ಚಿತ್ರದುರ್ಗ: ಅಡಿಕೆ ಬೆಳೆಗಾರರು ಗಮನಿಸಲೇಬೇಕಾದ ಪ್ರಮುಖ ಮಾಹಿತಿ
ಚಿತ್ರದುರ್ಗ, ಆಗಸ್ಟ್, 25: ಇತ್ತಿಚಿನ ದಿನಗಳಲ್ಲಿ ಚಿತ್ರದುರ್ಗ ಜಿಲ್ಲೆಯ ಅಡಿಕೆ ಬೆಳೆಗಾರರು ಹಾಗೂ ಮಧ್ಯವರ್ತಿಗಳ ನಡುವೆ ತುಂಬಾ ಮೊಸ, ವಂಚನೆ ನಡೆಯುತ್ತಿದೆ. ಇದನ್ನು ತಡೆಗಟ್ಟಲು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಅಡಿಕೆ ಬೆಳೆಗಾರರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದ್ದಾರೆ. ಮಾಹಿತಿ ಇಲ್ಲಿದೆ ತಿಳಿಯಿರಿ.
ಚಿತ್ರದುರ್ಗ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ತಿಳಿಯಪಡಿವುದೇನೆಂದರೆ ಪ್ರಸಕ್ತ 2024ನೇ ಸಾಲಿನಲ್ಲಿ ಅಡಿಕೆ ಫಸಲು ಕೊಯ್ಲಿನ ಕಾಲ ಆರಂಭ ಆಗಿದೆ. ಅಡಿಕೆ ಬೆಳೆಗಾರರು ತಮ್ಮ ತೋಟಗಳಲ್ಲಿಯೇ ಅಡಿಕೆಯನ್ನು ಮಾರಾಟ ಮಾಡುತ್ತಿದ್ದಾರೆ. ಅಂದರೆ ತೋಟವನ್ನು ಕೇಣಿಗೆ ನೀಡುವುದು, ಹಸಿ ಅಡಿಕೆಯನ್ನೇ ಮಾರಾಟ ಮಾಡುವುದು. ಇಲ್ಲವೇ ಒಣ ಅಡಿಕೆ ತಯಾರಿಸಿ ಮಾರುವುದು ಇತ್ಯಾದಿ. ಇದೇ ರೀತಿಯಾಗಿ ಕಳೆದ ವರ್ಷಗಳಲ್ಲಿ ನಡೆದ ವಹಿವಾಟಿನಲ್ಲಿ ರೈತರಿಗೆ ವ್ಯಾಪಾರಸ್ಥರು ಸರಿಯಾಗಿ ಹಣವನ್ನು ಬಟವಾಡೆ ಮಾಡದೇ ಸತಾಯಿಸಿದ್ದಾರೆ.

ಈ ಬಗ್ಗೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ತನಿಖೆ ಕೂಡ ನಡೆಯುತ್ತಿದೆ. ಹಲವು ರೈತರು ವಂಚನೆಗೆ ಒಳಗಾಗಿರುತ್ತಾರೆ. ಈ ನಿಟ್ಟಿನಲ್ಲಿ ಕಳೆದ ಸಾಲಿನಲ್ಲಿ ಕೆಲವು ರೈತರಿಗೆ ಆಗಿರುವ ಕಹಿ ಅನುಭವದ ಹಿನ್ನೆಲೆ ಚಿತ್ರದುರ್ಗ ಜಿಲ್ಲೆಯ ಅಡಿಕೆ ಬೆಳೆಗಾರರಲ್ಲಿ ಕೋರುವುದೇನೆಂದರೆ, ಈ ಮೇಲ್ಕಂಡಂತೆ ಅಡಿಕೆ ಮಾರಾಟದ ಸಮಯದಲ್ಲಿ ಮುಂಗಡವಾಗಿ ಎಲ್ಲಾ ಹಣವನ್ನು ಪಡೆದು ಮಾರಾಟ ಮಾಡುವುದು ಉತ್ತಮ.
ರೈತರು ಬರೀ ನಂಬಿಕೆಗಳ ಮೇಲೆ ಇಲ್ಲವೇ ಚೀಟಿಗಳ ಮೇಲೆ ಬರೆದುಕೊಂಡು ವ್ಯವಹಾರ ನಡೆಸುತ್ತಿದ್ದು, ಈ ರೀತಿಯ ವಹಿವಾಟಿನಲ್ಲಿ ವ್ಯಾಪಾರಸ್ಥರು ರೈತರಿಗೆ ಹಣ ನೀಡದಿದ್ದಾಗ, ಕಾನೂನಿನ ಮೂಲಕ ರೈತರು ಹಣವನ್ನು ಪಡೆಯಲು ಸಾಧ್ಯ ಆಗುವುದಿಲ್ಲ.
ಆದ್ದರಿಂದ ರೈತರು ತಮ್ಮ ಅಡಿಕೆ ಮಾರುವ ಸಮಯದಲ್ಲಿ ಮುಂಗಡವಾಗಿ ಎಲ್ಲಾ ಹಣವನ್ನು ಪಡೆಯಲು ಸಾಧ್ಯ ಆಗದಿದ್ದರೆ, ವ್ಯಾಪಾರಸ್ಥರು ಅಥವಾ ಖೇಣಿದಾರರಿಂದ ಕಾನೂನಿನ ಅಡಿಯಲ್ಲಿ ಮಾನ್ಯತೆ ಪಡೆದಿರುವ Negotiable instrumentಗಳಾದ ಚೆಕ್ ಅಥವಾ ಪ್ರಾಮಿಸರಿ ನೋಟ್ ಅಥವಾ Bill of Exchangeನಂತಹ ಸೂಕ್ತ ಭದ್ರತೆ ಪಡೆದುಕೊಂಡು ವಂಚನೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಿ ತಮ್ಮ ಬೆಳೆಯನ್ನು ಮಾರಾಟ ಮಾಡಲು ಕೋರಿದೆ ಎಂದು ಪ್ರಕಟಣೆಯ ಮೂಲಕ ಎಸ್.ಪಿ.ರಂಜಿತ್ ಕುಮಾರ್ ಬಂಡಾರು ಮನವಿ ಮಾಡಿದ್ದಾರೆ.
ಒಟ್ಟಾರೆಯಾಗಿ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಅಡಿಕೆ ಬೆಳೆಗಾರರು ಆಗಾಗ ಮೋಸ ಹೋಗುತ್ತಲೇ ಇದ್ದಾರೆ. ಈ ಮೋಸದ ಜಾಲವನ್ನು ತಡೆಗಟ್ಟಲು ಜಿಲ್ಲಾ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಭಂಡಾರು ಅವರು ಅಡಿಕೆ ಬೆಳೆಗಾರರಿಗೆ ಪ್ರಕಟಣೆ ಮೂಲಕ ಜಾಗೃತಿ ಮೂಡಿಸುತ್ತಿರುವುದು ವಿಶೇಷವಾಗಿದೆ. ಈ ಪ್ರಕಟಣೆಯಂತೆ ರೈತರು ಸಹ ಎಚ್ಚೆತ್ತುಕೊಳ್ಳಬೇಕಾಗಿದೆ.
-
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್












Click it and Unblock the Notifications