ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಲ ಪುಷ್ಪ ಪ್ರದರ್ಶನಕ್ಕೆ ಲಾಲ್ ಬಾಗ್ ಸಿಂಗಾರ

By Staff
|
Google Oneindia Kannada News

ಬೆಂಗಳೂರು, ಜ.17: ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾ ಸಂಘದ ಆಶ್ರಯದಲ್ಲಿ ನಗರದ ಲಾಲ್ ಬಾಗ್ ನಲ್ಲಿ ಜ.17 ರಿಂದ 26ರವರೆಗೆ 'ಗಣರಾಜ್ಯೋತ್ಸವ ಫಲ ಪುಷ್ಪ ಪ್ರದರ್ಶನ' ನಡೆಯಲಿದೆ. 350ಕ್ಕೂ ಅಧಿಕ ಗಿಡಗಳು ಈ ಬಾರಿಯ ಫಲ ಪುಷ್ಪ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಲಿವೆ.

ಚಳಿಗಾಲದಲ್ಲಿ ಹೂ ಬಿಡುವ ಪೆಟೊನಿಯಾ, ಪಾಯಿನ್ ಸೀನಿಯಾ, ಇಂಪೇಷನ್ಸ್ ಇತ್ಯಾದಿ ಗಿಡಗಳು ವೀಕ್ಷಕರ ಹೃನ್ಮನಗಳನ್ನು ತಣಿಸಲಿವೆ. ಇದರೊಂದಿಗೆ ಊಟಿ, ನಂದಿ ಗಿರಿಧಾಮಗಳ ಅಪರೂಪದ ಹೂಗಳನ್ನೂ ಪ್ರದರ್ಶಿಸಲಾಗುತ್ತದೆ. ಉಗ್ರರ ಭೀತಿಯ ಹಿನ್ನೆಯಲ್ಲಿ ಫಲ ಪುಷ್ಪ ಪ್ರದರ್ಶನಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿದೆ ಎಂದು ತೋಟಗಾರಿಕೆ ನಿರ್ದೇಶಕ ಡಾ.ಜಿ.ಕೆ.ವಸಂತಕುಮಾರ್ ತಿಳಿಸಿದ್ದಾರೆ.

ಜ.17ರ ಮಧ್ಯಾಹ್ನ 3 ಗಂಟೆಗೆ ಫಲ ಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲಾಗುತ್ತದೆ. ಇಕೆಬಾನ, ತರಕಾರಿ ಕೆತ್ತನೆ, ಪುಷ್ಪ ಭಾರತಿ, ಬೋನ್ಸಾಯ್, ಡಚ್ ಹೂವಿನ ಜೋಡಣೆ, ಥಾಯ್ ಆರ್ಟ್ಸ್, ಒಣ ಹೂವಿನ ಜೋಡಣೆ ಸ್ಪರ್ಧಾ ಪ್ರದರ್ಶನಕ್ಕೆ ಜ.18ರಂದು ಮಧ್ಯಾಹ್ನ 3 ಗಂಟೆಗೆ ಡಾ.ಎಂ.ಎಚ್.ಮರಿಗೌಡ ಸ್ಮಾರಕ ಭವನದಲ್ಲಿ ಚಾಲನೆ ನೀಡಲಾಗುತ್ತದೆ. ಜ. 24ರಂದು ಶಾಲಾ ಮಕ್ಕಳಿಗೆ ಬೆಳಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

ಫಲ ಪುಷ್ಪ ಪ್ರದರ್ಶನದ ಟಿಕೆಟ್ ಗಳು ಲಾಲ್ ಬಾಗ್ ನ ಎಲ್ಲ ಪ್ರವೇಶ ದ್ವಾರಗಳಲ್ಲಿ ಸಂಜೆ 5 ಗಂಟೆಯ ವರೆಗೆ ಲಭ್ಯವಿರುತ್ತವೆ. ಗಾಜಿನ ಮನೆಯೊಳಗಿನ ಫಲ ಪುಷ್ಪ ಪ್ರದರ್ಶನ ಸಂಜೆ 7ರವರೆಗೆ ಸಾರ್ವಜನಿಕ ವೀಕ್ಷಣೆಗೆ ತೆರೆದಿರುತ್ತದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X