ಪ್ರೊ ಎಂಡಿಎನ್ ನಂತರ ರೈತ ಚಳವಳಿ- ಭಾಗ 2: ಮಹಾ ಒಗ್ಗೂಡುವಿಕೆ ಪ್ರಕ್ರಿಯೆ ಆರಂಭ?
ಕೋಡಿಹಳ್ಳಿ ಚಂದ್ರಶೇಖರ್ ಬಣದಲ್ಲಿ ಕೆಲಕಾಲದಿಂದ ಚಂದ್ರು ಅವರ ಕಾರ್ಯಚಟುವಟಿಕೆಗಳ ಬಗ್ಗೆ ಅನೇಕರಿಗೆ ಅಸಮಾಧಾನವಿದ್ದದ್ದು ದಿಟ. ಕೆಲವರು ಪ್ರಶ್ನೆ ಮಾಡಿ ಹೊರಗೆ ಹೋದವರೂ ಇದ್ದಾರೆ. ಇನ್ನು ಕೆಲವು ಹಿರಿಯರು ಸಂಘಟನೆ ಒಡಕಾಗಬಾರದೆಂದು ಸಹಿಸಿಕೊಂಡು ಬಂದು ಪ್ರಜಾಪ್ರಭುತ್ವದ ನೆಲೆಯಲ್ಲಿ ಅಧ್ಯಕ್ಷರ ಬದಲಾವಣೆಯ ಬಗೆಗೂ ಪ್ರಯತ್ನಗಳು ನಡಿದಿದ್ದವು. ಕೋಡಿಹಳ್ಳಿ ಅದಕ್ಕೆ ಜಪ್ಪಯ್ಯ ಎಂದಿರಲಿಲ್ಲ.
ಎಂಟು ವರ್ಷಗಳ ಕಾಲ ತಾವೇ ಅಧ್ಯಕ್ಷರಾಗಿ ಮುಂದುವರೆದಿದ್ದರು. ಇದೀಗ ಈಚೆಗೆ ಖಾಸಗಿ ವಾಹಿನಿ ಸಿಡಿಸಿದ ಸ್ಟಿಂಗ್ ಆಪರೇಶನ್ ವಿಷುಯಲ್ಸ್ ಅಸಮಾಧಾನಗೊಂಡಿದ್ದ ಎಲ್ಲರಿಗೂ ಸಾರ್ವಜನಿಕವಾಗಿ ಕೋಡಿಹಳ್ಳಿ ಅವರ ವಿರುದ್ಧ ಮಾತನಾಡಲು ವೇದಿಕೆ ನೀಡಿತು.
ಖಾಸಗಿ ಟಿವಿಯ ಎರಡು ಎಪಿಸೋಡ್ ಮುಗಿಯುವಷ್ಟರಲ್ಲಿ ಕೋಡಿಹಳ್ಳಿ ಅವರ ಬಗ್ಗೆ ಮುನಿಸಿಕೊಂಡಿದ್ದ ಬೆಳಗಾವಿಯ ಚೂನಪ್ಪ ಪೂಜಾರಿ, ಕೋಲಾರದ ಅಬ್ಬಣಿ ಶಿವಪ್ಪ, ಚಿತ್ರದುರ್ಗದ ಸಿದ್ಧವೀರಪ್ಪ, ಚಾಮರಾಜನಗರದ ಹೊನ್ನೂರು ಪ್ರಕಾಶ್, ಕುರುವ ಗಣೇಶ್, ಮುನಿಯಪ್ಪ, ತರೀಕೆರೆ ಮಹೇಶ್, ದುಗ್ಗಪ್ಪಗೌಡ-ಚಿಕ್ಕಮಗಳೂರು, ಕೊಪ್ಪಳದ ನಜ಼ೀರ್ ಸಾಬ್ ಮೂಲಿಮನಿ, ರಾಯಚೂರಿನ ಹಮೀನ್ ಪಾಷಾ, ಮೈಸೂರಿನ ಕೋಟೆ ಪ್ರಕಾಶ್ ಸೇರಿದಂತೆ ಅನೇಕ ಹೋರಾಟಗಾರರು ಶಿವಮೊಗ್ಗದಲ್ಲಿ ಸಭೆ ಸೇರಿದರು.

ಕೋಡಿಹಳ್ಳಿ ಅಧ್ಯಕ್ಷ ಸ್ಥಾನದಿಂದ ವಜಾ
ಕೋಡಿಹಳ್ಳಿ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಮಾಡಿ ಸಂಘದ ಗೌರವಾಧ್ಯಕ್ಷರಾಗಿದ್ದ ಹೆಚ್ ಆರ್ ಬಸವರಾಜಪ್ಪ ಅವರನ್ನು ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಿದರು. ಕೋಡಿಹಳ್ಳಿ ಹೊರತುಪಡಿಸಿ ಬಾಕಿ ಎಲ್ಲಾ ಪದಾಧಿಕಾರಿಗಳ ಜವಾಬ್ಧಾರಿಗಳನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಲಾಯಿತು. ಇತ್ತ ಕೋಡಿಹಳ್ಳಿ ಅವರೊಂದಿಗೆ ಉಳಿದಿರುವ ಕೆಲವರು ಕೋಡಿಹಳ್ಳಿ ಅವರೇ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ಹೇಳಿದ್ದಾರೆ. ಈ ಎರಡೂ ಬೆಳವಣಿಗೆಗಳ ಬೆನ್ನಲ್ಲೇ ರೈತ ಚಳುವಳಿಯ ಆಂತರ್ಯದ ಸಂಗಾತಿಗಳ ನಡುವೆ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ. ಬಸವರಾಜಪ್ಪ ಅಧ್ಯಕ್ಷರೆಂದು ಘೋಷಣೆಯಾದ ಮೇಲೆ ತಮ್ಮ ಹಿರಿತನಕ್ಕೆ ತಕ್ಕುದಾಗಿ ಕೆಲವು ವಿಚಾರಗಳನ್ನು ಮುಕ್ತ ಮನಸ್ಸಿನಿಂದ ಹೇಳಿದ್ದಾರೆ.

ಮೂರು ಪ್ರಮುಖ ಅಂಶಗಳು
ಮೊದಲನೆಯದು ವ್ಯಕ್ತಿಯ ಹೆಸರಿನಲ್ಲಿ ಜೈಕಾರ ಕೂಗುವಂತಿಲ್ಲ. ''ಬಸವರಾಜಪ್ಪನವರಿಗೆ ಜೈ'' ಎಂದು ಹೇಳುವಂತಿಲ್ಲ. ರೈತ ಚಳವಳಿಗೆ ಜಯವಾಗಲಿ ಎಂದರೆ ಸಾಕು.
ಎರಡನೆಯದು ಯಾವುದೇ ಕರಪತ್ರ, ಬ್ಯಾನರ್ ಇತ್ಯಾದಿ ಪ್ರಚಾರ ಸಾಮಗ್ರಿಗಳಲ್ಲಿ ರೈತ ಸಂಘದ ಸಂಸ್ಥಾಪಕರಾದ ಹೆಚ್ ಎಸ್ ರುದ್ರಪ್ಪ, ಎಂಡಿ ನಂಜುಂಡಸ್ವಾಮಿ ಹಾಗೂ ಎನ್ ಡಿ ಸುಂದರೇಶ್ ಅವರ ಫೋಟೋಗಳನ್ನು ಹೊರತುಪಡಿಸಿ ಬೇರೆ ಯಾರದ್ದೂ ಫೋಟೋ ಹಾಕುವಂತಿಲ್ಲ.
ಮೂರನೆಯದು ರೈತ ಸಂಘದ ವಿವಿಧ ಬಣಗಳು ಒಂದಾಗುವ ನಿಟ್ಟಿನಲ್ಲಿ ಶ್ರಮಿಸುವುದಾಗಿಯೂ ಮುಖ್ಯವಾಗಿ ಎಲ್ಲಾ ಬಣಗಳೂ ಒಂದು ವೇದಿಕೆಯಡಿ ಬರುವುದಾದಲ್ಲಿ ತಾವು ಅಧ್ಯಕ್ಷ ಸ್ಥಾನ ಬಿಟ್ಟುಕೊಡುವುದಾಗಿಯೂ (ಅಗತ್ಯ ಬಿದ್ದರೆ) ಹೇಳಿದ್ದಾರೆ. ವಿಶೇಷವಾಗಿ ರೈತ ಚಳುವಳಿಯ ಮೂಲ ವಿಚಾರದಲ್ಲಿ ರಾಜ್ಯದಾಧ್ಯಂತ ಚಳುವಳಿ ಸಂಘಟಿಸಲು ಪ್ರವಾಸ ಕೈಗೊಳ್ಳುವುದಾಗಿಯೂ ಪ್ರಕಟಿಸಿದ್ದಾರೆ.

ಜಿಲ್ಲಾ ಕೇಂದ್ರಗಳಲ್ಲಿ ಬಹಳ ಗಟ್ಟಿಯಾದ ಧ್ವನಿಗಳಿವೆ
ಪ್ರಮುಖವಾಗಿ ಹೆಚ್ ಆರ್ ಬಸವರಾಜಪ್ಪ ಬಣ, ಬಡಗಲಪುರ ನಾಗೇಂದ್ರ ಬಣ ಜೊತೆಗೆ ನಮಗೆ ಅಧ್ಯಕ್ಷಗಿರಿಯೇ ಬೇಡ ಸಾಮೂಹಿಕ ನಾಯಕತ್ವದಲ್ಲಿ ಚಳುವಳಿ ಮುಂದುವರೆಸುತ್ತೇವೆಂಬ ಸುರೇಶ್ ಬಾಬು ಪಾಟೀಲ್, ಕೆ.ಟಿ. ಗಂಗಾಧರ್, ಚುಕ್ಕಿ ನಂಜುಂಡಸ್ವಾಮಿ, ಅನುಸೂಯಮ್ಮ, ನಂದಿನಿ ಜಯರಾಂ ಅವರನ್ನೊಳಗೊಂಡ ತಂಡದ ಜೊತೆಗೆ ಇನ್ನು ಜಿಲ್ಲಾ ಕೇಂದ್ರಗಳಲ್ಲಿ ಬಹಳ ಗಟ್ಟಿಯಾದ ಧ್ವನಿಗಳಿವೆ.

ಒಗ್ಗೂಡುವಿಕೆಯ ಪ್ರಕ್ರಿಯೆಗೆ ಯಾರು ಗಂಟೆ ಕಟ್ಟುತ್ತಾರೋ
ಈಗ ಒಗ್ಗೂಡುವ ಪ್ರಕ್ರಿಯೆ ಚಾಲೂ ಆಯಿತೆನ್ನಿ. ಕೆ.ಟಿ.ಗಂಗಾಧರ್, ಹೆಚ್ ಆರ್ ಬಸವರಾಜಪ್ಪ, ಚಾಮರಸ ಮಾಲಿ ಪಾಟೀಲ್, ವೀರಸಂಗಯ್ಯ, ಬಡಗಲಪುರ ನಾಗೇಂದ್ರ, ಅಬ್ಬಣಿ ಶಿವಪ್ಪ, ಕುರುಬೂರು ಶಾಂತಕುಮಾರ್, ಅನುಸೂಯಮ್ಮ, ನಂದಿನಿ ಜಯರಾಂ, ಸುನಂದ ಜಯರಾಂ, ಚುಕ್ಕಿ ನಂಜುಂಡಸ್ವಾಮಿ, ಆರ್ ಪಿ ವೆಂಕಟೇಶ್ ಮೂರ್ತಿ, ರಾಮಣ್ಣ ಕೆಂಚಳ್ಳೇರ, ಅಶೋಕ್ (ಸಿನೆಮಾ ನಟ), ಯಶವಂತರಾವ್ ಘೋರ್ಪಡೆ, ಕೆ.ಎಂ.ರಾಜೇಗೌಡ ಸೇರಿದಂತೆ ಜಿಲ್ಲಾ ಘಟಕದ ಎಲ್ಲಾ ಬಣಗಳ ಅಧ್ಯಕ್ಷರ ಜೊತೆಗೂ ಮಾತುಕತೆ ನಡೆಯಬೇಕಿದೆ. ಈ ಮಹಾ ಒಗ್ಗೂಡುವಿಕೆಯ ಪ್ರಕ್ರಿಯೆಗೆ ಯಾರು ಗಂಟೆ ಕಟ್ಟುತ್ತಾರೋ ಕಾದು ನೋಡಬೇಕು.

ರೈತ ಸಂಘಕ್ಕೊಂದು ಸಂವಿಧಾನ ರಚಿಸಿದ್ದರು
ಈ ಹಿಂದೆ ಪ್ರೊ ಎಂಡಿಎನ್ ರೈತ ಸಂಘಕ್ಕೊಂದು ಸಂವಿಧಾನ ರಚಿಸಿದ್ದರು. ಈಗ ಹೊಸಕಾಲದ ಅವಶ್ಯಕತೆಗೆ ಅನುಗುಣವಾಗಿ ಆ ಸಂವಿಧಾನಕ್ಕೆ ಸೇರಿಸುವ ಅಂಶಗಳಿದ್ದಲ್ಲಿ ಸೇರಿಸಿ ಸಂವಿಧಾನದ ಆಶಯಗಳು ಮುಕ್ಕಾಗದಂತೆ ಮಾಡಬೇಕು. ಅದಕ್ಕೂ ಒಂದು ''ರೈತ ಚಳವಳಿ ಸಂವಿಧಾನ'' ರಚನೆಗೆ ತಂಡ ಮಾಡಬೇಕು. ಈ ಬಗ್ಗೆ ಚರ್ಚಿಸಿ ಒಂದು ತೀರ್ಮಾನಕ್ಕೆ ಬರಲು ರೈತ ಮುಖಂಡರು, ರೈತ ಕಾಳಜಿಯುಳ್ಳ ಚಿಂತಕರ ಸಭೆ ಜರೂರು ಆಗಬೇಕಿದೆ. ಆ ಕೆಲಸಕ್ಕೂ ಚಾಲನೆ ಕೊಡುವವರಾರು? ಉತ್ತರ ಕಾಲದ ಗರ್ಭದಲ್ಲೇ ಅಡಗಿದೆ.
Recommended Video
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video











Click it and Unblock the Notifications