ಸವದತ್ತಿ ಎಪಿಎಂಸಿ ಗೋದಾಮಿಗೆ ಬೆಂಕಿ: ಲಕ್ಷಾಂತರ ರೂ.ನಷ್ಟ
Recommended Video

ಬೆಳಗಾವಿಯ ಸವದತ್ತಿಯಲ್ಲಿ ಎಪಿಎಂಸಿ ಗೋದಾಮಿಗೆ ಬೆಂಕಿಗೆ ಆಹುತಿ
ಬೆಳಗಾವಿ, ಜೂನ್.19: ತಾಲೂಕಿನ ಸವದತ್ತಿ ನಗರದಲ್ಲಿರುವ ಎ.ಪಿ.ಎಂ.ಸಿ ಗೋದಾಮಿಗೆ ಬೆಂಕಿ ಬಿದ್ದ ಪರಿಣಾಮ ಅಪಾರ ಪ್ರಮಾಣದ ಹತ್ತಿ, ಗೋವಿನಜೋಳ ಮತ್ತು ಕಡಲೆ ಸಂಪೂರ್ಣ ಭಸ್ಮವಾದ ಘಟನೆ ಇಂದು ಮಂಗಳವಾರ ನಡೆದಿದೆ.
ಅಶೋಕ ಕಾಟನ್ ಟ್ರೇಡರ್ಸ್ ಗೆ ಸಂಬಂಧಿಸಿದ ಗೋದಾಮು ಇದಾಗಿದೆ ಎಂದು ತಿಳಿದು ಬಂದಿದ್ದು, ಗೋದಾಮಿನಲ್ಲಿನದ್ದ ಪದಾರ್ಥಗಳೆಲ್ಲವೂ ಭಸ್ಮವಾಗಿ ಸುಮಾರು 50 ಲಕ್ಷ.ರೂ. ಹಾನಿಯಾಗಿದೆ ಎನ್ನಲಾಗಿದೆ.
ಸುಮಾರು 1 ಸಾವಿರ ಕ್ವಿಂಟಲ್ ಹತ್ತಿ, 500 ಕ್ವಿಂಟಲ್ ಗೋವಿನ ಜೋಳ, 20 ಕ್ವಿಂಟಲ್ ಕಡಲೆ ಬೆಂಕಿಗೆ ಆಹುತಿಯಾಗಿವೆ. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದ್ದು, ಬೆಂಕಿ ತಗುಲಿರುವುದಕ್ಕೆ ಕಾರಣ ತಿಳಿದು ಬಂದಿಲ್ಲ. ಸವದತ್ತಿ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ ನಡೆದಿದೆ.

ಕಳೆದೆರೆಡು ವಾರಗಳ ಹಿಂದೆಯಷ್ಟೇ, ಮೈಸೂರಿನಲ್ಲಿರುವ ಪ್ರಸಿದ್ಧ ಸೈಕಲ್ ಪ್ಯೂರ್ ಅಗರಬತ್ತಿ ಗೋದಾಮಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಅಗರಬತ್ತಿ ಉಪಕರಣಗಳು ಬೆಂಕಿಗಾಹುತಿಯಾಗಿದ್ದವು.












Click it and Unblock the Notifications