• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿನ್ನದಿಂದಲ್ಲ, ಈರುಳ್ಳಿಯಿಂದ 90 ಲಕ್ಷ ಆದಾಯ ಗಳಿಸಿದ ರೈತ.!

|

ಚಿತ್ರದುರ್ಗ, ಡಿಸೆಂಬರ್ 12: ಚಿತ್ರದುರ್ಗ ತಾಲ್ಲೂಕಿನ ಸಿದ್ದವ್ವನಹಳ್ಳಿಯ ರೈತರೊಬ್ಬರು 3700 ಪ್ಯಾಕೆಟ್ ಈರುಳ್ಳಿ ಬೆಳೆದು ಹತ್ತಲ್ಲ, ಇಪ್ಪತ್ತಲ್ಲ ಬರೋಬ್ಬರಿ 90 ಲಕ್ಷ ರುಪಾಯಿ ಆದಾಯಗಳಿಸಿದ್ದಾರೆ.!

ಮಲ್ಲಿಕಾರ್ಜುನ ಎಂಬ ರೈತ ತಮ್ಮ ಸುಮಾರು 20 ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆದಿದ್ದರು. ಸದ್ಯ ಮಾರುಕಟ್ಟೆಯಲ್ಲಿ ಈರುಳ್ಳಿಗೆ ಬಂಗಾರದ ಬೆಲೆ ಬಂದಿರುವ ಕಾರಣ ಭಾರೀ ಆದಾಯ ಗಳಿಸಿಕೊಂಡಿದ್ದಾರೆ. ಒಂದು ಕ್ವಿಂಟಾಲ್ ಗೆ 3200 ರೂ, 4000 ರೂ, ಮತ್ತು 7000 ರೂ, ಹೀಗೆ ಮೂರು ಹಮತದ ಬೆಲೆಗಳಲ್ಲಿ ಮಾರಾಟ ಮಾಡಿ ಒಟ್ಟು 90 ಲಕ್ಷ ರೂ,ಗಳನ್ನು ಬಾಚಿಕೊಂಡಿದ್ದಾರೆ.

ಈರುಳ್ಳಿ ಜೊತೆಗೆ 20 ಆಹಾರ ವಸ್ತುಗಳು ದುಬಾರಿ

ಕಳೆದ ಹನ್ನೆರಡು ವರ್ಷಗಳಿಂದಲೂ ನಿರಂತರವಾಗಿ ವಾರ್ಷಿಕ 3500 ರಿಂದ 4000 ಸಾವಿರ ಪ್ಯಾಕೆಟ್ ಈರುಳ್ಳಿಯನ್ನು ಬೆಳೆಯುತ್ತಿರುವ ಮಲ್ಲಿಕಾರ್ಜುನ್ 2009 ರಲ್ಲಿ ಮಾತ್ರ ನಷ್ಟ ಅನುಭವಿಸಿದ್ದರು. ಬರೀ ಲಾಭವನ್ನೇ ಕಂಡಿದ್ದಾರೆ.

2013 ರಲ್ಲಿ ಒಂದು ಕೋಟಿ ರೂ, 2015 ರಲ್ಲಿ 50 ಲಕ್ಷ ರೂ, ಆದಾಯ ಗಳಿಸಿದ್ದರು. ನಂತರದ ವರ್ಷಗಳಲ್ಲಿ ಸಾಧಾರಣ ಲಾಭ ಕಂಡಿದ್ದರೂ ನಷ್ಟ ಎದುರಿಸಿಲ್ಲ. ಈ ವರ್ಷ ಬಂಪರ್ ಬೆಳೆ ತೆಗೆದು ಸಾಕಷ್ಟು ಲಾಭವನ್ನು ಗಳಿಸಿ ಇತರ ರೈತರಿಗೆ ಮಾದರಿಯಾಗಿದ್ದಾರೆ.

ಈರುಳ್ಳಿ ಬೆಲೆ ದಿಢೀರ್ ಕುಸಿತ, ಖರೀದಿ ಸ್ಥಗಿತ

12 ರಿಂದ 15 ಲಕ್ಷ ರೂ, ಮಾತ್ರ ಖರ್ಚಾಗಿದ್ದು, ಉಳಿದ 75 ಲಕ್ಷ ರೂ, ನಿವ್ವಳ ಲಾಭ ಈ ವರ್ಷ ಬಂದಿದೆ ಎಂದು ಹೇಳುತ್ತಾರೆ ರೈತ ಮಲ್ಲಿಕಾರ್ಜುನ್.

English summary
A farmer from siddavanahalli in Chitradurga taluk has grown 3700 packets of onions and got income Rs 90 Lakhs. Mallikarjuna a farmer, grew onions on his 20 acre land.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X