ಗೋಹತ್ಯೆ ನಿಷೇಧ ಮಸೂದೆಗೆ ಜ್ಞಾನಪೀಠಿಗಳ ವಿರೋಧ

Karnad, URA oppose Anti Cow Slaughter bill
ಬೆಂಗಳೂರು, ಜೂ.29: ಮುಂಗಾರು ಅಧಿವೇಶನದಲ್ಲಿ ಉದ್ದೇಶಿತ ಗೋಹತ್ಯೆ ನಿಷೇಧ ಮಸೂದೆ ಮಂಡಿಸಿ, ಸದನದ ಒಪ್ಪಿಗೆ ಪಡೆಯಲುಮುಂದಾಗಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಕೋಮು ಸೌಹಾರ್ದ ವೇದಿಕೆ, ದಲಿತ ಮತ್ತು ರೈತ ಸಂಘಗಳು ತೀವ್ರ ಪ್ರತಿರೋಧ ತೋರಿ ಶಿವಾಜಿನಗರದಲ್ಲಿ ಜನಾಂದಲೋಲನ ಸಮಾವೇಶ ನಡೆಸಿದವು.

ಜಾನುವಾರು ಹತ್ಯೆ ನಿಷೇಧ ಮಸೂದೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು ಆರ್ ಅನಂತಮೂರ್ತಿ ಅವರು ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡುತ್ತಾ ಈ ಮಸೂದೆ ಜಾರಿಗೆ ಬಂದರೆ ಸರ್ಕಾರ ಅಪರಾಧಿಗಳಲ್ಲದವರನ್ನು ಅಪರಾಧಿಗಳನ್ನಾಗಿಸುತ್ತದೆ. ಹಿಂದುತ್ವವಾದಿ ಗೂಂಡಗಳ ಕಾನೂನುಬಾಹಿತ ಚಟುವಟಿಕೆಗಳಿಗೆ ಈ ಕಾಯಿದೆ ರಕ್ಷಣೆ ಒದಗಿಸುತ್ತದೆ ಎಂದರು.

ಈ ಮಸೂದೆ ಕೇವಲ ಅಲ್ಪ ಸಂಖ್ಯಾತರಿಗಳಲ್ಲದೆ ಹಿಂದೂಗಳಿಗೆ ಕೂಡ ನಷ್ಟ ಉಂಟು ಮಾಡುತ್ತದೆ. ಉಪಯೋಗವಿಲ್ಲದ ಹಸುಗಳು ರೈತನಿಗೆ ಭಾರವಾಗುತ್ತದೆ . ಆಹಾರ ವೈವಿಧ್ಯತೆಯ ಮೇಲೆ ಹಿಡಿತ ಸಾಧಿಸಲು ಉದ್ದೇಶಿಸಿದ್ದು, ಇದು ರೈತ ವಿರೋಧಿ ಕೃತ್ಯ ಎಂದು ಅನಂತಮೂರ್ತಿ ಪ್ರತಿಪಾದಿಸಿದರು.

ದೇವನೂರು ಕಿಡಿ: ಆರ್ ಎಸ್ ಎಸ್ ಕೈಗೊಂಬೆಯಾಗಿರುವ ಸರ್ಕಾರ, ಸಂವಿಧಾನವನ್ನೇ ತಿರುಚಲು ಯತ್ನಿಸುತ್ತಿದೆ. ಗೋಹತ್ಯೆ ನಿಷೇಧ ಕಾಯಿದೆ ಜಾರಿಕೊಂಡರೆ ಸಂವಿಧಾನಕ್ಕೆ ಅವಮಾನ ಎಂದು ದಲಿತ ಸಾಹಿತಿ ದೇವನೂರು ಮಹಾದೇವ ಅಭಿಪ್ರಾಯ ಪಟ್ಟರು.

ಸಂಪ್ರದಾಯದ ಹೆಸರಿನಲ್ಲಿ ಗೋಹತ್ಯೆ ನಿಷೇಧ, ಸಾಮಾಜಿಕ ಅಸ್ಪೃಶ್ಯತೆಗೆ ಇದು ದಾರಿ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇಂತಹ ಆಹಾರವನ್ನೇ ತಿನ್ನಬೇಕು, ಇಂಥಹದನ್ನು ಸೇವಿಸಬಾರದು ಎಂದು ಕಾನೂನು ರೂಪಿಸುವುದು ರೈತ ವಿರೋಧಿ ಧೋರಣೆ ಎಂದು ಹಿರಿಯ ನಾಟಕಕಾರ ಗಿರೀಶ್ ಕಾರ್ನಾಡ್ ಹೇಳಿದರು.

ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೆಎಸ್ ಪುಟ್ಟಣ್ಣಯ್ಯ, ವೈಎಸ್ ವಿ ದತ್ತಾ, ಸಾಹಿತಿ ಬಂಜಗೆರೆ ಜಯಪ್ರಕಾಶ್, ಪ್ರೊ. ರಹಮತ್ ತರೀಕೆರೆ, ಕಲ್ಕುಳಿ ವಿಠಲ ಹೆಗ್ಡೆ, ಬಿಟಿ ಲಲಿತಾನಾಯಕ್, ಜಾಫರ್ ಷರೀಫ್, ಶಾಸಕ ಶ್ರೀರಾಮರೆಡ್ಡಿ, ಕೋಡಿಹಳ್ಳೀ ಚಂದ್ರಶೇಖರ್, ಫಾ. ಮನೋಹರ್ ಚಂದ್ರಪ್ರಸಾದ್, ಇಲ್ಯಾಯಸ್ ಮಹಮದ್ ತುಂಬೆ, ರಾಜೇಂದ್ರ ಪ್ರಸಾದ್ ಶಿಂಧೆ ಸೇರಿದಂತೆ ಹಲವರು ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+