'ನಿಮ್ಮ ಟ್ರ್ಯಾಕ್ಟರ್ ಸಿದ್ಧವಾಗಿಟ್ಟುಕೊಳ್ಳಿ'; ಮತ್ತೊಂದು ಆಂದೋಲನ ಬೇಕಾಗಿದೆ: ಟಿಕಾಯತ್
ಮುಜಫರ್‌ನಗರ ಆಗಸ್ಟ್ 1: ಭಾರತೀಯ ಕಿಸಾನ್ ಯೂನಿಯನ್‌ನ (ಬಿಕೆಯು) ರಾಕೇಶ್ ಟಿಕಾಯತ್ ಅವರು ಮತ್ತೊಂದು ರೈತ ಆಂದೋಲನದಲ್ಲಿ ಭಾಗವಹಿಸಲು "ನಿಮ್ಮ ಟ್ರ್ಯಾಕ್ಟರ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳಿ" ಎಂದು ರೈತರಿಗೆ ಮನವಿ ಮಾಡಿದರು. ಇದನ್ನು ಅವರು "ಅಗತ್ಯ" ಎಂದು ಕರೆದಿದ್ದಾರೆ.
ಪಕ್ಕದ ಜಿಲ್ಲೆಗಳಾದ ಶಾಮ್ಲಿ, ಬಾಗ್‌ಪತ್, ಬಿಜ್ನೋರ್ ಮತ್ತು ಸಹರಾನ್‌ಪುರ ಹೀಗೆ ಮುಜಾಫರ್‌ನಗರದ 11 ವಿವಿಧ ಸ್ಥಳಗಳಲ್ಲಿ ಪ್ರತಿಭಟನೆಗಳು ನಡೆದವು. ಈ ಸತ್ಯಾಗ್ರಹದಲ್ಲಿ ಟಿಕಾಯತ್ ಮಾತನಾಡಿದರು. ''ಸರಕಾರ ಎಂಎಸ್‌ಪಿ ಖಾತರಿ ಕಾನೂನನ್ನು ಜಾರಿಗೊಳಿಸಬೇಕು ಮತ್ತು 10 ವರ್ಷ ಹಳೆಯ ಟ್ರ್ಯಾಕ್ಟರ್‌ಗಳ ಮೇಲಿನ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ನಿಯಮಕ್ಕೆ ತಿದ್ದುಪಡಿ ತರಬೇಕು'' ಎಂದು ಒತ್ತಾಯಿಸಿದರು.
ಅಗ್ನಿಪಥ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, "ಯೋಜನೆಯನ್ನು ಒಳ್ಳೆಯದು ಎಂದು ಕರೆಯುವವರು ವರ್ಷಗಳಿಂದ ಸುರಕ್ಷಿತ ಸರ್ಕಾರಿ ಉದ್ಯೋಗವನ್ನು ಹೊಂದಿದ್ದಾರೆ. ಅವರು ಮೊದಲು ತಮ್ಮ ಕೆಲಸವನ್ನು ತ್ಯಜಿಸಬೇಕು ಮತ್ತು ನಂತರ ಯೋಜನೆಯನ್ನು ಪ್ರಶಂಸಿಸಬೇಕು" ಎಂದು ಹೇಳಿದರು. 'ರೈತರು ಇನ್ನೊಂದು ದೊಡ್ಡ ಆಂದೋಲನಕ್ಕೆ ಸಿದ್ಧರಾಗುವಂತೆ ಕೇಳಿಕೊಂಡಿದ್ದೇನೆ, ಅವರ 10 ವರ್ಷ ಹಳೆಯ ಟ್ರ್ಯಾಕ್ಟರ್‌ಗಳನ್ನು ತರುವಂತೆ ಹೇಳಿದ್ದೇನೆ' ಎಂದು ಹೇಳಿದರು.

ಬಿಕೆಯು ಎರಡು ಬಣ
ರೈತರ ನಾಯಕ ದಿವಂಗತ ಮಹೇಂದ್ರ ಸಿಂಗ್ ಟಿಕಾಯತ್ ಅವರ 11 ನೇ ಪುಣ್ಯತಿಥಿಯಂದು ಅವರು ರಚಿಸಿದ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಎರಡು ಬಣಗಳಾಗಿ ಒಡೆದಿದೆ. ಭಾನುವಾರ ಲಕ್ನೋದ ಶುಗರ್‌ಕೇನ್ ಇನ್‌ಸ್ಟಿಟ್ಯೂಟ್ ಸಭಾಂಗಣದಲ್ಲಿ ನಡೆದ ಬಿಕೆಯು ಕಾರ್ಯಕಾರಿ ಸಭೆಯಲ್ಲಿ ಮಹೇಂದ್ರ ಸಿಂಗ್ ಟಿಕಾಯತ್ ಅವರ ಇಬ್ಬರು ಮಕ್ಕಳಾದ ನರೇಶ್ ಟಿಕಾಯತ್ ಮತ್ತು ರಾಕೇಶ್ ಟಿಕಾಯತ್ ಅವರನ್ನು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಿಂದ ವಜಾಗೊಳಿಸಲಾಗಿದೆ. ನರೇಶ್ ಟಿಕಾಯತ್ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದಲೂ ತೆಗೆದುಹಾಕಲಾಗಿದೆ.

ರಾಜೇಶ್ ಸಿಂಗ್ ಚೌಹಾಣ್ ಹೇಳಿದ್ದೇನು?
ರಾಜೇಶ್ ಸಿಂಗ್ ಚೌಹಾಣ್ ಅವರನ್ನು ಬಿಕೆಯು (ರಾಜಕೀಯೇತರ)ನ ನೂತನ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಅವರು ಅಧ್ಯಕ್ಷರಾದ ತಕ್ಷಣ, ರಾಜೇಶ್ ಸಿಂಗ್ ಅವರು ನರೇಶ್ ಟಿಕಾಯಿತ್ ಮತ್ತು ರಾಕೇಶ್ ಟಿಕಾಯಿತ್ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರ ಮಾಡುವಂತೆ ಹೇಳಿದ್ದರು ಎಂದು ಅವರು ದೂರಿದ್ದಾರೆ.

ರೈತ ಪರ ಹೋರಾಟವೇ ನನ್ನ ಕೆಲಸ -ರಾಜೇಶ್ ಸಿಂಗ್
ರಾಜೇಶ್ ಸಿಂಗ್ ಚೌಹಾಣ್ ಅವರು ಬಿಕೆಯು (ರಾಜಕೀಯೇತರ)ರಾಷ್ಟ್ರೀಯ ಅಧ್ಯಕ್ಷರಾದ ನಂತರ ಲಕ್ನೋದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಅವರು 'ನನ್ನ 33 ವರ್ಷಗಳ ಸಂಘಟನೆಯ ಇತಿಹಾಸದಲ್ಲಿ ಈಗ ಭಾರತೀಯ ಕಿಸಾನ್ ಯೂನಿಯನ್ (ರಾಜಕೀಯೇತರ) ರಚನೆಯಾಗಿದೆ' ಎಂದಿದ್ದಾರೆ. 'ನಮ್ಮ ನಾಯಕ ರಾಕೇಶ್ ಟಿಕಾಯಿತ್ ರಾಜಕೀಯ ಪ್ರೇರಿತರಾಗಿ ಕಾಣಿಸಿಕೊಂಡರು. ನಮ್ಮ ನಾಯಕರು ಯಾವುದೋ ರಾಜಕೀಯ ಪಕ್ಷದ ಪ್ರಭಾವಕ್ಕೆ ಒಳಗಾಗಿ ಒಂದು ಪಕ್ಷದ ಪರ ಪ್ರಚಾರ ಮಾಡುವಂತೆ ಆದೇಶ ನೀಡಿರುವುದನ್ನು ನೋಡಿದ್ದೇವೆ. ನನ್ನ ಕೆಲಸ ರಾಜಕೀಯ ಮಾಡುವುದು ಅಥವಾ ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುವುದು ಅಲ್ಲ. ರೈತ ಪರ ಹೋರಾಟವೇ ನನ್ನ ಕೆಲಸ. ನಾನು ಯಾವುದೇ ವಿವಾದ ಸೃಷ್ಟಿಸಲು ಬಯಸುವುದಿಲ್ಲ. ಇದೊಂದು ಹೊಸ ಸಂಸ್ಥೆಯಾಗಿದೆ ಇದನ್ನು ಗೌರವಿಸಿ' ಎಂದಿದ್ದಾರೆ.

ಕೊನೆಯ ಉಸಿರು ಇರುವವರೆಗೂ ರೈತರಿಗಾಗಿ ಹೋರಾಟ
ಟಿಕಾಯತ್ ಸಹೋದರರು ಬಿಕೆಯುನಿಂದ ವಜಾಗೊಳಿಸಿದ ಬಳಿಕ ಮಾತನಾಡಿದ ಟಿಕಾಯತ್, 'ರೈತ ಚಳಿವಳಿಯನ್ನು ಒಡೆಯುವುದು ಸರ್ಕಾರದ ಕೆಲಸ. ಆದರೆ ನಾವು ಉಸಿರಿರುವವರೆಗೂ ರೈತರ ಪರ ಹೋರಾಟ ಮಾಡುತ್ತೇವೆ' ಎಂದಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್‌ನಲ್ಲಿ ಒಡಕು ಮೂಡಿಸುವುದು ಬಿಜೆಪಿ ಸರ್ಕಾರದ ಗುರಿಯಾಗಿದೆ. ರೈತರ ದನಿಯನ್ನು ಮತ್ತಷ್ಟು ಹೆಚ್ಚಿಸುವುದು ನಮ್ಮ ಧರ್ಮ. ಅವರ ಹಕ್ಕುಗಳನ್ನು ರಕ್ಷಿಸಿ. ನಮ್ಮ ಕೊನೆಯ ಉಸಿರು ಇರುವವರೆಗೂ ರೈತರ ಹೋರಾಟ ಮುಂದುವರಿಯಲಿದೆ ಎಂದರು.












Click it and Unblock the Notifications