ಶನಿವಾರದಿಂದ ಲಾಲ್‌ಬಾಗ್ ನಲ್ಲಿ ದಾಳಿಂಬೆ ಮೇಳ

ಬೆಂಗಳೂರು, ಸೆ.27 : ಬೆಂಗಳೂರಿನ ಹಣ್ಣು ಪ್ರಿಯರಿಗೆ ಸಿಹಿ ಸುದ್ದಿ. ಮಾವು, ಹಲಸು, ಕಿತ್ತಳೆ ಮೇಳಗಳಿಗೆ ಪ್ರಸಿದ್ದಿ ಪಡೆದಿರುವ ಲಾಲ್‌ಬಾಗ್‌, ಶನಿವಾರದಿಂದ ದಾಳಿಂಬೆ ಮೇಳವನ್ನು ಆಯೋಜಿಸುತ್ತಿದೆ. ಇದೇ ಮೊದಲ ಬಾರಿಗೆ ಲಾಲ್‌ಬಾಗ್ ದಾಳಿಂಬೆ ಮೇಳ ಹಮ್ಮಿಕೊಂಡಿದೆ.

ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಹಾಗೂ ಇತರ ಇಲಾಖೆಗಳ ಸಹಯೋಗದಲ್ಲಿ ಸೆ.28ರಿಂದ ಒಂದು ವಾರ ದಾಳಿಂಬೆ ಮೇಳ ಲಾಲ್‌ಬಾಗ್ ನಲ್ಲಿ ನಡೆಯಲಿದೆ. ರಾಜ್ಯದಲ್ಲಿ ಈ ಬಾರಿ ದಾಳಿಂಬೆ ಬೆಳೆ ಉತ್ತಮ ಫಸಲು ನೀಡಿದೆ. ಆದ್ದರಿಂದ ದಾಳಿಂಬೆ ಮೇಳ ಆಯೋಜಿಸಲಾಗಿದೆ.

pomegranate

ಲಾಲ್‌ಬಾಗ್ ದಾಳಿಂಬೆ ಮೇಳದಲ್ಲಿ ಮಧ್ಯವರ್ತಿಗಳ ಹಾವಳಿಯಿಲ್ಲದೆ ರೈತರು ಮತ್ತು ಗ್ರಾಹಕರಿಗೆ ನೇರ ಮಾರುಕಟ್ಟೆ ವ್ಯವಸ್ಥೆ ಒದಗಿಸಲಾಗಿದೆ. ಹೊಸದುರ್ಗ, ಚಿತ್ರದುರ್ಗ, ಚಳ್ಳಕೆರೆ, ಕೊಪ್ಪಳ, ರಾಯಚೂರು, ಗದಗ, ಹಾವೇರಿ, ಬಿಜಾಪುರ, ಬಾಗಲಕೋಟೆ ಮುಂತಾದ ಜಿಲ್ಲೆಗಳ ರೈತರು ಮೇಳದಲ್ಲಿ ಭಾಗವಹಿಸಲಿದ್ದಾರೆ.

ಮೇಳದ ವಿಶೇಷ : ಮೊದಲ ಬಾರಿಯ ದಾಳಿಂಬೆ ಮೇಳದಲ್ಲಿ ಭಾಗ್ವ ಮತ್ತಿತರ ತಳಿಯ ಹಣ್ಣುಗಳು ದೊರೆಯಲಿವೆ. ಲಾಲ್‌ಬಾಗ್ ನ ಸಂಪಿಗೆ ಸಾಲು ಹಾಗೂ ಗಾಜಿನ ಮನೆಯ ಮೇಲ್ಭಾಗದಲ್ಲಿ 37 ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ.

ಹಣ್ಣು ಮಾರಾಟದ ಜೊತೆಗೆ ದಾಳಿಂಬೆ ಬೆಳೆಯ ಬಗ್ಗೆ ಮಾಹಿತಿ ಕಾರ್ಯಾಗಾರಗಳು, ನಾನಾ ತಳಿಗಳ ಪ್ರದರ್ಶನ, ರೋಗಗಳ ತಡೆ, ತೋಟಗಾರಿಕೆ ಇಲಾಖೆ ಯೋಜನೆಗಳ ಮಾಹಿತಿ ಮೇಳದಲ್ಲಿ ದೊರೆಯಲಿದೆ.

ಎಷ್ಟು ಬೆಳೆಯಿದೆ : ಕೊಪ್ಪಳ, ರಾಯಚೂರು, ಗದಗ, ಹಾವೇರಿ, ಬಿಜಾಪುರ, ಬಾಗಲಕೋಟೆ, ಹೊಸದುರ್ಗ ಸೇರಿದಂತೆ ರಾಜ್ಯದ 13 ಜಿಲ್ಲೆಗಳಲ್ಲಿ ಹೆಚ್ಚಾಗಿ ದಾಳಿಂಬೆ ಬೆಳೆಯಲಾಗುತ್ತದೆ. ರಾಜ್ಯದಲ್ಲಿ ಒಟ್ಟು 13,187 ಹೆಕ್ಟೇರ್ ಗೂ ಅಧಿಕ ಪ್ರದೇಶದಲ್ಲಿ ವಾರ್ಷಿಕ 1.38 ಲಕ್ಷ ಟನ್ ದಾಳಿಂಬೆ ಬೆಳೆಯಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+