• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಹುಲ್ ಗಾಂಧಿಯ ಒಂದೇ ಪತ್ರದಿಂದ ಕೇರಳ ರೈತರು ನಿರಾಳ

|
   ಪಿಣರಾಯಿ ವಿಜಯನ್ ಗೆ ರಾಹುಲ್ ಗಾಂಧಿ ಬರೆದ ಪತ್ರದಿಂದ ಕೇರಳದ ರೈತರು ನಿರಾಳ | Oneindia Kannada

   ತಿರುವನಂತಪುರಂ, ಮೇ 01: ಕೇರಳದ ವೈನಾಡು ಸಂಸದರಾದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೆಲವು ದಿನಗಳ ಹಿಂದಷ್ಟೆ ತಮ್ಮ ಲೋಕಸಭಾ ಕ್ಷೇತ್ರದ ರೈತ ದಿನೇಶ್ ಕುಮಾರ್‌ ಆತ್ಮಹತ್ಯೆ ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದರು.

   ರಾಹುಲ್ ಅವರ ಪತ್ರಕ್ಕೆ ಪ್ರತಿಕ್ರಿಯಿಸಿರುವ ಪಿಣರಾಯಿ ವಿಜಯನ್, ರೈತರ ಆತ್ಮಹತ್ಯೆ ಕುರಿತು ಶೀಘ್ರವೇ ತನಿಖೆ ಮಾಡುವುದಾಗಿ ಹೇಳಿದ್ದು, ರೈತರು ಒಂದು ವರ್ಷದ ಅವಧಿಯ ವರೆಗೆ ಬ್ಯಾಂಕಿನ ಬೆಳೆ ಸಾಲವನ್ನಾಗಲಿ, ಇತರೆ ಸಾಲವಾಗಲಿ ಹಾಗೂ ಬಡ್ಡಿಯನ್ನಾಗಲಿ ತೀರಿಸುವಂತಿಲ್ಲ ಎಂದು ಪ್ರಕಟಿಸಿದ್ದಾರೆ. ರಾಹುಲ್ ಅವರ ಒಂದು ಪತ್ರದಿಂದ ಕೇರಳದ ರೈತರಿಗೆ ಸಾಲದಿಂದ ತಾತ್ಕಾಲಿಕ ವಿಮುಕ್ತಿ ಸಿಕ್ಕಂತಾಗಿದೆ.

   ನಾನು ಪ್ರತಿದಿನ ಬಿಜೆಪಿ ವಿರುದ್ಧ ಹೋರಾಡುತ್ತೇನೆ : ರಾಹುಲ್ ಗಾಂಧಿ

   ರಾಹುಲ್ ಅವರ ಪತ್ರಕ್ಕೆ ಪ್ರತಿಕ್ರಿಯಿಸಿ ಪತ್ರ ಬರೆದಿರುವ ಪಿಣರಾಯಿ ವಿಜಯನ್ ಅವರು, ವೈನಾಡಿನ ರೈತ ವಿ.ಡಿ.ದಿನೇಶ್ ಕುಮಾರ್ ಸಾವಿನ ಕುರಿತು ತನಿಖೆ ನಡೆಸುವಂತೆ ಡಿಸಿ ಅವರಿಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.

   ಲೋಕಸಭೆಯಲ್ಲಿ ನೀವೂ ದನಿ ಎತ್ತಿ: ಪಿಣರಾಯಿ

   ಲೋಕಸಭೆಯಲ್ಲಿ ನೀವೂ ದನಿ ಎತ್ತಿ: ಪಿಣರಾಯಿ

   ಮುಂದುವರೆದು, ವಾಣಿಜ್ಯ ಬ್ಯಾಂಕುಗಳಿನ ರೈತರ ಸಾಲದ ವಿಷಯವು ಎಸ್‌ಎಆರ್‌ಎಫ್‌ಎಇ ಎಸ್‌ಐ ಕಾಯ್ದೆಯ ಅಡಿ ಬರುವಂತಹದ್ದಾಗಿದ್ದು, ಇದನ್ನು ಕೇಂದ್ರ ಸರ್ಕಾರವೇ ನಿರ್ವಹಿಸಬೇಕಿದೆ. ಹಾಗಾಗಿ ಈ ಬಗ್ಗೆ ಲೋಕಸಭೆಯಲ್ಲಿ ಧನಿ ಎತ್ತುವ ಅವಶ್ಯಕತೆ ಇದ್ದು, ತಾವುಗಳೂ ಸಹ ಈ ಚಳವಳಿಯಲ್ಲಿ ಭಾಗಿಯಾಗಬೇಕು ಎಂದು ಪಿಣರಾಯಿ ವಿಜಯನ್ ಅವರು ಕೋರಿಕೊಂಡಿದ್ದಾರೆ.

   ಬಿಜೆಪಿ ಹೊಡೆತಕ್ಕೆ ಕಂಗಾಲಾದ ಎನ್‌ಸಿಪಿ, ಕಾಂಗ್ರೆಸ್‌ನೊಂದಿಗೆ ವಿಲೀನ?

   ರೈತ ಆತ್ಮಹತ್ಯೆ ಕುರಿತು ಪತ್ರ ಬರೆದಿದ್ದ ರಾಹುಲ್

   ರೈತ ಆತ್ಮಹತ್ಯೆ ಕುರಿತು ಪತ್ರ ಬರೆದಿದ್ದ ರಾಹುಲ್

   ವೈನಾಡಿನ ನೀರವರಮ್‌ನ ದಿನೇಶ್ ಕುಮಾರ್ ಎಂಬ ರೈತ ಆತ್ಮಹತ್ಯೆಗೆ ಶರಣಾಗಿದ್ದರು. ರಾಹುಲ್ ಗಾಂಧಿ ಅವರು ಅವರ ಕುಟುಂಬದ ಜೊತೆ ಮಾತನಾಡಿದ್ದರು. ನಂತರ ಕೇರಳ ಸಿಎಂ ಪಿಣರಾಯಿ ವಿಜಯನ್ ಗೆ ಪತ್ರ ಬರೆದಿದ್ದ ರಾಹುಲ್ ಗಾಂಧಿ ರೈತರಿಗೆ ಆರ್ಥಿಕ ಸಹಾಯ ನೀಡಬೇಕೆಂದು ಒತ್ತಾಯಿಸಿದ್ದರು.

   ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ರೈತ ಸಾಲಮನ್ನಾ

   ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ರೈತ ಸಾಲಮನ್ನಾ

   ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕಡೆಯೆಲ್ಲಾ ರೈತರ ಸಾಲವನ್ನು ರಾಹುಲ್ ಗಾಂಧಿ ಮನ್ನಾ ಮಾಡಿದ್ದಾರೆ. ಆದರೆ ಕೇರಳದಲ್ಲಿ ಸಿಪಿಎಂ ಸರ್ಕಾರ ಚಾಲ್ತಿಯಲ್ಲಿದೆ. ಆದರೂ ಸಹ ತಮ್ಮ ಮನವಿಯಿಂದ ರೈತರಿಗೆ ಸಾಲದಿಂದ ತಾತ್ಕಾಲಿಕ ನೆಮ್ಮದಿಯನ್ನಾದರೂ ತಂದಿದ್ದಾರೆ. ಈ ನಿಟ್ಟಿನಲ್ಲಿ ಕೇರಳದ ಸಿಎಂ ಪಿಣರಾಯಿ ವಿಜಯನ್ ಅವರೂ ಸಹ ಅಭಿನಂದನಾರ್ಹರು.

   ರಾಜೀನಾಮೆಗೆ ಸಿದ್ಧವಿರುವ ರಾಹುಲ್ ಗೆ ಗೋಲ್ಡನ್ ಸಲಹೆ ನೀಡಿದ ಯಶವಂತ್ ಸಿನ್ಹಾ

   ಅಮೇಥಿ, ವೈನಾಡು ಎರಡು ಕ್ಷೇತ್ರದಿಂದ ರಾಹುಲ್ ಸ್ಪರ್ಧೆ

   ಅಮೇಥಿ, ವೈನಾಡು ಎರಡು ಕ್ಷೇತ್ರದಿಂದ ರಾಹುಲ್ ಸ್ಪರ್ಧೆ

   ರಾಹುಲ್ ಗಾಂಧಿ ಅವರು ಅಮೇಥಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಜೊತೆಗೆ ಕೇರಳದ ವೈನಾಡಿನಿಂದಲೂ ಚುನಾವಣೆಗೆ ಸ್ಪರ್ಧಿಸಿದ್ದರು. ಅಮೇಥಿಯಲ್ಲಿ ಸ್ಮೃತಿ ಇರಾನಿ ಎದುರು ಸೋತ ರಾಹುಲ್ ಗಾಂಧಿ, ವೈನಾಡಿನಲ್ಲಿ ದಾಖಲೆ ಮೊತ್ತದ ಅಂತರದಿಂದ ಚುನಾವಣೆ ಗೆದ್ದರು.

   ವೈನಾಡಿಗೆ ಮೊದಲ ಭೇಟಿ ನೀಡಲಿದ್ದಾರೆ ಸಂಸದ ರಾಹುಲ್‌

   ವೈನಾಡಿಗೆ ಮೊದಲ ಭೇಟಿ ನೀಡಲಿದ್ದಾರೆ ಸಂಸದ ರಾಹುಲ್‌

   ರಾಹುಲ್ ಗಾಂಧಿ ಅವರು ಜೂನ್ 7 ರಿಂದ ಎರಡು ದಿನಗಳ ಕಾಲ ತಮ್ಮ ಲೋಕಸಭಾ ಕ್ಷೇತ್ರ ವೈನಾಡಿಗೆ ಭೇಟಿ ನೀಡಲಿದ್ದಾರೆ. ಚುನಾವಣೆ ಗೆದ್ದ ಬಳಿಕ ಇದೇ ಮೊದಲ ಬಾರಿಗೆ ರಾಹುಲ್ ಗಾಂಧಿ ಅವರು ತಮ್ಮ ಲೋಕಸಭಾ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಎರಡು ದಿನಗಳ ಕಾಲ ಇಲ್ಲಿಯೇ ಇದ್ದು, ಮತದಾರರಿಗೆ ಧನ್ಯವಾದ ಅರ್ಪಿಸಲಿದ್ದಾರೆ.

   English summary
   Kerala CM Pinarayi Vijayan replies to Rahul Gandhi letter. Vijayan said government ready to give economic support to farmers, he also demand Rahul to raise voice in parliament.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X