ಎಚ್ಡಿಕೆಯನ್ನು ಕೊಂಡಾಡಿದ ಸಚಿವ ಈಶ್ವರಪ್ಪ

ಗುಲ್ಬರ್ಗಾದ ನೆರೆ ಪೀಡಿತ ಪ್ರದೇಶಗಳಲ್ಲಿ ಭೇಟಿ ನೀಡಿ ಕುಮಾರಸ್ವಾಮಿ ಪರಿಶೀಲನೆ ನಡೆಸುತ್ತಿದ್ದರು. 15 ದಿನ ಆ ಭಾಗದಲ್ಲಿ ಅವರು ತಂಗಿದ್ದರು. ನಾನು ಸಹ ಅವರೊಂದಿಗೆ ಪರಿಶಿಲನೆಯಲ್ಲಿ ತೊಡಗಿದ್ದೆ. ಅಕ್ಕಪಕ್ಕದಲ್ಲೇ ನಾವು ತಂಗಿದ್ದೆವು, ನನ್ನ ಬಳಿಗೆ ಖುದ್ದಾಗಿ ಬಂದು ಮನವಿ ಸಲ್ಲಿಸಿದರು. ನೆರೆ ಪೀಡಿತ ಪ್ರದೇಶಗಳಲ್ಲಿನ ಪರಿಸ್ಥಿತಿ ಬಗ್ಗೆ ವಿವರಿಸಿದರು. ನಾನು ತಕ್ಷಣ ನಮ್ಮ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ವಿದ್ಯುತ್ ಕೊಡುವ ವ್ಯಸ್ಥೆ ಮಾಡಿದೆ ಎಂದು ಮನಸಾರೆ ಕುಮಾರಸ್ವಾಮಿಯವರ ಜನಪರ ಕಾಳಜಿಯನ್ನುಹಾಡಿ ಹೊಗಳಿದ್ದಾರೆ. ಕೆಪಿಟಿಸಿಎಲ್ ಇಂಜಿನಿಯರ್ಸ್ ಅಸೋಸಿಯೇಶನ್ಸ್ ಹೊರ ತಂದಿರುವ ಡೈರಿ ಬಿಡುಗಡೆ ಸಮಾರಂಭದಲ್ಲಿ ಈಶ್ವರಪ್ಪ ಮಾತನಾಡುತ್ತಿದ್ದರು.












Click it and Unblock the Notifications