ನೈಸ್ ವಿರೋಧಿ ಪ್ರಭು ಸಾವು, ಸರ್ಕಾರಕ್ಕೆ ನೋಟಿಸ್

ಮೃತ ಸಿದ್ದಲಿಂಗ ಪ್ರಭು ಅವರ ಸಂಬಂಧಿ ಬಸಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಬಿ.ಎಸ್.ಪಾಟೀಲ್‌ರು, ರಾಜ್ಯ ಸರ್ಕಾರ, ರಾಜ್ಯ ಡಿಜಿ-ಐಜಿಪಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಮತ್ತು ತಲಗಟ್ಟಪುರ ಠಾಣೆಯ ಪೊಲೀಸ್ ನಿರೀಕ್ಷಕರಿಗೆ ನೋಟಿಸ್ ಜಾರಿ ಮಾಡಿದರು.
ಸಿದ್ದಲಿಂಗ ಪ್ರಭು ಪ್ರಕರಣ ದಾಖಲಾದ ನಂತರ ಕೈಗೊಂಡಿರುವ ಕ್ರಮದ ಕುರಿತ ವರದಿಯನ್ನು ಒಂದು ವಾರದೊಳಗೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾ. ಪಾಟೀಲ್ ಆದೇಶಿಸಿದ್ದಾರೆ.
ನೈಸ್ ವಿರೋಧಿ ಹೋರಾಟಗಾರ ಸಿದ್ದಲಿಂಗಪ್ರಭು ಕೊಲೆ ಪ್ರಕರಣ ತಲಗಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅ.17ರಂದು ಜರಗಿತ್ತು. ಈ ಸಂಬಂಧ ಮೃತರ ಪತ್ನಿ ಅ.20ರಂದು ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ಮತ್ತು ರುದ್ರೇಶ್ ಮತ್ತಿತತರ ವಿರುದ್ಧ ತಲಘಟ್ಟಪುರ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಮಾಜಿ ಪ್ರಧಾನಿ ದೇವೇಗೌಡ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದ್ದರು.












Click it and Unblock the Notifications