• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೈತರಿಗೆ ಆಘಾತ ನೀಡಿದ್ದ ಆದೇಶ ಹಿಂಪಡೆದ ಸರ್ಕಾರ

|

ಕೃಷಿ ಸಾಲ ಮಾಡಿಕೊಂಡಿರುವ ರೈತರು ಆತಂಕಗೊಳ್ಳುವಂಥ ಆದೇಶವೊಂದನ್ನು ಯಡಿಯೂರಪ್ಪ ಸರ್ಕಾರ ಹೊರಡಿಸಿತ್ತು. ಆದರೆ, ಕೃಷಿ ಸಾಲಗಳ ವಸೂಲಾತಿ ಕುರಿತಂತೆ ನೀಡಿದ್ದ ಆದೇಶವನ್ನು ಹಿಂಪಡೆದು, ಪರಿಷ್ಕೃತ ಆದೇಶವನ್ನು ಹೊರಡಿಸಲಾಗಿದ್ದು, ರೈತರು ನೆಮ್ಮದಿಯಿಂದ ನಿಟ್ಟುಸಿರುವ ಬಿಡುವಂತಾಗಿದೆ.

ನೆರೆಯಲ್ಲಿ ಮನೆ ಕಳೆದುಕೊಂಡವರಿಗೆ ಬರೆ ಕೊಟ್ಟ ರಾಜ್ಯ ಸರ್ಕಾರ!

ಕೃಷಿ ಸಾಲ ವಸೂಲಾತಿಗೆ ಸಿದ್ದರಾಮಯ್ಯ ಸರ್ಕಾರ ಹೇರಿದ್ದ ನಿರ್ಬಂಧವನ್ನು ಯಡಿಯೂರಪ್ಪ ಸರ್ಕಾರ ಹಿಂಪಡೆಯುತ್ತಿರುವುದಾಗಿ ಅಧಿಸೂಚನೆ ಹೊರಡಿಸಲಾಗಿತ್ತು. ಸಹಕಾರಿ ಸಂಘಗಳ ಸಾಲ ವಸೂಲಾತಿ ಗೆ ಸಿದ್ದರಾಮಯ್ಯ ಸರ್ಕಾರ ನಿರ್ಬಂಧಗಳನ್ನು ಹೇರಿತ್ತು. ಬರಗಾಲವಿದ್ದ ಕಾರಣ ಸಾಲ ವಸೂಲಾತಿ ಬೇಡ ಎಂದು ಸೂಚಿಸಿತ್ತು. ಈ ಸೂಚನೆಯನ್ನು ಯಡಿಯೂರಪ್ಪ ಸರ್ಕಾರ ಹಿಂಪಡೆದಿದ್ದು ಭಾರಿ ಪ್ರಮಾದಕ್ಕೆ ಕಾರಣವಾಗಿತ್ತು. ಈಗ ಅದೇಶವನ್ನು ಹಿಂಪಡೆಯಲಾಗಿದೆ. ಹಳೆ ಆದೇಶ ಹಾಗೂ ಈ ಕುರಿತಂತೆ ವಿಪಕ್ಷ ನಾಯಕರ ಪ್ರತಿಕ್ರಿಯೆ ಮುಂದೆ ಓದಿ

ಸಹಕಾರ ಇಲಾಖೆಯಿಂದ ಆದೇಶ

ಸಹಕಾರ ಇಲಾಖೆಯಿಂದ ಆದೇಶ

ಕೃಷಿ ಸಾಲಗಳ ವಸೂಲಾತಿ ಕುರಿತಂತೆ ನೀಡಿದ್ದ ಆದೇಶವನ್ನು ಹಿಂಪಡೆಯುವ ಕುರಿತಂತೆ ಉಂಟಾಗಿದ್ದ ಗೊಂದಲಕ್ಕೆ ಸಹಕಾರ ಸಚಿವರು ತೆರೆ ಎಳೆದಿದ್ದಾರೆ. ಉಲ್ಲೇಖಿತ 3 ರ ಪತ್ರವನ್ನು ಕೂಡಲೇ ತಡೆಹಿಡಿಯಲು ಆದೇಶಿದ್ದರ ಮೇರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತಡೆಹಿಡಿಯಲಾಗಿದೆ.

ಗೊಂದಲಕ್ಕೆ ಕಾರಣವಾಗಿದ್ದ ಆದೇಶ

ಗೊಂದಲಕ್ಕೆ ಕಾರಣವಾಗಿದ್ದ ಆದೇಶ

ಗೊಂದಲಕ್ಕೆ ಕಾರಣವಾಗಿದ್ದ ಹಳೆ ಆದೇಶದ ಪ್ರತಿ: ಸಹಕಾರ ಇಲಾಖೆಯಿಂದ ಆದೇಶ ಹೊರಡಿಸಲಾಗಿದ್ದ 27.12.2019ರ ಪತ್ರ ತಡೆ ಹಿಡಿಯುವ ಬಗ್ಗೆ, ಸಹಕಾರ ಬ್ಯಾಂಕ್‌ಗಳಲ್ಲಿ ರೈತರು ಪಡೆದಿದ್ದ ಕೃಷಿ ಸಾಲ ವಸೂಲಾತಿ ಮೇಲೆ ಹೇರಿದ್ದ ನಿರ್ಬಂಧ ವಾಪಾಸ್ ಪಡೆಯುವ ಬಗ್ಗೆ, ರೈತರಿಂದ ಸುಸ್ತಿ ಸಾಲ ವಸೂಲಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆದೇಶದಲ್ಲಿ ಹೇಳಲಾಗಿತ್ತು. ಆದರೆ, ಈಗ ಈ ಆದೇಶವನ್ನು ಹಿಂಪಡೆಯಲಾಗಿದೆ.

ಹಲವು ನಾಯಕರಿಂದ ವಿರೋಧ

ಹಲವು ನಾಯಕರಿಂದ ವಿರೋಧ

ಹಲವು ನಾಯಕರು ಸರ್ಕಾರದ ಈ ಕ್ರಮವನ್ನು ಖಂಡಿಸಿದ್ದು, ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, 'ಸರ್ಕಾರವು ರೈತರನ್ನು ಮುಗಿಸಲು ಹೊರಟಿದೆ' ಎಂದಿದ್ದಾರೆ.

ನೆರೆ-ಬರದಿಂದ ನಲುಗಿರುವ ರೈತರು

ನೆರೆ-ಬರದಿಂದ ನಲುಗಿರುವ ರೈತರು

ಸರ್ಕಾರದ ಆದೇಶದ ಪ್ರಕಾರ ಸಹಕಾರಿ ಬ್ಯಾಂಕ್‌ಗಳವರು ಸಾಲ ವಸೂಲಿಗೆ ರೈತರ ಮೈಮೇಲೆ ಬೀಳುತ್ತಾರೆ. ನೆರೆ-ಬರ ದಿಂದ ನಲುಗಿರುವ ರೈತ ಸಾಲಕಟ್ಟಲು ಹರಸಾಹಸ ಪಡಬೇಕಾಗುತ್ತದೆ.

English summary
State government orders to co operation banks to recover loans from farmers. Siddaramaiah and many leaders oppose government decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X