ಕಾಂಗ್ರೆಸ್ ಸಚಿವರಿಗೆ ಧಮ್ ಇಲ್ಲ- ಶೋಭಾ ಕರಂದ್ಲಾಜೆ

brace-for-power-cuts-from-dec-shobha-karandlaje
ಮಂಗಳೂರು, ಸೆ. 27: ದಿನಕ್ಕೆ 1,500 ಮೆಗಾವ್ಯಾಟ್ ವಿದ್ಯುತ್ ಬೇಕಾಗಿದೆ. ಆದರೆ ಕೇವಲ 200-300 ಮೆಗಾವ್ಯಾಟ್ ಉತ್ಪಾದನೆಯಾಗುತ್ತಿದೆ. ನಿಮಗೆಲ್ಲ ಗೊತ್ತಿರುವಂತೆ ಮುಂಗಾರು ಕೈಕೊಟ್ಟಿರುವುದೇ ಇದಕ್ಕೆ ಕಾರಣವಾಗಿದೆ. ಪವನ ವಿದ್ಯುತ್ತಿಗೆ ಗಾಳಿಯೂ ಜೋರಾಗಿ ಬೀಸುತ್ತಿಲ್ಲ. ಪರಿಸ್ಥಿತಿ ಹೀಗೇ ಮುಂದುವರಿದರೆ ಈ ಬಾರಿ ಡಿಸೆಂಬರಿನಿಂದಲೇ ವಿದ್ಯುತ್ ಇರುವುದಿಲ್ಲ' ಎಂದು ವಿದ್ಯುತ್ ಸಚಿವೆ ಶೋಭಾ ಕರಂದ್ಲಾಜೆ ಅವರು ಎಚ್ಚರಿಸಿದ್ದಾರೆ.

'ಸಾಮಾನ್ಯವಾಗಿ ಸೆಪ್ಟೆಂಬರ್-ಡಿಸೆಂಬರ್ ಅವಧಿಯಲ್ಲಿ ಗಾಳಿ ಜೋರಾಗಿದ್ದರೆ ವಿದ್ಯುತ್ ಉತ್ಪಾದನೆ ಸಲೀಸಾಗುತ್ತದೆ. ಆದರೆ ಅದ್ಯಾಕೋ ಜೋರಾಗಿ ಗಾಳಿಯೂ ಬೀಸುತ್ತಿಲ್ಲ. ಕಳೆದ ವರ್ಷ ಇದೇ ಅವಧಿಯಲ್ಲಿ ದಿನಾ 1,500 ಮೆಗಾವ್ಯಾಟ್ ಪವನ ವಿದ್ಯುತ್ ಉತ್ಪಾದನೆಯಾಗುತ್ತಿತ್ತು.

ಆದರೆ ಈ ಬಾರಿ ಕಳೆದೊಂದು ವಾರದಿಂದ ದಿನಾ ಕೇವಲ ಇನ್ನೂರೇ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇನ್ನು ಕಲ್ಲಿದ್ದಲು ಇಲ್ಲದೆ ಅಲ್ಲು ವಿದ್ಯುತ್ ಉತ್ಪಾದನೆಯಾಗುತ್ತಿಲ್ಲ. ಇದರಿಂದ ಪರಿಸ್ಥಿತಿ ಭೀಕರವಾಗಲಿದೆ' ಎಂದು ಶೋಭಾ ಆತಂಕ ವ್ಯಕ್ತಪಡಿಸಿದರು.

ಪರಿಸ್ಥಿತಿಯನ್ನು ನಿಭಾಯಿಸಲು 750 ಮೆಗಾವ್ಯಾಟ್ ವಿದ್ಯುತ್ ಖರೀದಿಗೆ ಪ್ರಯತ್ನಗಳು ನಡೆದಿವೆ. ಜನವರಿ ಬಳಿಕ ಗುಜರಾತಿನಿಂದ 250 ಮೆಗಾವ್ಯಾಟ್ ವಿದ್ಯುತ್ ಬರುತ್ತದೆ. ಈ ಮಧ್ಯೆ, ಡಿಸೆಂಬರಿನಿಂದ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ವಿದ್ಯುತ್ ಕಡಿತ ಜಾರಿಗಾಲಿದೆ ಎಂದು ಮುಂಬರುವ'ಕರಾಳ'ಪರಿಸ್ಥಿತಿಯ ಬಗ್ಗೆ ವಾಸ್ತವ ತೆರೆದಿಟ್ಟರು. ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಸೆ. 27 ರಂದು ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದೆ.

ಕಾಂಗ್ರೆಸ್ ಸಚಿವರಿಗೆ ಧಮ್ ಇಲ್ಲ: ಕೇಂದ್ರ ಸರಕಾರದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕಾಂಗ್ರೆಸ್ ಸಚಿವರಿಗೆ ದಮ್ ಇಲ್ಲ ಎಂದು ರಾಜ್ಯ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾಂಗ್ರೆಸ್ ಮುಖಂಡರಿಗೆ ಕಾವೇರಿ ನದಿ ನೀರಿಗಿಂತ ತಮ್ಮ ಖುರ್ಚಿಯೇ ಮುಖ್ಯವಾಗಿದೆ. ಕಾರ್ನಾಟಕಕ್ಕೆ ಅನ್ಯಾಯವಾದರೂ ಪರವಾಗಿಲ್ಲ. ನಮ್ಮ ಸ್ಥಾನ ಮಾತ್ರ ಭದ್ರವಾಗಿರಬೇಕು ಎಂಬ ಮನಸ್ಥಿತಿಯಿಂದ ಇನ್ನಾದರೂ ಹೊರಬಂದು ರಾಜ್ಯದ ಪರವಾಗಿ ಮಾತನಾಡಿ ಎಂದು ಶೋಭಾ ಹೇಳಿದರು.

ಹಿರಿಯ ನಾಯಕರಾದ ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ ಮುಂತಾದ ನಾಯಕರು ಕರ್ನಾಟಕದ ಪರಿಸ್ಥಿತಿಯನ್ನು ಕೇಂದ್ರದ ಮುಂದೆ ಸಮಗ್ರವಾಗಿ ಬಿಡಿಸಿಟ್ಟರೆ ನಂತರ ಅದನ್ನು ವಿರುದ್ಧ ಇತರರು ಪ್ರಶ್ನಿಸುವ ಮಾತೇ ಇಲ್ಲ. ಹೀಗಾಗಿ ಗಂಭೀರ ಪ್ರಯತ್್ನ ನಡೆಯಬೇಕು. ಪಕ್ಷಭೇದ ಮರೆತು ಹೋರಾಡಬೇಕು' ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+