
Krishi Mela-2022: ಕೃಷಿಯಲ್ಲಿ ತಂತ್ರಜ್ಞಾನ, ವೈಜ್ಞಾನಿಕ ವಿಧಾನಗಳ ಅಳವಡಿಕೆ ಅಗತ್ಯ- ಪುಟ್ಟರಾಜು
ಮಂಡ್ಯ, ಡಿ. 03: ಕೃಷಿಯಲ್ಲಿ ಆರ್ಥಿಕವಾಗಿ ಸದೃಢವಾಗಬೇಕಾದರೆ, ರೈತರು ಹೊಸದಾಗಿ ಕೃಷಿ ವಿಜ್ಞಾನಿಗಳು ಪರಿಚಯಿಸುವ ತಂತ್ರಜ್ಞಾನ, ವೈಜ್ಞಾನಿಕ ವಿಧಾನಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ತಿಳಿಸಿದ್ದಾರೆ.
ತಾಲ್ಲೂಕಿನ ಕೃಷಿ ವಿಶ್ವವಿದ್ಯಾನಿಲಯ, ವಿ.ಸಿ.ಫಾರಂ ಕೃಷಿ ಮಹಾವಿದ್ಯಾಲಯ ಮತ್ತು ಕೃಷಿ ವಿಜ್ಞಾನ ಕೇಂದ್ರದ ಕೃಷಿ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ್ದಾರೆ. ಕೃಷಿ ಮೇಳದಲ್ಲಿ ಹಲವಾರು ಸುಧಾರಿತ ತಳಿ, ಯಾವ ರೀತಿ ರೈತ ಕೆಲವು ಹೊಸ ಮಾದರಿಯನ್ನು ಅಳವಡಿಸಿಕೊಂಡು ರೈತರು ಜೀವನ ಕಟ್ಟಿಕೊಳ್ಳಬಹುದು ಎಂದು ವಿವಿಧ ಪ್ರಾತ್ಯಕ್ಷಿಕೆಗಳ ಮೂಲಕ ತಿಳಿಸಲಾಗಿದೆ. ರೈತರು ಮೇಳದಲ್ಲಿ ಮಾಹಿತಿ ಪಡೆದುಕೊಂಡು ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಮಾತನಾಡಿ, ವಿ.ಸಿ.ಫಾರಂನಲ್ಲಿ ನಿರಂತರವಾಗಿ ರೈತರ ಅಭಿವೃದ್ಧಿಗಾಗಿ ವಿವಿಧ ಸಂಶೋಧನಾ ಕಾರ್ಯಗಳು ನಡೆಯುತ್ತಲೇ ಇರುತ್ತದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಳ್ಳಿ, ಅತ್ಯಾಧುನಿಕ ಕೃಷಿ ಯಂತ್ರೋಪಕರಣ, ಹೆಚ್ಚು ಇಳುವರಿ ಹಾಗೂ ಆದಾಯ ತಂದು ಕೊಡುವ ಸುಧಾರಿತ ತಳಿಗಳನ್ನು ಅನಾವರಣಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮೇಳವನ್ನು ಸದುಪಯೋಗ ಪಡಿಸಿಕೊಳ್ಳಲು ರೈತರಿಗೆ ಕರೆ
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾಎಸ್.ವಿ.ಸುರೇಶ್ ಮಾತನಾಡಿ, ಸಂಶೋಧನಾ ಕೇಂದ್ರವಾದ ವಿ.ಸಿಾರಂನಲ್ಲಿ ಮಂಡ್ಯ ಜಿಲ್ಲೆ ಮತ್ತು ಸುತ್ತಮುತ್ತಲಿನ ಜಿಲ್ಲೆಯ ರೈತರಿಗೆ ಕೃಷಿ ನಡೆಸಲು ಬೇಕಿರುವ ತಾಂತ್ರಿಕತೆಯ ಬಗ್ಗೆ ತಿಳಿದುಕೊಂಡು ಕೃಷಿ ಮೇಳದಲ್ಲಿ ಪ್ರಾತ್ಯಕ್ಷಿಕೆಯಲ್ಲಿ ಸುಧಾರಿತ ತಳಿಗಳು ಹಾಗೂ ಬಿಡುಗಡೆಗೆ ಸಿದ್ಧವಿರುವ ತಳಿಗಳನ್ನು ಅನಾವರಣಗೊಳಿಸಲಾಗಿದೆ. ಮೇಳದಲ್ಲಿ ರೈತರೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ರೈತರನ್ನು ಕೈ ಬಿಸಿ ಕರೆದ ಸೂರ್ಯಕಾಂತಿ
ಕೃಷಿ ಮೇಳ-2022 ಎಲ್ಲರ ಗಮನ ಸೆಳೆದಿದೆ. ರೈತರು ಮತ್ತು ವಿದ್ಯಾರ್ಥಿಗಳ ಮನಸೂರೆಗೊಳಿಸಿತು. ದೂರದ ಮಂಡ್ಯ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೈತರು ಕೃಷಿ ಸಂಬಂಧಿತ ಮಾಹಿತಿಗಳನ್ನು ತಂಡೋಪ ತಂಡವಾಗಿ ಪಡೆಯುತ್ತಿದ್ದರು. ಶಾಲಾ ಕಾಲೇಜಿನ ಕೃಷಿಯಾಧಾರಿತ ವಿಷಯಗಳನ್ನು ವಿಶ್ಲೇಷಿಸುತ್ತಿದ್ದರು.
ಭತ್ತದ ನೀರು ನಿರ್ವಹಣೆ, ಔಷಧಿಯ ಗುಣವುಳ್ಳ ಹಾಗೂ ಅಲಂಕಾರಿಕ ಸಸ್ಯಗಳು, ಸೊಪ್ಪುಗಳು, ನೆಲೆಗಡಲೆ, ಅವರೆ, ಜೋಳ, ಚಂಬೆ, ಹತ್ತಿ, ಹುಚ್ಚೆಳ್ಳು, ಸೂರ್ಯಕಾಂತಿ ಬೆಳೆಗಳ ತಾಕುಗಳು ಕೃಷಿ ಮೇಳದಲ್ಲಿ ರೈತರನ್ನು ಕೈ ಬೀಸಿ ಕರೆಯುತ್ತಿದ್ದವು.

ಕುದುರೆ ಬಾಲ, ದೇವದಾರು ಸಸ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ
ಮೇಳದಲ್ಲಿ ಔಷದೀಯ ಮತ್ತು ಸೌಗಂತ ಸಸ್ಯಗಳ ಬಗ್ಗೆಯೂ ಮಾಹಿತಿ ನೀಡಲಾಯಿರು. ರಕ್ತಸ್ರಾವ ನಿಲ್ಲಿಸುವುದು, ಹುಣ್ಣುಗಳು ಮತ್ತು ಗಾಯಗಳುನ್ನು ಗುಡಿಪಡಿಸುವಿಕೆಗೆ, ಕ್ಷಯ, ಮೂತ್ರ ಪಿಂಡದ ಸಮಸ್ಯೆಗಳಿಗೆ ನೆರವಾಗುವ ಕುದುರೆ ಬಾಲದ ಬಗ್ಗೆ ತಿಳುವಳಿಕೆ ನೀಡಲಾಯಿತು.
ದೇವದಾರು: ಕೆಮ್ಮು ನಿವಾರಣೆ, ಮಲಬದ್ಧತೆ, ಲೋಳೆಸರ: ಸೌಂದರ್ಯವರ್ಧಕ, ರಲೆ ಹೊಟ್ಟಿನ ತೊಂದರೆ, ಪಿತ್ತನಿವಾರಕ, ಕ್ರಿಮಿನಾಶಕ, ಮೂಲವ್ಯಾ, ನೆಗಡಿ ನಿವಾರಣೆ, ಪುದಿನಾ: ಬಾಯಿ ದುರ್ವಾಸನೆ, ನೆಗಡಿ ಕೆಮ್ಮು, ಅಜೀರ್ಣ, ಹೊಟ್ಟೆಹುಬ್ಬುವಿಕೆ, ಹೊಟ್ಟೆನೋವು, ಜಂತುಹುಳು ತೊಂದರೆ,
ತವಕಿರಿ: ಹೊಟ್ಟೆ ಮತ್ತು ಮೂತ್ರ ಸಂಬಂಧಿತ ಸಮಸ್ಯೆಗಳಿಗೆ ಬಳಕೆ ಮಾಡುವಂತಹ ವಿವಿಧ ರೀತಿಯ ಔಷಧಿಯ ಸಸ್ಯಗಳಿಂದ ಆರೋಗ್ಯದ ಬಗ್ಗೆ ಮಾಹಿತಿಗಳನ್ನು ತಾಕುಗಳಲ್ಲಿ ಸಸ್ಯಗಳ ಮೂಲಕ ತಿಳಿಸಲಾಗಿತ್ತು.

ಕೃಷಿ ಮೇಳದ ಮೆರಗು ಹೆಚ್ಚಿಸಿದ ರಾಗಿಯ ಅಲಂಕಾರ
ಅಲಂಕಾರಿಕ ಸಸ್ಯಗಳಲ್ಲಿ ಜಲಗಿಡಿ, ಆಂಥೊರಿಯಂ, ರಿಬ್ಬನ್ ಹುಲ್ಲು ಸೇರಿದಂತೆ ವಿವಿಧ ಜಾತಿಯ ಸಸ್ಯಗಳು ಪಾಟ್ಗಳಲ್ಲಿ ನೆರಳಿನ ಮನೆ ಮತ್ತು ಪಾಲಿಹೌಸ್ ತೋಟದ ಬೆಳೆಗಳು ಗಮನ ಸೆಳೆಯುತ್ತಿದ್ದವು. ದಂಟು, ಮೆಂತ್ಯಾ, ಸಯಾ, ಸೋಯಾ ಅವರೆ, ಚಂಬೆ ಬೆಳೆಗಳು ವಿಭಿನ್ನತೆ ಪಡೆದಕೊಂಡಿದ್ದವು.
ರಾಗಿಯ ಕೆಎಂಆರ್-630, ಕೆಎಂಆರ್-204, ಕೆಎಂಆರ್-340, ಇಂಡ್ಾ-9, ಇಂಡ್ಾ-7 ತಳಿಗಳು ತಾಕುಗಳಲ್ಲಿ ತೆನೆಭರಿತವಾಗಿ ತೂಗುತ್ತಿದ್ದ ದೃಶ್ಯ ಕಣ್ಮನ ಸೆಳೆಯಿತು.
ಭತ್ತದ ನೀರು ನಿರ್ವಹಣಾ ಪ್ರಾಯೋಗಿಕ ತಾಕುಗಳ ಮುಖೇನ ನಾಟಿ ಭತ್ತದಲ್ಲಿ ನೀರು ಹಾಯಿಸುವಿಕೆ, ಒಣಗಿಸುವ ನೀರಾವರಿ ವಿಧಾನ, ನಾಟಿ ಪದ್ಧತಿಯಲ್ಲಿ ರೈತರ ನೀರು ನಿರ್ವಹಣೆ, ಶ್ರೀ ಪದ್ಧತಿಯಲ್ಲಿ ಭತ್ತದ ಬೇಸಾಯಗಳನ್ನು ವಿಧವಿಧವಾಗಿ ಬೆಳೆದು ನಿಂತಿದ್ದ ಭತ್ತದ ತಳಿಗಳು. ಈ ಮಾಹಿತಿಯ ಜೊತೆಗೆ ರೈತರ ಮನೋಲ್ಲಾಸಕ್ಕೆ ಕಾರಣವಾಗಿತ್ತು.

ಜನರ ಗಮನ ಸೆಳೆದ ಪಶು ಸಂಗೋಪನೆ ಹಾಗೂ ಮೀನುಗಾರಿಕೆ
ಹತ್ತಿ, ಹುಚ್ಚೆಳ್ಳು, ಸೂರ್ಯಕಾಂತಿ, ಜೋಳದ ಬೆಳೆ ಮುದ ನೀಡುತ್ತಿದ್ದವು. ಪಶು ಸಂಗೋಪನೆ ಹಾಗೂ ಮೀನುಗಾರಿಕ ವಿಭಾದಲ್ಲಿ ರಾಜ-02 ಕೋಳಿಗಳು, ಸ್ವರ್ಣಧಾತ ಕೋಳಿಗಳು, ಉಸ್ಮನಾಬಾದಿ ಮೇಕೆಗಳು, ನಾಟಿ ಸುವರ್ಣ ಕುರಿಗಳು, ಬಂಡೂರು ಕುರಿಗಳು, ಗಿರಿರಾಜ ಕೋಳಿಗಳು, ನಾಟಿ ಕೋಳಿಗಳು, ಮೊಲಗಳು, ವಿವಿಧ ಜಾತಿಯ ಮೀನುಗಳು ಗಮನ ಸೆಳೆಯುಂತಿದ್ದವು.
ಬಹುಬೆಳೆ ಸಂಯುಕ್ತ ಕೂರಿಗೆಯ ಪದ್ಥತಿ ಪ್ರಾತ್ಯಕ್ಷಿಕೆ, ಕೃಷಿ ಹಾಗೂ ತರಕಾರಿ ಬೆಳೆಗಳಲ್ಲಿ ನೀರು ಮತ್ತು ಪೋಷಕಾಂಶಗಳ ನಿರ್ವಹಣೆ, ಕಬ್ಬು ನೆಡುವ ಸಾಧನದ ಪದ್ಧತಿ ಪ್ರಾತ್ಯಕ್ಷಿಕೆ, ತೇವಾಂಶ ಸಂವೇದಕ ತಳೀಗಳ ಹುರುಳಿ ಬೆಳೆಯಲ್ಲಿ ಹನಿ ನೀರಾವರಿ ಪ್ರಾತ್ಯಕ್ಷಿಕೆ, ಕ್ಷೇತ್ರ ನಿಯಂತ್ರಿಕೆಯು ತಾಕುಗಳಲ್ಲಿ ವಿಭಿನ್ನತೆ ಪಡೆದುಕೊಂಡಿದ್ದು, ತಂಡೋಪ ತಂಡವಾಗಿ ಅಲ್ಲಿಗೆ ಆಗಮಿಸಿದ್ದವರು ಮಾಹಿತಿ ಪಡದುಕೊಳ್ಳುತ್ತಿದ್ದರು.
ಮೇಳದಲ್ಲಿ ಹಾಕಲಾಗಿದ್ದ ಅಂಗಡಿಗಳಲ್ಲಿ ಮರಗಳನ್ನು ಬೆಳೆಸುವುದು, ರಾಗಿ ಉತ್ಪಾದನೆ ಹಾಗೂ ಇದರಿಂದ ತಯಾರಿಸಿದ ವಿಭಿನ್ನ ರುಚಿಯ ಸಿಹಿ ಹಾಗೂ ಕಾರ ತಿನಿಸುಗಳು, ಜೈಕಿಸಾನ್ ರೈತ ಆಸಕ್ತ ಗುಂಪುಗಳಿಂದ ತಯಾರಿಸಿದ ಸಾಂಬಾರ್ ಪೌಡರ್, ಗರಂ ಮಸಾಲೆ, ಮಿಠಾಯಿಗಳು, ರಾಗಿ ಹಪ್ಪಳ, ಸಿಹಿ ಜಾಮ್‌ಗಳು ಸೇರಿದಂತೆ ವಿವಿಧ ಪದಾರ್ಥಗಳ ರುಚಿ ನೋಡುವ ಭಾಗ್ಯ ಆಗಮಿಸಿದ ಜನರದ್ದಾಗಿತ್ತು. ಜೊತೆಗೆ ರೈತರಿಗೆ ಉಪಯುಕ್ತವಾಗಲೆಂದು ತರಕಾರಿ, ಸೊಪ್ಪುಗಳು, ಎಣ್ಣೆ ಕಾಳುಗಳ ಬಿತ್ತನೆಗೆ ಉಪಯುಕ್ತ ಮಾಹಿತಿ ಹಾಗೂ ಬೀಜಗಳ ಮಾರಾಟವೂ ವಿಭಿನ್ನತೆ ಪಡೆದುಕೊಂಡಿತ್ತು. ಮೇಳದಲ್ಲಿ ಜೊತೆಗೆ ಸ್ಪಂದನಾ ಆಸ್ಪತ್ರೆಯ ವೈದ್ಯರು ಆರೋಗ್ಯ ತಪಾಸಣೆ ನಡೆಸಿದ್ದಾರೆ.