ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಸಾಲ ಮನ್ನಾ ಮಾಡಬೇಡಿ ಎಂದ ಕರಡಗೋಡು ಗ್ರಾಮದ ಸ್ವಾಭಿಮಾನಿ ರೈತ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

Recommended Video

ನನ್ನ ಸಾಲ ಮನ್ನಾ ಮಾಡಬೇಡಿ ಎಂದ ಕರಡಗೋಡು ಗ್ರಾಮದ ರೈತ | Oneindia kannada

ಚಿಕ್ಕಮಗಳೂರು, ಆಗಸ್ಟ್.13: "ನನ್ನ ಸಾಲ ಮನ್ನಾ ಮಾಡಬೇಡಿ. ಮಾಡಿದರೆ ಸ್ವಾಭಿಮಾನಕ್ಕೆ ಧಕ್ಕೆ ಬರುತ್ತದೆ" ಎಂದು ಮೂಡಿಗೆರೆ ತಾಲೂಕಿನ ಕರಡಗೋಡು ಗ್ರಾಮದ ರೈತ ಅಮರನಾಥ ಮುಖ್ಯಮಂತ್ರಿಗಳಿಗೆ, ಕೃಷಿ ಸಚಿವರಿಗೆ ಹಾಗೂ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ.

ರೈತರ ಸಾಲ ಮನ್ನಾ ಯಾರಿಗೆ ಸಿಗುತ್ತೆ, ಯಾರಿಗೆ ಸಿಗಲ್ಲ? ಇಲ್ಲಿದೆ ವಿವರ ರೈತರ ಸಾಲ ಮನ್ನಾ ಯಾರಿಗೆ ಸಿಗುತ್ತೆ, ಯಾರಿಗೆ ಸಿಗಲ್ಲ? ಇಲ್ಲಿದೆ ವಿವರ

"ನಾನು ಮಾಡಿದ ಸಾಲ ಮನ್ನಾ ಮಾಡಬೇಡಿ" ಎಂದು ಒತ್ತಾಯಿಸಿರುವ ಅಮರನಾಥ, ರಾಜ್ಯ ಸರ್ಕಾರ ರೈತರ ಒಂದು ಲಕ್ಷ ಸಾಲ ಮನ್ನಾ ಮಾಡಲು ಮುಂದಾಗಿದೆ. ಆದರೆ ನನ್ನ ಆತ್ಮಸಾಕ್ಷಿಗೆ ನಿಮ್ಮ ಸಾಲ ಮನ್ನಾ ಒಪ್ಪುವುದಿಲ್ಲ ಎಂದು ತಿಳಿಸಿದ್ದಾರೆ.

Karadagodu village farmer Amarnath says do not waive my debts

ಸರ್ಕಾರ ಸಾಲದಿಂದ ತಮ್ಮ ಹೆಸರು ಕೈ ಬಿಡುವಂತೆ ಒತ್ತಾಯಿಸಿರುವ ಅಮರನಾಥ, ರಾಜ್ಯದಲ್ಲೇ ಸಾಲ ಮನ್ನಾ ಬೇಡಾ ಎಂದು ಹೇಳಿದ ಮೊದಲ ರೈತನಾಗಿದ್ದಾರೆ. ಇವರು ಕರಗೋಡು ಗ್ರಾಮದ ಸ.ನಂ.8ರಲ್ಲಿ 11 ಎಕರೆ ಜಮೀನು ಹೊಂದಿದ್ದು, 2016 ರಲ್ಲಿ ಅವರು ಕರ್ನಾಟಕ ಬ್ಯಾಂಕ್ ನಲ್ಲಿ ನಾಲ್ಕು ಲಕ್ಷ ಸಾಲ ಮಾಡಿದ್ದರು.

ಅಂದಹಾಗೆ ಅಮರನಾಥ ಅವರು ಬಡ ರೈತರ ಸಾಲ ಮನ್ನಾ ಮಾಡಲು ಯಾವುದೇ ಅಭ್ಯಂತರವಿಲ್ಲ ಎಂದು ತಿಳಿಸಿದ್ದಾರೆ.

English summary
Mudigere taluk Karadagodu village farmer Amarnath says do not waive my debts. In this regard He wrote letter to Chief Minister, Agriculture Minister and District Administration also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X