ಜೂನ್ ಅಂತ್ಯಕ್ಕೆ ಮುಂಗಾರು ಹಂಗಾಮು ಬಿತ್ತನೆಯಲ್ಲಿ ಶೇ 7ರಷ್ಟು ಏರಿಕೆ
ನವದೆಹಲಿ, ಜು.3: ದೇಶಾದ್ಯಂತ ಮುಂಗಾರು ಮಳೆ ಚುರುಕುಗೊಳ್ಳುತ್ತಿದ್ದಂತೆ ಕೃಷಿ ಚಟುವಟಿಕೆಗಳಲ್ಲಿ ಹೊಸ ಉತ್ಸಾಹ ಮೂಡಿದೆ. ಕಾರಣದಿಂದಲೇ ಕಳೆದ ಜೂನ್ ಅಂತ್ಯದ ವರೆಗೆ ದೇಶದಲ್ಲಿ ಮುಂಗಾರಿನ ಹಂಗಾಮಿನ (ಖಾರೀಫ್) ಬಿತ್ತನೆ ಏರಿಕೆ ಆಗಿದೆ.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷದ ಜೂನ್ ಅಂತ್ಯಕ್ಕೆ ಹತ್ತಿ, ಜೋಳ ಸೇರಿದಂತೆ ದ್ವಿದಳ ಧಾನ್ಯಗಳ ಬೆಳೆಗಳ ಬಿತ್ತನೆಯಲ್ಲಿ ಶೇ.7ರಷ್ಟು ಏರಿಕೆ ಕಂಡು ಬಂದಿದೆ. ಮುಂಗಾರು ಆರಂಭವಾದ ಹೊಸತರದಲ್ಲಿ ಮಂಕಾಗಿದ್ದ ಮಳೆ ನಂತರ ಚುರುಕೊಂಡಿದ್ದೆ ಖಾರಿಫ್ ಬೆಳೆ ಅಧಿಕ ಬಿತ್ತನೆಗೆ ಕಾರಣವಾಗಿದೆ.
ಆದರೆ ಭತ್ತಕ್ಕೆ ಹೆಚ್ಚು ನೀರಿನ ಅಗತ್ಯವಿದ್ದು ಅಷ್ಟಾಗಿ ಭತ್ತ ಬೆಳೆದಿರುವುದು ಕಂಡು ಬಂದಿಲ್ಲ ಎಂದು ಮೂಲಗಳು ತಿಳಿಸಿವೆ. ಮುಂಗಾರು ಹಂಗಾಮಿನ ಬೆಳೆಗಳಲ್ಲಿ ದ್ವಿದಳ ಧಾನ್ಯಗಳ ಬೆಳೆಗಳು ಬಿತ್ತನೆಯಲ್ಲಿ ಕಳೆದ ವರ್ಷ ಶೇ.4ರಷ್ಟು ಏರಿಕೆ ಕಂಡು ಬಂದಿತ್ತು.
ಈ ವರ್ಷ ಅದರ ಪ್ರಮಾಣ ಶೇ. 7ಕ್ಕೆ ಏರಿಕೆ ಕಂಡಿದೆ. ಜೂನ್ ಮೂರು ವಾರದಲ್ಲಿ ಬಿತ್ತನೆ ಅಷ್ಟಾಗಿ ಕಾಣದಿದ್ದರೂ ನಾಲ್ಕನೆ ವಾರದ ಜೂನ್ ಅಂತ್ಯಕ್ಕೆ ಭೂಮಿ ಹದವಾದ ಹಿನ್ನೆಲೆ ರೈತರು ಅಧಿಕ ಪ್ರಮಾಣದಲ್ಲಿ ಬಿತ್ತನೆ ಮಾಡಿದ್ದಾರೆ.

ಹತ್ತಿ ಬಿತ್ತನೆಯಲ್ಲಿ ಶೇ. 4ಏರಿಕೆ
ಕಡಲೆಕಾಯಿ, ಕಡಲೆ, ಸೋಯಾ, ಯಹೂದಿ ಸೇರಿದಂತೆ ದ್ವಿದಳ ಧಾನ್ಯಗಳ ಬಿತ್ತನೆಯಲ್ಲಿ ಏರಿಕೆ ಕಂಡು ಬಂದರೂ, ಉದ್ದಿನ ಬೇಳೆ, ತೊಗರಿ ಬೇಳೆ ಬೆಳೆಯ ಬಿತ್ತನೆ ಪ್ರಮಾಣ ಕಳೆದ ವರ್ಷಕ್ಕಿಂತಲೂ ಕಡಿಮೆ ಇದೆ. ಮುಂದಿನ ದಿನಗಳಲ್ಲಿ ಈ ಬೆಳೆಗಳ ಬಿತ್ತನೆಯಲ್ಲಿ ಏರಿಕೆ ಆಗುವ ನಿರೀಕ್ಷೆ ಇದೆ. ಜೂನ್ ಅಂತ್ಯಕ್ಕೆ ಹತ್ತಿ ಬಿತ್ತನೆಯಲ್ಲಿ ಶೇ.4ರಷ್ಟು ಏರಿಕೆ ಕಂಡು ಬಂದಿದೆ. ಈ ಅಂಕಿ ಅಂಶಗಳಿಗೆ ಪೂರಕವಾಗುವಷ್ಟು ಈ ಭಾರೀ ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಹತ್ತಿಯ ಅಧಿಕ ಬಿತ್ತನೆ ಆಗಿದೆ.

ಹಿಂದುಳಿದ ಬೃಹತ್ ಆಹಾರ ಧಾನ್ಯ
ಮುಂಗಾರು ಹಂಗಾಮಿನಲ್ಲಿ ಬಿತ್ತಲಾಗುವ ಬೃಹತ್ ಆಹಾರ ಧಾನ್ಯವಾದ ಭತ್ತ ಭಿತ್ತನೆಯಲ್ಲಿ ಅಷ್ಟಾಗಿ ಏರಿಕೆ ಕಂಡು ಬಂದಿಲ್ಲ. ಭತಕ್ಕೆ ಇತರ ಬೆಳೆಗಳಿಗಿಂತಲೂ ಹೆಚ್ಚಿಗೆ ನೀರು ಬೇಕಿರುವುದರಿಂದ ಪ್ರಸ್ತುತದಲ್ಲಿ ಭತ್ತ ಬಿತ್ತನೆಯಲ್ಲಿ ಏರಿಕೆ ಕಂಡು ಬಂದಿಲ್ಲ. ಮಳೆ ಬಂದು ಅಗತ್ಯ ನೀರು ನೋಡಿಕೊಂಡು ಭತ್ತ ಬಿತ್ತಲು ರೈತು ಕಾತರರಾಗಿದ್ದಾರೆ. ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ತಿಂಗಳಲ್ಲಿ ನಿರೀಕ್ಷಿತ ಭತ್ತ ಭಿತ್ತನೆ ಆಗಲಿದೆ ಎಂದು ತಿಳಿದು ಬಂದಿದೆ.

ಜುಲೈನಲ್ಲಿ ಉತ್ತಮ ಮಳೆ
ಪ್ರಸಕ್ತ ಜುಲೈ ತಿಂಗಳ ಹೊತ್ತಿಗಾಗಲೇ ದೇಶಾದ್ಯಂತ ಬಿತ್ತನೆ ಬಹುತೇಕ ಪೂರ್ಣಗೊಂಡಿರಬೇಕಿತ್ತು. ಆದರೆ ಮುಂಗಾರಿನ ಹೊಯ್ದಾಟದಿಂದ ಅದು ಸಾಧ್ಯವಾಗಿಲ್ಲ. ಇನ್ನು ಜುಲೈನಲ್ಲಿ ವಾಡಿಕೆ 28.4ಸೆಂ.ಮೀ.ನಷ್ಟು ಮಳೆಯಾಗಬೇಕಿದೆ. ಆದರೆ ಹವಾಮಾನದಲ್ಲಿ ಉಂಟಾಗುತ್ತಿರುವ ಬದಲಾವಣೆ ಗಮನಿಸಿದರೆ ಈ ತಿಂಗಳು ವಾಡಿಕೆಗಿಂತ ಅಧಿಕ ಮಳೆ ಆಗಬಹುದು. ಇದರಿಂದ ಜುಲೈ ಎರಡನೆ ವಾರದಲ್ಲಿ ಕೃಷಿ ಉತ್ಪನ್ನಗಳ ಹಂಗಾಮು ಬೆಳೆ ಬಿತ್ತನೆ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಜುಲೈ, ಆಗಸ್ಟ ನೀರ್ಣಾಯಕ?
ನೈಋತ್ಯ ಮುಂಗಾರು ಅವಧಿಯಲ್ಲಿ ಅತ್ಯಧಿಕ ಮಳೆ ಆಗಮನದ ತಿಂಗಳಾದ ಜುಲೈ ಮತ್ತು ಆಗಸ್ಟ್ ಮಳೆ ಕೃಷ್ಟಿ ಮಟ್ಟಿಗೆ ನೀರ್ಣಾಯಕ ಎಂದು ಹೇಳಲಾಗುತ್ತಿದೆ. ಈ ಎರಡು ತಿಂಗಳಲ್ಲಿ ಋತುವಿನ ಪ್ರತಿಶತ ಶೇ.60ರಷ್ಟು ಅಧಿಕ ಮಳೆ ಬೀಳುತ್ತದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ದೇಶದ ಅನೇಕ ರಾಜ್ಯಗಳಲ್ಲಿ ಮಳೆ ಕೊರತೆ ಇದೆ. ಹೀಗಾಗಿಯೇ ಜುಲೈನಲ್ಲಿ ದೇಶದ ಉತ್ತರ, ಮಧ್ಯ, ದಕ್ಷಿಣ ಪರ್ಯಾಯ ದ್ವೀಪ ಭಾಗದ ರಾಜ್ಯಗಳಲ್ಲಿ ಅತ್ಯಧಿಕ ಮಳೆ ನಿರೀಕ್ಷಿಸಲಾಗಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
Recommended Video
-
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ












Click it and Unblock the Notifications