ಮಳೆಯ ನಡುವೆಯೇ ಮುಂದುವರೆದಿದೆ ಎಚ್ಡಿಕೆ ಪಾದಯಾತ್ರೆ

ಧಾರವಾಡ, ಜೂ.26 : ಸಕ್ಕರೆ ಕಾರ್ಖಾನೆಗಳ ಗೋದಾಮುಗಳನ್ನು ಜಪ್ತಿ ಮಾಡುವ ಸರ್ಕಾರದ ಕ್ರಮ ರೈತರನ್ನು ದಾರಿ ತಪ್ಪಿಸುವ ತಂತ್ರ ಎಂದು ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಸುರಿಯುವ ಮಳೆಯ ನಡುವೆಯೇ ಎರಡನೇ ದಿನದ 26 ಕಿ.ಮೀ.ಪಾದಯಾತ್ರೆಯನ್ನು ಕುಮಾರಸ್ವಾಮಿ ಅವರು ಮುಂದುವರೆಸಿದ್ದಾರೆ.

ಕಿತ್ತೂರಿನಲ್ಲಿ ಶುಕ್ರವಾರ ಬೆಳಗ್ಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಗೆ ಮಾಲಪರ್ಣೆ ಮಾಡಿ ಎರಡನೇ ದಿನದ ಪಾದಯಾತ್ರೆಯನ್ನು ಕುಮಾರಸ್ವಾಮಿ ಅವರು ಆರಂಭಿಸಿದರು. ಕಿತ್ತೂರಿನಿಂದ ಎಂ.ಕೆ.ಹುಬ್ಬಳ್ಳಿ ತನಕ ಇಂದು ಕುಮಾರಸ್ವಾಮಿ ಅವರು ಪಾದಯಾತ್ರೆ ನಡೆಸಲಿದ್ದಾರೆ. [ಚಿತ್ರಗಳು : ಕುಮಾರಸ್ವಾಮಿ ಪಾದಯಾತ್ರೆ]

ಪಾದಯಾತ್ರೆ ಆರಂಭಕ್ಕೂ ಮುನ್ನ ಮಾತನಾಡಿದ ಕುಮಾರಸ್ವಾಮಿ ಅವರು, 'ಸರ್ಕಾರಕ್ಕೆ ಸಕ್ಕರೆ ದಾಸ್ತಾನು ಜಪ್ತಿ ಮಾಡಿ ಹರಾಜು ಹಾಕಿ ಹಣ ಸಂಗ್ರಹಿಸಲು ಒಂದು ತಿಂಗಳಾದರೂ ಬೇಕು. ಆದರೆ, ತುರ್ತಾಗಿ ರೈತರಿಗೆ ಬಾಕಿ ಹಣ ಬಿಡುಗಡೆ ಮಾಡಬೇಕಾದ ಸರ್ಕಾರ ನಾಟಕವಾಡುತ್ತಿದೆ' ಎಂದು ಆರೋಪಿಸಿದರು. [ಕುಮಾರಸ್ವಾಮಿ ಪಾದಯಾತ್ರೆ ಮಾರ್ಗಗಳು]

ಕಿತ್ತೂರಿನಿಂದ ಹೊರಟ ಕುಮಾರಸ್ವಾಮಿ ಅವರಿಗೆ ಮಳೆ ಎದುರಾಯಿತು. ಛತ್ರಿ ಹಿಡಿದುಕೊಂಡು ಅವರು ಪಾದಯಾತ್ರೆ ಮುಂದುವರೆಸಿದ್ದಾರೆ. ಸೊರಬ ಶಾಸಕ ಮಧು ಬಂಗಾರಪ್ಪ ಸೇರಿದಂತೆ ವಿವಿಧ ಜೆಡಿಎಸ್ ನಾಯಕರು ಪಾದಯಾತ್ರೆಯಲ್ಲಿ ಕುಮಾರಸ್ವಾಮಿ ಅವರ ಜೊತೆಗಿದ್ದಾರೆ. 2ನೇ ದಿನದ ಪಾದಯಾತ್ರೆಯ ಚಿತ್ರಗಳು

ಎರಡನೇ ದಿನದ ಪಾದಯಾತ್ರೆ ಆರಂಭ

ಎರಡನೇ ದಿನದ ಪಾದಯಾತ್ರೆ ಆರಂಭ

ಕಿತ್ತೂರಿನಲ್ಲಿ ಶುಕ್ರವಾರ ಬೆಳಗ್ಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಗೆ ಮಾಲಪರ್ಣೆ ಮಾಡಿ ಎರಡನೇ ದಿನದ ಪಾದಯಾತ್ರೆಯನ್ನು ಕುಮಾರಸ್ವಾಮಿ ಅವರು ಆರಂಭಿಸಿದರು. ಕಿತ್ತೂರಿನಿಂದ ಎಂ.ಕೆ.ಹುಬ್ಬಳ್ಳಿ ತನಕ ಇಂದು ಒಟ್ಟು 26 ಕಿ.ಮೀ. ಪಾದಯಾತ್ರೆ ನಡೆಯಲಿದೆ.

ಸರ್ಕಾರ ರೈತರ ದಾರಿ ತಪ್ಪಿಸುತ್ತಿದೆ

ಸರ್ಕಾರ ರೈತರ ದಾರಿ ತಪ್ಪಿಸುತ್ತಿದೆ

ಪಾದಯಾತ್ರೆ ಆರಂಭಕ್ಕೂ ಮೊದಲು ಮಾತನಾಡಿದ ಕುಮಾರಸ್ವಾಮಿ ಅವರು, 'ಸಕ್ಕರೆ ಕಾರ್ಖಾನೆಗಳ ಗೋದಾಮುಗಳನ್ನು ಜಪ್ತಿ ಮಾಡಿಕೊಂಡು ಹಣ ವಸೂಲಿ ಮಾಡುವ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಹೇಳುವ ರಾಜ್ಯ ಸರ್ಕಾರ ನಾಟಕವಾಡುತ್ತಿದೆ, ರೈತರ ದಾರಿ ತಪ್ಪಿಸುತ್ತಿದೆ' ಎಂದು ಆರೋಪಿಸಿದರು.

ಹಣ ಸಂಗ್ರಹಣೆ ಮಾಡಲು ಒಂದು ತಿಂಗಳು ಬೇಕು

ಹಣ ಸಂಗ್ರಹಣೆ ಮಾಡಲು ಒಂದು ತಿಂಗಳು ಬೇಕು

'ದಾಸ್ತಾನು ಜಪ್ತಿ ಮಾಡಿ ಹರಾಜು ಹಾಕಿ ಹಣ ಸಂಗ್ರಹಿಸಲು ಸರ್ಕಾರಕ್ಕೆ ಒಂದು ತಿಂಗಳಾದರೂ ಬೇಕು. ಆದರೆ, ರೈತರಿಗೆ ತುರ್ತಾಗಿ ಬಾಕಿ ಹಣ ಬೇಕಾಗಿದೆ. ಅದನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು' ಎಂದು ಕುಮಾರಸ್ವಾಮಿ ಅವರು ಒತ್ತಾಯಿಸಿದರು.

2 ಸಾವಿರ ಕೋಟಿ ಮೀಸಲಾಗಿಡಿ

2 ಸಾವಿರ ಕೋಟಿ ಮೀಸಲಾಗಿಡಿ

'ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕನಿಕರವಿದ್ದರೆ ರೈತರ ಬಾಕಿ ಹಣವನ್ನು ಪಾವತಿ ಮಾಡಲು ಕೂಡಲೇ ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿದ ಕುಮಾರಸ್ವಾಮಿ ಅವರು, ಕೂಡಲೇ 2 ಸಾವಿರ ಕೋಟಿ ಹಣವನ್ನು ಮೀಸಲಾಗಿಡಿ ಎಂದು ಒತ್ತಾಯಿಸಿದರು.

ಸುರಿಯುವ ಮಳೆಯ ನಡುವೆಯೇ ಪಾದಯಾತ್ರೆ

ಸುರಿಯುವ ಮಳೆಯ ನಡುವೆಯೇ ಪಾದಯಾತ್ರೆ

ಕಿತ್ತೂರಿನಿಂದ ಹೊರಟ ಕುಮಾರಸ್ವಾಮಿ ಅವರಿಗೆ ಮಳೆ ಎದುರಾಯಿತು. ಛತ್ರಿ ಹಿಡಿದುಕೊಂಡು ಅವರು ಪಾದಯಾತ್ರೆ ಮುಂದುವರೆಸಿದ್ದಾರೆ. ಇಂದು ಒಟ್ಟು 26 ಕಿ.ಮೀ.ಪಾದಯಾತ್ರೆ ನಡೆಸಲಿದ್ದು, ಎಮ್‌.ಕೆ.ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+