ಅಕ್ಟೋಬರ್ 2ರಿಂದ ರೈಲ್ವೆ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಬ್ಯಾನ್

ನವದೆಹಲಿ, ಆಗಸ್ಟ್ 22 : ಭಾರತೀಯ ರೈಲ್ವೆ ಅಕ್ಟೋಬರ್ 2ರಿಂದ ಪ್ಲಾಸ್ಟಿಕ್ ನಿಷೇಧ ಮಾಡಲಿದೆ. ಮೊದಲ ಹಂತದಲ್ಲಿ ದೇಶದ 360 ಪ್ರಮುಖ ರೈಲು ನಿಲ್ದಾಣಗಳಲ್ಲಿ ಈ ನಿಷೇಧ ಜಾರಿಗೆ ಬರಲಿದೆ.

ನೀರಿನ ಬಾಟಲಿ ಸೇರಿದಂತೆ ಒಂದು ಬಾರಿ ಬಳಸುವ ಎಲ್ಲಾ ಬಗೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ರೈಲ್ವೆ ನಿಲ್ದಾಣ, ರೈಲುಗಳಲ್ಲಿ ನಿಷೇಧ ಮಾಡಲಾಗುತ್ತದೆ. ಅಕ್ಟೋಬರ್ 2ರಂದು ಗಾಂಧಿ ಜಯಂತಿ ಕಾರ್ಯಕ್ರಮದ ದಿನ ಈ ಕುರಿತು ಅಧಿಕೃತ ಆದೇಶ ಹೊರಡಿಸಲಾಗುತ್ತದೆ.

ಪ್ಲಾಸ್ಟಿಕ್ ನಿರ್ವಹಣೆ ಹಾಗೂ ಮರುಬಳಕೆಗೆ ರೈಲ್ವೆ ಇಲಾಖೆ ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇದರ ಭಾಗವಾಗಿ 360 ನಿಲ್ದಾಣಗಳಲ್ಲಿ 1853 ಪ್ಲಾಸ್ಟಿಕ್ ವಾಟರ್‌ ಬಾಟಲ್‌ಗಳನ್ನು ಪುಡಿ ಮಾಡುವ ಯಂತ್ರಗಳನ್ನು ಸ್ಥಾಪನೆ ಮಾಡಲಾಗಿದೆ.

Indian Railways Will Ban Plastic From October 2

ಪ್ಲಾಸ್ಟಿಕ್ ಮರುಬಳಕೆ ಮಾಡುವುದು, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ಪ್ಲಾಸ್ಟಿಕ್ ತಿರಸ್ಕಾರ ಮಾಡುವುದು ಎಂಬ ಮೂರು ಸೂತ್ರಗಳ ಅನ್ವಯ ಪ್ಲಾಸ್ಟಿಕ್ ನಿಷೇಧ ಮಾಡಲಾಗುತ್ತದೆ.

ಝೋನಲ್ ರೈಲ್ವೆ ಮ್ಯಾನೇಜರ್‌ಗಳಿಗೆ ಪ್ಲಾಸ್ಟಿಕ್ ಬಳಕೆ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ಕೊಡಲಾಗಿದೆ. ಪ್ಲಾಸ್ಟಿಕ್ ಹೊರತುಪಡಿಸಿ ಮರುಬಳಕೆ ಮಾಡಬಹುದಾದ ಚೀಲಗಳನ್ನು ಬಳಸುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.

ರೈಲ್ವೆ ನಿಲ್ದಾಣದ ಸ್ವಚ್ಛತೆಗೆ ಇಲಾಖೆ ಆದ್ಯತೆ ನೀಡಿದೆ. ಆದರೆ, ಪ್ಲಾಸ್ಟಿಕ್ ಚೀಲ, ನೀರಿನ ಬಾಟಲಿಗಳಿಂದಾಗಿ ನಿಲ್ದಾಣದ ಸ್ವಚ್ಛತೆಗೆ ಅಡಚಣೆಯಾಗಿದೆ. ಆದ್ದರಿಂದ, ನಿಲ್ದಾಣದಲ್ಲಿ ನೀರಿನ ಬಾಟಲ್ ನಿಷೇಧ ಮಾಡಲು ಇಲಾಖೆ ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+