, ನುರಿಸಲು ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಶಾಸಕರ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದೆ.

ಬುಧವಾರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಸಿ. ಎಸ್. ಪುಟ್ಟರಾಜು, "ಮಂಡ್ಯ ಜಿಲ್ಲೆಯ ಜೆಡಿಎಸ್ ಶಾಸಕರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದೆವು. "ನಮ್ಮ ಮನವಿ ಮೇರೆಗೆ ಆಹಾರ, ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ" ಎಂದರು.

"ಸರ್ಕಾರವೇ ಕಬ್ಬು ಸಾಗಣೆ ವೆಚ್ಚ ಬರಿಸಬೇಕು. ಸಾಗಣೆ ವೆಚ್ಚದ ಬಾಕಿ ನಾಲ್ಕೂವರೆ ಕೋಟಿ ಬರಬೇಕಿದೆ. ತಕ್ಷಣ ಅದನ್ನು ಬಿಡುಗಡೆ ಮಾಡಲು ಕ್ರಮ ವಹಿಸಬೇಕು. ಈ ಸಲ ಜಿಲ್ಲೆಯಲ್ಲಿ ಕಾರ್ಖಾನೆ ಆರಂಭವಾಗುವುದು ಅನುಮಾನವಾಗಿದೆ. ಹೀಗಾಗಿ ಪಕ್ಕದ ಜಿಲ್ಲೆಯ ಕಾರ್ಖಾನೆಗಳಿಗೆ ಕಬ್ಬು ಹಂಚಿಕೆ ಮಾಡಲಿ" ಎಂದು ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು.

Mandya JDS MLAs Meet DC Demand To Allow Sugar Cane Cutting

ಸರ್ಕಾರದ ವಿರುದ್ಧ ಆಕ್ರೋಶ : ಜೆಡಿಎಸ್ ಶಾಸಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. "ಜನಪ್ರತಿನಿಧಿಗಳನ್ನು ಕತ್ತಲೆಯಲ್ಲಿಟ್ಟು ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತಿದೆ. ಮೈಶುಗರ್ ಕಾರ್ಖಾನೆ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರ" ತೆಗೆದುಕೊಂಡಿದೆ ಎಂದು ಸಿ. ಎಸ್. ಪುಟ್ಟರಾಜು ಆರೋಪಿಸಿದರು.

ಕಬ್ಬು ನಾಶ ಮಾಡಿದ ರೈತ : ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬ್ಯಾಡರಹಳ್ಳಿಯ ರೈತ ಚಂದನ್ ಬೆಳೆದು ನಿಂತ ಕಬ್ಬಿನ ಬೆಳೆಯನ್ನು ನಾಶ ಮಾಡಿದ್ದಾನೆ. ಬೆಳೆದು ನಿಂತ ಕಬ್ಬು ಬೆಳೆ ಕಟಾವು ಮಾಡಲು ಆಗಲಿಲ್ಲ ಎಂದು ಸಂಕಷ್ಟಕ್ಕೆ ಸಿಲುಕಿ ಟ್ರ್ಯಾಕ್ಟರ್ ಮೂಲಕ‌ ಬೆಳೆ ನಾಶ ಮಾಡಿದ್ದ.

ಮಂಡ್ಯದಲ್ಲಿ ಕಬ್ಬನ್ನು ಕಾರ್ಖಾನೆಗೆ ಸಾಗಿಸಲು ಮೈಷುಗರ್ ಕಾರ್ಖಾನೆ‌ ಆರಂಭವಾಗಿಲ್ಲ‌. ಸರ್ಕಾರ ರೈತರ ಜೊತೆ ಚೆಲ್ಲಾಟವಾಡುತ್ತಿದೆ ಎಂದು ರೈತ ಆಕ್ರೋಶ ವ್ಯಕ್ತಪಡಿಸಿದ್ದಾನೆ.‌ ಒಂದು ಎಕರೆಯಲ್ಲಿ ಬೆಳೆದ ಕಬ್ಬು ಬೆಳೆ ನಾಶ‌ಮಾಡುವ ಮೂಲಕ ರೈತನ ಅಸಮಧಾನ ಹೊರಹಾಕಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+