Arecanut Price: ಭರ್ಜರಿ ಏರಿಕೆಯತ್ತ ಅಡಿಕೆ ಮತ್ತು ಕೊಬ್ಬರಿ ಬೆಲೆ!
ಈ ವರ್ಷ ಅಡಿಕೆ ಮತ್ತು ಕೊಬ್ಬರಿ ಮತ್ತು ಅಡಿಕೆ ಬೆಲೆ ಭರ್ಜರಿ ಏರಿಕೆಯಾಗುವ ಮುನ್ಸೂಚನೆ ಕೊಟ್ಟಿದೆ. ಸತತ ಬೆಲೆ ಕುಸಿತದಿಂದ ಕಂಗಾಲಾಗಿದ್ದ ಅಡಿಕೆ ಮತ್ತು ತೆಂಗು ಬೆಳೆಗಾರರು ಈಗ ಭರ್ಜರಿ ಲಾಭ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಕಳೆದ ವಾರ ನಿಧಾನವಾಗಿ ಏರಿಕೆಯಾಗುತ್ತಿದ್ದ ಕೊಬ್ಬರಿ ಬೆಲೆ ಈ ವಾರ ದಿಢೀರ್ ಏರಿಕೆ ಕಂಡಿದೆ.
ಅಡಿಕೆ ಬೆಲೆ ಕೂಡ ನಿಧಾನವಾಗಿ ಏರಿಕೆಯಾಗುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಶುಕ್ರವಾರ ಕೂಡ ಅಡಿಕೆ ಬೆಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಶಿವಮೊಗ್ಗದಲ್ಲಿ ಸರಕು ಅಡಿಕೆ ಬೆಲೆ ಕ್ವಿಂಟಲ್‌ಗೆ ಕನಿಷ್ಠ 53,000 ರೂಪಾಯಿ ಇದ್ದರೆ ಗರಿಷ್ಠ 93,500 ರೂಪಾಯಿಗೆ ಏರಿಕೆಯಾಗಿದೆ.

ಶಿವಮೊಗ್ಗದಲ್ಲಿ ರಾಶಿ ಅಡಿಕೆ ಬೆಲೆ ಕ್ವಿಂಟಾಲ್‌ಗೆ ಕನಿಷ್ಠ 32,166 ರೂಪಾಯಿ ಇದ್ದರೆ ಗರಿಷ್ಠ 52,299 ರೂಪಾಯಿಗೆ ಮಾರಾಟವಾಗಿದೆ. ಹೊಸನಗರ ಮಾರುಕಟ್ಟೆಯಲ್ಲಿ ಕನಿಷ್ಠ 49,779 ರೂಪಾಯಿ ಇದ್ದರೆ ಗರಿಷ್ಠ 52,989 ರೂಪಾಯಿ ಆಗಿದೆ.
ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ (ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಶಿರಸಿ | ರಾಶಿ | ₹40,088 | ₹47,619 | ₹43,454 |
| 2 | ಶಿರಸಿ | ಬೆಟ್ಟೆ | ₹26,011 | ₹37,499 | ₹30,587 |
| 3 | ಶಿರಸಿ | ಕೆಂಪು ಗೋಟು | ₹20,561 | ₹23,701 | ₹22,172 |
| 4 | ಶಿವಮೊಗ್ಗ | ಸರಕು | ₹53,000 | ₹93,500 | ₹63,999 |
| 5 | ಶಿವಮೊಗ್ಗ | ಗೊರಬಲು | ₹18,190 | ₹26,500 | ₹23,290 |
| 6 | ಶಿವಮೊಗ್ಗ | ರಾಶಿ | ₹32,166 | ₹52,299 | ₹50,289 |
| 7 | ಭದ್ರಾವತಿ | ರಾಶಿ | ₹20,199 | ₹52,400 | ₹49,006 |
| 8 | ಯಲ್ಲಾಪುರ | ತಟ್ಟಿ ಬೆಟ್ಟೆ | ₹28,000 | ₹38,899 | ₹34,599 |
| 9 | ಯಲ್ಲಾಪುರ | ಬಿಳೆ ಗೊಟು | ₹12,899 | ₹29,200 | ₹24,900 |
| 11 | ಯಲ್ಲಾಪುರ | ರಾಶಿ | ₹39,617 | ₹55,109 | ₹48,299 |
| 12 | ಯಲ್ಲಾಪುರ | ಕೆಂಪು ಗೋಟು | ₹14,899 | ₹27,969 | ₹22,969 |
| 13 | ಯಲ್ಲಾಪುರ | ಕೋಕಾ | ₹4,609 | ₹16,899 | ₹12,899 |
| 14 | ಯಲ್ಲಾಪುರ | ಚಾಲಿ | ₹30,299 | ₹38,666 | ₹36,699 |
| 15 | ಕಾರ್ಕಳ | ಹೊಸ ವೆರೈಟಿ | ₹25,000 | ₹40,000 | ₹30,000 |
| 16 | ದಾವಣಗೆರೆ | ರಾಶಿ | ₹24,000 | ₹24,000 | ₹24,000 |
| 17 | ಹೊಸನಗರ | ಕೆಂಪುಗೋಟು | ₹21,699 | ₹25,399 | ₹23,989 |
| 18 | ಹೊಸನಗರ | ಚಾಲಿ | ₹28,599 | ₹32,499 | ₹30,842 |
| 19 | ಹೊಸನಗರ | ರಾಶಿ | ₹49,779 | ₹52,989 | ₹51,689 |
ಕೊಬ್ಬರಿ ಧಾರಣೆ ಹೇಗಿದೆ?
2024ರಲ್ಲಿ 18,000 ರೂಪಾಯಿಗೆ ಏರಿಕೆಯಾಗಿ ಹೊಸ ದಾಖಲೆ ಬರೆದಿದ್ದ ಕೊಬ್ಬರಿ ಬೆಲೆ ಈ ವರ್ಷ ಕೂಡ ಮತ್ತೊಂದು ದಾಖಲೆ ಬರೆಯುವ ಮುನ್ಸೂಚನೆ ಕೊಟ್ಟಿದೆ. ಈಗಾಗಲೇ ತೆಂಗಿನಕಾಯಿ ಮತ್ತು ಎಳನೀರು ಬೆಲೆ ಗಗನಕ್ಕೇರಿದ್ದು ತೆಂಗು ಬೆಳೆಗಾರರಲ್ಲಿ ಸಂತಸ ಮೂಡಿಸಿದೆ.
ಶುಕ್ರವಾರ ದಾವಣಗೆರೆ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕ್ವಿಂಟಾಲ್‌ಗೆ ಕನಿಷ್ಠ 12,027 ರೂಪಾಯಿ ಇದ್ದರೆ ಗರಿಷ್ಠ 12,027 ರೂಪಾಯಿ ಆಗಿತ್ತು. ಅರಸೀಕೆರೆ ಮಾರುಕಟ್ಟೆಯಲ್ಲಿ ಗರಿಷ್ಠ 12,750 ರೂಪಾಯಿಗೆ ಮಾರಾಟವಾಗಿದೆ.
ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ಬೆಲೆ (ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ದಾವಣಗೆರೆ | ಕೊಬ್ಬರಿ | ₹12,027 | ₹12,027 | ₹12,027 |
| 2 | ಅರಸೀಕೆರೆ | ಮಿಲ್ಲಿಂಗ್ | ₹10,000 | ₹12,750 | ₹12,000 |
| 3 | ಅರಸೀಕೆರೆ | ಇತರೆ | ₹7,500 | ₹8,100 | ₹8,100 |












Click it and Unblock the Notifications